‘ತಾಪಮಾನ ಹೆಚ್ಚಳ’ ನಿಲ್ಲಿಸಲು ಸಾಧ್ಯವೇ?
ಮಾನ್ಯರೆ,
ಜಾಗತಿಕ ತಾಪಮಾನ ಹೆಚ್ಚಳವಾಗುತ್ತಿರುವ ಬಗ್ಗೆ ಜಗತ್ತಿನ ಎಲ್ಲ ರಾಷ್ಟ್ರಗಳ ನಾಯಕರು ಸೇರಿ ಚರ್ಚೆ ಮಾಡಿದರೂ ಸಮಸ್ಯೆಗೆ ಪರಿಹಾರ ಮರೀಚಿಕೆಯಾಗಿದೆ. ಅಭಿವೃದ್ಧಿಶೀಲ ದೇಶಗಳಲ್ಲಿ ಭೂಮಿಯ ವಾತಾವರಣವನ್ನು ಹಾಳು ಮಾಡುವ ಚಟುವಟಿಕೆಗಳು ಕೊನೆಯಿಲ್ಲದಾಗಿವೆ. ಅವು ಕಡಿಮೆ ಮಾಡಲಾಗುತ್ತಿಲ್ಲ. ಇಂತಹ ಮುಂದುವರಿದ ದೇಶಗಳಲ್ಲಿ ಆ ವಾತಾವರಣವನ್ನು ಹಾಳು ಮಾಡುವ ಚಟುವಟಿಕೆಗಳನ್ನು ಹುಟ್ಟುಹಾಕುವ ಕೈಗಾರಿಕೀಕರಣ ಅತ್ಯಂತ ವೇಗವಾಗಿ ಬೆಳೆಯುತ್ತಿದೆ. ಅದನ್ನು ನಿಯಂತ್ರಿಸಲು ಯಾವ ನಾಯಕರಿಂದಲೂ ಸಾಧ್ಯವಿಲ್ಲವಾಗಿದೆ. ಅಭಿವೃದ್ಧಿಶೀಲ ದೇಶಗಳ ನಾಯಕರು ಪರಿಸರಪ್ರಿಯರೆಂದು ಪ್ರಚಾರ ಪಡೆಯುತ್ತಾರಾದರೂ ಅಭಿವೃದ್ಧಿಯ ಮಾನದಂಡವನ್ನಿಟ್ಟುಕೊಂಡು ಕೈಗಾರಿಕೀಕರಣವನ್ನು ನಿಲ್ಲಿಸಲು ಸಾಧ್ಯವೇ ಆಗಿಲ್ಲ, ಆಗುವುದೂ ಇಲ್ಲ. ಉದಾಹರಣೆಗೆ ನಮ್ಮ ಭಾರತದಲ್ಲೇ ಮೊಟ್ಟಮೊದಲ ಬಾರಿಗೆ ಅಹ್ಮದಾಬಾದ್ನಿಂದ ಬುಲೆಟ್ ಟ್ರೈನ್ ಹೊರಡಲು ಸಜ್ಜಾಗಿದೆ. ಇದನ್ನು ನಿಲ್ಲಿಸುವ ಮಾತನಾಡುವುದು ನಗೆಪಾಟಲಿಗೀಡಾದಂತೆ ಅಲ್ಲವೇ.? ಆದರೆ ಈ ಬುಲೆಟ್ ಟ್ರೈನ್ಗಾಗಿ ಎಷ್ಟೊಂದು ಪರಿಸರ ನಾಶ ಮಾಡಬೇಕೆಂಬುದರ ಬಗ್ಗೆ ನಾವು ಚಿಂತಿಸುವುದಿಲ್ಲ. ಬದಲಾಗಿ, ಅಭಿವೃದ್ಧಿ ದೇಶಗಳಲ್ಲಿ ಬುಲೆಟ್ ಟ್ರೈನ್ ಬಂದು ಎಷ್ಟೋ ವರ್ಷಗಳಾಗಿವೆ ಎನ್ನುತ್ತೇವೆ. ‘ಅಭಿವೃದ್ಧಿ’ಯೆಂದರೆ ಪರಿಸರ ನಾಶವೆನ್ನುವ ಇಂದಿನ ದಿನಗಳಲ್ಲಿ ಜಾಗತಿಕ ತಾಪಮಾನ ಮುಂದಿನ ದಿನಗಳಲ್ಲಿ ಇನ್ನಷ್ಟು ಹೆಚ್ಚೀತು ವಿನಃ ಕಡಿಮೆಯಾದೀತೇ?