varthabharthi

ಮದುವೆ ಮನೆ

ಆರಿಫ್ ಕೆ. - ಸಾರಾ ಹಸೀಬಾ

ವಾರ್ತಾ ಭಾರತಿ : 27 Sep, 2016

ಬಂಟ್ವಾಳ ತಾಲೂಕಿನ ಸಜಿಪಮುನ್ನೂರು ಗ್ರಾಮದ ಕರಂದಾಡಿ ನಿವಾಸಿ ಮರ್‌ಹೂಂ ಮುಹಮ್ಮದ್ ರ ಪುತ್ರ ಆರಿಫ್ ಕೆ. ಎಂಬವರ ವಿವಾಹವು ಕಾಟಿಪಳ್ಳ-2ನೇ ಬ್ಲಾಕ್ ನಿವಾಸಿ ಪಿ. ಅಬ್ದುಲ್ ರಹಿಮಾನ್ ರ ಪುತ್ರಿ ಸಾರಾ ಹಸೀಬಾ ಜೊತೆ ಸೋಮವಾರ ಫರಂಗಿಪೇಟೆಯ ಯಶಸ್ವಿ ಹಾಲ್‌ನಲ್ಲಿ ನಡೆಯಿತು.

ವಿವಾಹದಲ್ಲಿ ಜಿಲ್ಲಾ ಉಸ್ತುವಾರಿ ಸಚಿವ ಬಿ. ರಮಾನಾಥ ರೈ, ಜಿ.ಪಂ. ಸದಸ್ಯರಾದ ಚಂದ್ರಪ್ರಕಾಶ್ ಶೆಟ್ಟಿ ತುಂಬೆ, ಎಂ.ಎಸ್. ಮುಹಮ್ಮದ್, ಜಿಲ್ಲಾ ಕಾಂಗ್ರೆಸ್ ಉಪಾಧ್ಯಕ್ಷ ಹಾಜಿ ಬಿ.ಎಚ್. ಖಾದರ್, ಬಂಟ್ವಾಳ ತಾಲೂಕು ಪಂಚಾಯತ್ ಉಪಾಧ್ಯಕ್ಷ ಬಿ.ಎಂ. ಅಬ್ಬಾಸ್ ಅಲಿ, ಬಂಟ್ವಾಳ ಅಕ್ರಮ-ಸಕ್ರಮ ಸಮಿತಿ ಅಧ್ಯಕ್ಷ ಮಾಯಿಲಪ್ಪ ಸಾಲ್ಯಾನ್, ಸಚಿವರ ಆಪ್ತ ಸಹಾಯಕ ರಂಜಿತ್ ಪೂಜಾರಿ, ವೆಂಕಪ್ಪ ಪೂಜಾರಿ, ಅಹ್ಮದ್ ಬಾವಾ ಯಾಸೀನ್ ಭಾಗವಹಿಸಿ ಶುಭಹಾರೈಸಿದರು.

‘ವಾರ್ತಾ ಭಾರತಿ’ ನಿಮಗೆ ಆಪ್ತವೇ ? ಇದರ ಸುದ್ದಿಗಳು ಮತ್ತು ವಿಚಾರಗಳು ಎಲ್ಲರಿಗೆ ಉಚಿತವಾಗಿ ತಲುಪುತ್ತಿರಬೇಕೇ? 

ಬೆಂಬಲಿಸಲು ಇಲ್ಲಿ  ಕ್ಲಿಕ್ ಮಾಡಿ

Comments (Click here to Expand)