varthabharthi

Social Media

ಮಿಸ್ ಕಾಲ್ ಕೊಟ್ರೆ ಪಕ್ಷಕ್ಕೆ ಮೆಂಬರ್ ಆಗೋ ಥರದಲ್ಲೇ, ಮಿಸ್ ಕಾಲ್ ಕೊಟ್ಟರೆ ಸೈನ್ಯಕ್ಕೆ ಸೇರಿಸಿಕೊಳ್ತೀವಿ ಅಂತ ಒಂದು ಕ್ಯಾಂಪೇನ್ ಮಾಡೋದೊಳ್ಳೇದು.

ದೇಶದ ಸೈನಿಕರ ಕೊರತೆ ನೀಗಿಸಲು ಹೀಗೊಂದು ದೇಶಪ್ರೇಮಿ ಐಡಿಯಾ !

ವಾರ್ತಾ ಭಾರತಿ : 2 Mar, 2016
- ದಯಾನಂದ್ ಟಿ.ಕೆ.

ಇಂಡಿಯಾದ ಸೈನ್ಯಶಕ್ತಿಯ ಬಲಕ್ಕೆ ಕೋಟ್ಯಾಂತರ ಸೈನಿಕರ ಅವಶ್ಯಕತೆಯಿದೆ. ಭೂಸೇನೆ, ವಾಯುಸೇನೆ, ನೌಕಾಪಡೆಯೂ ಸೇರಿದಂತೆ ಒಟ್ಟು 11 ಲಕ್ಷದ, 29 ಸಾವಿರದ 900 ಮಂದಿ ಸೈನ್ಯಸೇವೆಯಲ್ಲಿದ್ದಾರೆ. ಇದರಲ್ಲಿ ಪ್ರತೀವರ್ಷ ನಿವೃತ್ತರಾಗುವವರು, ಅಕಾಲಿಕ ಮರಣಕ್ಕೊಳಗಾದವರು, ಹುತಾತ್ಮರು, ಅಂಗವಿಕಲತೆಗಾಗಿ ವಿ.ಆರ್.ಎಸ್ ಪಡೆದವರು, ಸೈನ್ಯದಿಂದ ಓಡಿ ಬಂದವರು.. ಹೀಗೆ ಸೈನ್ಯಕ್ಕೆ ದಿನದಿನವೂ ಸೈನಿಕರ ಕೊರತೆ ಉಂಟಾಗುತ್ತಿರುತ್ತದೆ. ಇದನ್ನು ಬ್ಯಾಲೆನ್ಸ್ ಮಾಡಲು ಇಂಡಿಯನ್ ಆರ್ಮಿ ಪ್ರತೀವರ್ಷ ನೇಮಕಾತಿ Rallyಗಳನ್ನು ಹಮ್ಮಿಕೊಳ್ಳುತ್ತದೆ. ದುರಂತವೆಂದರೆ ಈ Rallyಗಳಲ್ಲಿ ಅರ್ಜಿಹಾಕಿ ಸ್ಪರ್ಧೆಯನ್ನೆದುರಿಸಿ ಸೈನ್ಯಕ್ಕೆ ಸೇರಲು ನಗರಪ್ರದೇಶಗಳ ಯುವಸಮುದಾಯ ಬೆನ್ನು ತಿರುಗಿಸಿದೆ. ಕೊರತೆಯಿರುವ ಸೈನಿಕರನ್ನು ಸರಿದೂಗಿಸಿಕೊಳ್ಳುವುದು ಇಂಡಿಯನ್ ಆರ್ಮಿಗೆ ದೊಡ್ಡ ತಲೆನೋವಾಗಿ ಪರಿಣಮಿಸಿದೆ.

ಈ ಸಮಸ್ಯೆಯನ್ನು ಒಂದು ಬಗೆಯಲ್ಲಿ ಪರಿಹರಿಸಿಕೊಳ್ಳಬಹುದು..

ಆರ್ಮಿ ಸೇವೆಗೆ ಸಂಬಂಧಿಸಿದಂತೆ ಒಂದು ಕಾನೂನಿದೆ. "ಕಾನ್ ಸ್ಕ್ರಿಪ್ಷನ್ ಕಾನೂನು" ಇದು ಹೇಳುವಂತೆ ದೇಶದ ಪ್ರತೀ ಮನೆಯ ಯುವಕ-ಯುವತಿಯೂ ಕಡ್ಡಾಯವಾಗಿ ಎರಡರಿಂದ ಮೂರು ವರ್ಷ ಸೇನೆಯಲ್ಲಿ ಸೈನಿಕರಾಗಿ ಸೇವೆ ಸಲ್ಲಿಸಲೇಬೇಕು. ಇದನ್ನು "ಮ್ಯಾಂಡೇಟರಿ ಮಿಲಿಟರಿ ಸರ್ವೀಸ್", "ಕಂಪಲ್ಸರಿ ಮಿಲಿಟರಿ ಸರ್ವೀಸ್" ಎಂದೂ ಕರೆಯುತ್ತಾರೆ. ಇವರಿಗೆ 6ತಿಂಗಳು ಶಿಸ್ತುಬದ್ಧ ತರಬೇತಿ ಕೊಟ್ಟು ಎರಡೂವರೆ ವರ್ಷ ಸೈನ್ಯಕ್ಕೆ ಕಳಿಸಲಾಗುತ್ತದೆ. ಈ ಪದ್ದತಿ ಬ್ರೆಜಿಲ್, ಜರ್ಮನಿ, ಫಿನ್ಲೆಂಡ್, ಇರಾನ್, ಕೊರಿಯ, ರಷ್ಯಾ, ಟರ್ಕಿ, ಲಿಬಿಯಾ, ಚೈನಾ, ಆಸ್ಟ್ರಿಯಾ, ಸಿಂಗಪೂರ್, ಥೈಲ್ಯಾಂಡ್, ಸ್ವಿಟ್ಜರ್ ಲ್ಯಾಂಡ್" ದೇಶಗಳಲ್ಲಿ ಇವತ್ತಿಗೂ ಚಾಲ್ತಿಯಲ್ಲಿದೆ. ನಮ್ಮ ದೇಶದಲ್ಲಿ ಇಲ್ಲ..

ಕಾನೂನನ್ನು ಕೇಂದ್ರದ ಬಿಜೆಪಿ ಸರ್ಕಾರ ಈ ಕೂಡಲೇ ಜಾರಿಗೊಳಿಸಿದರೆ ತುಂಬ ಒಳ್ಳೆಯದು. ಈ ಲೆಕ್ಕದಲ್ಲಿ ದೇಶದ ನೂರಾ ಮುವ್ವತ್ತು ಕೋಟಿಯಲ್ಲಿ ಒಂದು ಪರ್ಸೆಂಟ್ ಮಂದಿ ಸೈನ್ಯಕ್ಕೆ ಸೇರಿದರೂ ಅದು ಒಂದು ಕೋಟಿ ಮುವ್ವತ್ತು ಲಕ್ಷ ಸೈನಿಕರು ಸೈನ್ಯಕ್ಕೆ ದೊರೆಯುತ್ತಾರೆ. ಆರೆಸ್ಸೆಸ್ ನ 51,330 ಶಾಖೆಗಳಲ್ಲಿ 60 ಲಕ್ಷ ಸ್ವಯಂಸೇವಕರು, ದುರ್ಗಾವಾಹಿನಿ, ಭಜರಂಗದಳ, ವಿಶ್ವ ಹಿಂದೂ ಪರಿಷತ್ ನ ದೇಶಭಕ್ತರೆಲ್ಲರನ್ನೂ ಸೈನ್ಯಕ್ಕೆ ಸೇರಿಸಿದರೆ ಸೈನಿಕರ ಕೊರತೆಯೂ ನೀಗುತ್ತದೆ. ಅವರ ದೇಶಭಕ್ತಿ ಲೋಕವಿಖ್ಯಾತಗೊಳ್ಳುತ್ತದೆ. ಮಿಸ್ ಕಾಲ್ ಕೊಟ್ರೆ ಪಕ್ಷಕ್ಕೆ ಮೆಂಬರ್ ಆಗೋ ಥರದಲ್ಲೇ, ಮಿಸ್ ಕಾಲ್ ಕೊಟ್ಟರೆ ಸೈನ್ಯಕ್ಕೆ ಸೇರಿಸಿಕೊಳ್ತೀವಿ ಅಂತ ಒಂದು ಕ್ಯಾಂಪೇನ್ ಮಾಡೋದೊಳ್ಳೇದು. ಆದ್ದರಿಂದ ಬಿಜೆಪಿ ಸರ್ಕಾರ ಈ "ಕಡ್ಡಾಯ ಸೇನೆ ಸೇವೆ" ಕಾನೂನನ್ನು ಈಗಿಂದೀಗಲೇ ಜಾರಿಗೊಳಿಸಿದ್ರೆ ಅವರಿಗೆ ದೇಶಪ್ರೇಮ ಇದೆ ಅಂತ ಒಪ್ಪಬಹುದು.. ಅವ್ರು ಜಾರಿ ಮಾಡೊಲ್ಲ.. ಯಾಕಂದ್ರೆ.. ಆವಾಗ..

ಪೊಲಿಟಿಶಿಯನ್ಸ್ ಮಕ್ಕಳು, ಫೋರ್ಬ್ ಪಟ್ಟಿಯಲ್ಲಿರೋ ಶ್ರೀಮಂತರ ಮಕ್ಕಳು, ಐಎಎಸ್ ಐಪಿಎಸ್ ಅಧಿಕಾರಿಗಳ ಮಕ್ಕಳು, ಬ್ಯುಸಿನೆಸ್ ಮನ್ ಗಳ ಮಕ್ಕಳು ಎಲ್ರೂ ಕಂಪಲ್ಸರಿಯಾಗಿ ಸೈನ್ಯ ಸೇರಿ ಗಡಿ ಕಾಯೋಕೆ ಹೋಗಿ ಹೆಣವಾಗಿ ವಾಪಸ್ ಬರ್ತಾರಲ್ಲ.. ಅದಕ್ಕೇ..

ಇಂಡಿಯಾದಲ್ಲಿ "ಕಾನ್ ಸ್ಕ್ರಿಪ್ಷನ್ ಲಾ" ಇನ್ನೂ ಜಾರಿಯಾಗಿಲ್ಲ.. ಬದಲಾಗಿ ದೇಶದ ಪಾವರ್ಟಿ ರಿಡನ್ ತಾಲ್ಲೋಕುಗಳಲ್ಲಿ.. ಸೇನೆ ನೇಮಕಾತಿ Rallyಗಳು ನಡೆಯುತ್ತವೆ.. ನಡೆಯುತ್ತಲೇ ಇರುತ್ತವೆ. ಅಂದ್ಹಾಗೆ ಅಮೀನ್ ಮಟ್ಟು ಇನ್ನೂ ಅರೆಸ್ಟ್ ಆಗಿಲ್ವ.. ?

                                                                                       

 

- ದಯಾನಂದ್ ಟಿ.ಕೆ. 

‘ವಾರ್ತಾ ಭಾರತಿ’ ನಿಮಗೆ ಆಪ್ತವೇ ? ಇದರ ಸುದ್ದಿಗಳು ಮತ್ತು ವಿಚಾರಗಳು ಎಲ್ಲರಿಗೆ ಉಚಿತವಾಗಿ ತಲುಪುತ್ತಿರಬೇಕೇ? 

ಬೆಂಬಲಿಸಲು ಇಲ್ಲಿ  ಕ್ಲಿಕ್ ಮಾಡಿ

Comments (Click here to Expand)