varthabharthi

Social Media

ಭಕ್ತ್.. ಜನೋಂ..ಕೇ.. ಸಂಕಟ್...

ವಾರ್ತಾ ಭಾರತಿ : 19 Mar, 2016
ದಯಾನಂದ್ ಟಿ. ಕೆ.

ನಮ್ಮ ಮನೆ ಮಗನೇ ಪ್ರಧಾನಿ ಆಗ್ತಿದ್ದಾನೇನೋ ಅನ್ನೋಷ್ಟು ಸಂಭ್ರಮಪಟ್ಟು ಈ ದೇಶದ ಮಧ್ಯಮವರ್ಗ ಬಿಜೆಪಿಯ ಪರವಾಗಿ ತುತ್ತೂರಿ ಊದಿಕೊಂಡು ಸಪೋರ್ಟಿಗೆ ನಿಂತಿತ್ತಲ್ಲ.. ಅದೇ ಮಿಡಲ್ ಕ್ಲಾಸ್ ಗೆ ಇದೀಗ ಬಿಜೆಪಿ.. ಬೆನ್ನಿಗೆ ಚೂರಿ ಹಾಕಿದೆ. ಸಣ್ಣಮಟ್ಟದ ಉದ್ಯೋಗದಲ್ಲಿದ್ದುಕೊಂಡು ಸ್ವಂತಮನೆ, ಮಗಳ ಮದುವೆ, ಖಾಯಿಲೆಕಸಾಲೆ ಚಿಕಿತ್ಸೆಗೆಂದು ಪೋಸ್ಟ್ ಆಫೀಸ್, ಪ್ರಾವಿಡೆಂಡ್ ಫಂಡ್, ಕಿಸಾನ್ ವಿಕಾಸ ಪತ್ರಗಳ ರೂಪದಲ್ಲಿ ಸೇವಿಂಗ್ಸ್ ಮಾಡ್ತಿದ್ರಲ್ಲ.. ಅದಕ್ಕಿದ್ದ ಬಡ್ಡಿರೇಟನ್ನು ಕಟ್ ಮಾಡಲಾಗಿದೆ.

ಪಾಪ ಮಿಡಲ್ ಕ್ಲಾಸ್ ಭಕ್ತರ ಫಜೀತಿ ಯಾರಿಗೂ ಬೇಡ. ಯಾರ ಪರವಾಗಿ ನಿಂತು ನರ ಹರಿದುಕೊಂಡು ಗೆಲ್ಲಿಸಿಕೊಂಡರೋ.. ಅವರೇ ಈಗ ಮಿಡಲ್ ಕ್ಲಾಸ್ ಭವಿಷ್ಯದ ಉಳಿತಾಯ ಯೋಜನೆಗೂ ಕನ್ನ ಹೊಡೆದಿದ್ದಾರೆ. ಆರ್ಥಿಕ ಮಾರುಕಟ್ಟೆಯಲ್ಲಿ ಏರುತ್ತಿರುವ ದರಗಳನ್ನು ಇದಕ್ಕೆ ಕಾರಣವಾಗಿ ತೋರಿಸಲಾಗ್ತಿದೆ. ಆದ್ರೆ ಇದನ್ನ ಇಂಟರ್ ನ್ಯಾಷನಲ್ ಮಾರ್ಕೆಟ್ಟಲ್ಲಿ ಪಾತಾಳಕ್ಕೆ ಬಂದಿರೋ ಕ್ರೂಡ್ ಆಯಿಲ್ ರೇಟಿಗೆ ಅನ್ವಯ ಮಾಡಿ ಪೆಟ್ರೋಲ್ ರೇಟ್ ಇಳಿಸ್ರಪ್ಪ ಅಂದ್ನೋಡಿ.. ಆಗಲ್ಲ.. ಆಗಲ್ಲ ಅಂತಾರೆ.. ಒಂದೂಕಾಲು ಲಕ್ಷ ಕೋಟಿಯಷ್ಟು ಕಾರ್ಪೊರೇಟ್ ಕಂಪನಿಗಳ ಸಾಲ ಮನ್ನಾ ಮಾಡಿದ್ರಲ್ಲ.. ಅವಾಗ ಆರ್ಥಿಕ ಮಾರುಕಟ್ಟೆ ದರಕ್ಕೆ ಯಾವ ಅಪಾಯವೂ ಆಗಲಿಲ್ಲ.

15 ಲಕ್ಷ ಪುಗ್ಸಟ್ಟೆ ದುಡ್ಡು ಅಕೌಂಟಿಗೆ ಬಂದು ಬೀಳ್ತದೆ ಅಂತ ಪಿಳಿಪಿಳಿ ಕಣ್ಣು ಬಿಟ್ಕೊಂಡು ಕ್ಯಾಂಪೇನ್ ಮಾಡ್ಕೊಂಡು ಕುಂತಿದ್ದ ಮಿಡಲ್ ಕ್ಲಾಸ್ ಭಕ್ತರಪಡೆಗೆ ಇದೀಗ ಜ್ಞಾನ ಅನ್ನೋದು ಸರ್ವಾಂಗಗಳಿಂದಲೂ ಉದಯವಾಗುತ್ತಿರುವಂತಿದೆ. ದೆವ್ವಗಳ ರಾಜ್ಯದೊಳಗೆ ಹೆಣ ತಿನ್ನೋದೇ ಕಾನೂನು ಅನ್ನೋದನ್ನ ತಡವಾಗಿ ಅರ್ಥ ಮಾಡಿಕೊಂಡ ಭಕ್ತ ಭಕ್ವಾಸ್ ಗಳ ಪಾದಾರವಿಂದದ ಮೇಲೊಂದು ಕರ್ಪೂರ, ಆದಷ್ಟು ಬೇಗ ಉರಿಯಲಿ..

ಭಕ್ತ್ .. ಜನೋಂ..ಕೀ.. ಸಂಕಟು.. 
ಚಣು ಮೇ.. ದೂರು ಕರೇ.. 
ಓಂ.. ಫೊಟೋಸಾಪು, ಸರ್ಕಾರು ಹರೇ..

 

Comments (Click here to Expand)