varthabharthi

ಕಲೆ - ಸಾಹಿತ್ಯ

ಮಹಾತ್ಮನಾದ ಗಾಂಧಿ

ವಾರ್ತಾ ಭಾರತಿ : 16 Oct, 2016
ವಿಶ್ವನಾಥ್ ಮಳಲಿ, ಬೆಂಗಳೂರು

ಭಾರತದಲ್ಲಿ ಹೋರಾಟದ ದಿಕ್ಕನ್ನೇ ಬದಲಿಸಿದ ಮಹಾತ್ಮಾ
ರಕ್ತಪಾತವಿಲ್ಲದ ಹೋರಾಟವನ್ನು ಕಲಿಸಿದ ಪುಣ್ಯಾತ್ಮಾ
ಪ್ರಾಮಾಣಿಕತೆಯಿಂದ ಬದುಕು ಸವೆಸಿದ ಪುಣ್ಯಾತ್ಮಾ
ಗೋಡ್ಸೆಯ ಗುಂಡಿಗೆ ಬಲಿಯಾಗಿ ಆದ ಹುತಾತ್ಮಾ

ಅನುಕ್ಷಣವೂ ಸತ್ಯದೊಂದಿಗೆ ಪ್ರಯೋಗ ನಡೆಸಿದ ವೀರ
ಸತ್ಯದ ಪಾರದರ್ಶಕವಾಗಿ ಜೀವನ ಚರಿತ್ರೆ ಬರೆದಿಟ್ಟ ಧೀರ
ಜಗತ್ತಿಗೆ ಶಾಂತಿಯ ಬೋಧಿಸಿ ಆಚರಿಸಿದ ಮಹಾವೀರ
ಗುಂಡಿಗೆ ಬಲಿಯಾಗಿ, ಆದ ಎಲ್ಲರ ಮನದಲ್ಲಿ ಅಮರ

ಕೋಟ್ಯಂತರ ಜನರ ನಾಡಿಮಿಡಿತ ಅರಿತಿದ್ದ ನಾಯಕ
ಸತ್ಯ ಶಾಂತಿ ಮತ್ತು ಅಹಿಂಸೆಯ ಸಾರಿದ ಬೋಧಕ
ಬ್ರಹ್ಮಚರ್ಯ ಪಾಲಿಸಲು ಪ್ರಯತ್ನಿಸಿ ವಿಫಲನಾದ ಸಾಧಕ
ಮುಕ್ತವಾಗಿ ನಿರ್ಭಿಡೆಯಿಂದ ಜನ್ಮಚರಿತ್ರೆ ಬರೆದಿಟ್ಟ ದ್ಯೋತಕ

ಜಗತ್ತಿನಲ್ಲಿಯೇ ಹೆಚ್ಚು ಟೀಕೆ ಮತ್ತು ವಿಮರ್ಶೆಗೆ ಒಳಗಾದ ವ್ಯಕ್ತಿ
ಪ್ರಾಮಾಣಿಕತೆ ಮತ್ತು ಸರಳತೆಯೇ ಈತನ ಶಕ್ತಿ
ಅಂತರಂಗದಲ್ಲಿತ್ತು ಭಗವದ್ಗೀತೆ ಮತ್ತು ರಾಮನ ಕುರಿತು ಭಕ್ತಿ
ಸಫಲವಾಗಿತ್ತು ಬ್ರಿಟಿಷರ ಓಡಿಸಲು ಈತನ ಯುಕ್ತಿ
    

 

Comments (Click here to Expand)