varthabharthi

ಓ ಮೆಣಸೇ

*ನ.8ರ ನಂತರ ಶ್ರೀಮಂತರು

ವಾರ್ತಾ ಭಾರತಿ : 21 Nov, 2016

*ನ.8ರ ನಂತರ ಶ್ರೀಮಂತರು ನಿದ್ದೆ ಕಳೆದುಕೊಂಡಿದ್ದಾರೆ. -ನರೇಂದ್ರ ಮೋದಿ, ಪ್ರಧಾನಿ
    ಬಡವರು ಪ್ರಾಣ ಕಳೆದುಕೊಂಡಿದ್ದಾರೆ.
---------------------

ಹಿಲರಿ ಕ್ಲಿಂಟನ್ ಹಗೆ ಸಾಧಿಸುವುದಿಲ ್ಲ -ಡೊನಾಲ್ಡ್ ಟ್ರಂಪ್, ಅಮೆರಿಕ ಚುನಾಯಿತ ಅಧ್ಯಕ್ಷ
ಅಮೆರಿಕದ ವಿರುದ್ಧ ಹಗೆ ಸಾಧಿಸುವುದಕ್ಕೆ ನೀವೇ ಸಾಕು.

---------------------
2022ರ ವೇಳೆಗೆ ಈ ದೇಶದ ಪ್ರತಿಯೊಬ್ಬನೂ ಸ್ವಂತ ಮನೆ ಹೊಂದುವುದು ನಮ್ಮ ಆಶಯ - ನರೇಂದ್ರ ಮೋದಿ, ಪ್ರಧಾನಿ
ಅದಕ್ಕಾಗಿ ಈಗ ಇರುವ ಮನೆಯನ್ನು ದೇಶದ ಪ್ರತಿಯೊಬ್ಬನೂ ತ್ಯಜಿಸಬೇಕೇ?
---------------------

ನೋಟು ನಿಷೇಧದಿಂದ ನನಗೇನು ತೊಂದರೆಯಾಗಿಲ್ಲ -ಆಮಿರ್ ಖಾನ್, ನಟ
     ಹೌದೌದು, ತೊಂದರೆಯೆಲ್ಲ ಕಪ್ಪು ಹಣ ಹೊಂದಿರುವ ಶ್ರೀಸಾಮಾನ್ಯರಿಗೆ, ರೈತರಿಗೆ.
---------------------

 ಜೀವನದಲ್ಲಿ ಸಕಾರಾತ್ಮಕ ಗುಣಗಳನ್ನು ಬೆಳೆಸಿಕೊಳ್ಳುವುದು ಬಹಳ ಅವಶ್ಯ -ಬಾಬಾ ರಾಮ್‌ದೇವ್, ಯೋಗ ಗುರು
     ಪತಂಜಲಿಯಿಂದ ಅದಕ್ಕೂ ಔಷಧಿ ಬಿಡುಗಡೆ ಮಾಡುವ ಆಲೋಚನೆಯೇ?
---------------------

ಕಬಡ್ಡಿ ಯುವಕರಿಗೆ ಪ್ರೋತ್ಸಾಹ ನೀಡುತ್ತದೆ - ಕೆ.ಈಶ್ವರಪ್ಪ, ಬಿಜೆಪಿ ನಾಯಕ
     ಯಡಿಯೂರಪ್ಪರ ಜೊತೆಗೆ ನಿಮ್ಮ ಕಬಡ್ಡಿ ಎಲ್ಲಿಯವರೆಗೆ ಬಂತು?
---------------------

ನೋಟು ನಿಷೇಧ ಖಡಕ್ ಚಾ ಇದ್ದಂತೆ -ನರೇಂದ್ರ ಮೋದಿ, ಪ್ರಧಾನಿ
ಚಾ ಎಂದು ಕುಡಿದವರಿಗೆ ವಿಷವೆನ್ನುವುದು ಗೊತ್ತಾಗುವಾಗ ತಡವಾಗಿತ್ತು.

---------------------

ಶೇ.50ರಷ್ಟು ಕಪ್ಪು ಹಣ ಬಿಜೆಪಿಯವರ ಬಳಿ ಇದೆ -ಅರವಿಂದ್ ಕೇಜ್ರಿವಾಲ್, ದಿಲ್ಲಿ ಮುಖ್ಯಮಂತ್ರಿ
ಅವರ ಬಳಿಯೇ ನಿಮ್ಮ ಹಳೆ ನೋಟು ವಿನಿಮಯ ಮಾಡಿಸಿಕೊಳ್ಳಿ.

---------------------

ನಗುತ್ತಿದ್ದ ಪ್ರಧಾನಿ ಮೋದಿ ಈಗ ಅಳುತ್ತಿದ್ದಾರೆ -ರಾಹುಲ್ ಗಾಂಧಿ, ಕಾಂಗ್ರೆಸ್ ಉಪಾಧ್ಯಕ್ಷ
ನೀವೇನು ಮಾಡುತ್ತಿದ್ದೀರಿ ಅದನ್ನು ಹೇಳಿ.

---------------------
ಹಳೆಯ ನೋಟು ರದ್ದತಿ ಪರಿಣಾಮ ಕಾಶ್ಮೀರದಲ್ಲಿ ಗಲಭೆಕೋರರಿಗೆ ನಿರುದ್ಯೋಗ ಎದುರಾಗಿದೆ - ಮನೋಹರ್ ಪಾರಿಕ್ಕರ್, ಕೇಂದ್ರ ಸಚಿವ
 ದೇಶದ ಸಣ್ಣ ಗುಡಿಕೈಗಾರಿಕೆಗಳೆಲ್ಲ ಕಾಶ್ಮೀರದ ಗಲಭೆಕೋರರಿಗೆ ಸೇರಿದ್ದು ಅನ್ನುತ್ತೀರಾ?

---------------------
ಕುಮಾರಸ್ವಾಮಿ ಹುಬ್ಬಳ್ಳಿಯಲ್ಲಿ ಮನೆ ಮಾಡುವುದರಿಂದ ಜೆಡಿಎಸ್‌ಗೆ ಆನೆ ಬಲ ಬಂದಂತಾಗಿದೆ - ಎನ್.ಎಚ್.ಕೋನರೆಡ್ಡಿ, ಶಾಸಕ
ಬಹುಶಃ ಆನೆ ಲಾಯವನ್ನೇ ನಿರ್ಮಾಣ ಮಾಡುತ್ತಿರಬೇಕು.

---------------------
ಸರ್ವರಿಗೂ ಸಮ ಪಾಲು, ಸಮ ಬಾಳು ಜೀವನಕ್ಕೆ ಪ್ರಧಾನಿ ಮೋದಿ ವಿಶೇಷ ಕಾನೂನು ತಂದರೆ ಮನೆಯಲ್ಲಿ ಅವರ ಪ್ರತಿಮೆ ಸ್ಥಾಪಿಸಿ ಪೂಜಿಸುತ್ತೇನೆ - ಡಿ.ಜಿ.ಶಾಂತನಗೌಡ, ಕಾಂಗ್ರೆಸ್ ಶಾಸಕ
ಸದ್ಯಕ್ಕೆ ಹೃದಯದೊಳಗಿಟ್ಟು ಪೂಜಿಸುತ್ತಿದ್ದೀರಿ ಎಂದು ಕಾಣುತ್ತದೆ.

---------------------
ಕಾನೂನು ಕೈಗೆತ್ತಿಕೊಳ್ಳುವವರ ವಿರುದ್ಧ ಪೊಲೀಸರು ನಿರ್ದಾಕ್ಷಿಣ್ಯ ಕ್ರಮ ಕೈಗೊಳ್ಳಬೇಕು -ಯು.ಟಿ.ಖಾದರ್, ಸಚಿವ
ಸಚಿವರ ಭಯ ಎನ್ನುತ್ತಿದ್ದಾರೆ ಪೊಲೀಸರು.

---------------------
ಯಾವ ಪಕ್ಷ ಸೇರಬೇಕೆಂಬುದನ್ನು ನಾನು ಇನ್ನಷ್ಟೇ ನಿರ್ಧರಿಸಬೇಕಾಗಿದೆ - ಜಯಪ್ರಕಾಶ್ ಹೆಗ್ಡೆ, ಮಾಜಿ ಸಚಿವ
ನಿಮ್ಮನ್ನು ಸೇರಿಸಿಕೊಳ್ಳುವ ಬಗ್ಗೆ ಬಿಜೆಪಿಯೊಳಗೆ ಭಿನ್ನಾಭಿಪ್ರಾಯವಿರಬೇಕು.

---------------------
ಪ್ರಧಾನಿಗೂ ನನಗೂ ಹೋಲಿಕೆ ಮಾಡುವುದು ಸರಿಯಲ್ಲ - ಮನು ಬಳಿಗಾರ್, ಕಸಾಪ ಅಧ್ಯಕ್ಷ
ಯಾಕೆ, ನಿಮಗೆ ಅವಮಾನವಾಯಿತೆ?
---------------------

ಇಡೀ ಜಗತ್ತು ಆರ್ಥಿಕ ಸಂಕಷ್ಟಕ್ಕೆ ಸಿಲುಕಿದ್ದಾಗ ಭಾರತವನ್ನು ಬಚಾವು ಮಾಡಿದ್ದು ಕಪ್ಪು ಹಣ -ಅಖಿಲೇಶ್ ಯಾದವ್, ಉ.ಪ್ರ. ಮುಖ್ಯಮಂತ್ರಿ
ನಿಮ್ಮನ್ನು ಮುಖ್ಯಮಂತ್ರಿ ಮಾಡಿದ್ದು ಕೂಡ.

---------------------
ಭಕ್ತಿ ದೀಕ್ಷೆ ಪಡೆದು ಮದ್ಯ, ಮಾಂಸ ತ್ಯಜಿಸಿದರೆ ಬ್ರಾಹ್ಮಣರಿಗೆ ಸಮ ಎಂದು ಮಧ್ವಾಚಾರ್ಯರು ಹೇಳಿದ್ದಾರೆ -ವಿಶ್ವೇಶತೀರ್ಥ ಸ್ವಾಮೀಜಿ, ಪೇಜಾವರ ಮಠ
ತಮ್ಮ ಪಂಕ್ತಿಯಲ್ಲಿ ಕೂತು ಅವರು ಊಟ ಮಾಡಬಹುದೇ?

---------------------
ನೋಟು ನಿಷೇಧದಿಂದ ಹೆಚ್ಚು ತೊಂದರೆಯಾಗಿದ್ದು ಕಾಂಗ್ರೆಸ್‌ಗೆ - ಆರ್.ಅಶೋಕ್, ಮಾಜಿ ಮುಖ್ಯಮಂತ್ರಿ
ನಿಮಗೂ ಕಡಿಮೆ ತೊಂದರೆ ಆಗಿದೆ ಅಂತಾಯಿತು. 

---------------------
ಯಡಿಯೂರಪ್ಪ ಮತ್ತು ನರೇಂದ್ರ ಮೋದಿ ಇಬ್ಬರದ್ದೂ ಹೋರಾಟದ ಬದುಕು -ಭಾರತಿ ಶಟ್ಟಿ, ರಾಜ್ಯ ಬಿಜೆಪಿ ಮಹಿಳಾ ಮೋರ್ಚಾದ ಅಧ್ಯಕ್ಷೆ
     ಮುಖ್ಯವಾಗಿ ಮಹಿಳೆಯ ಜೊತೆಗಿನ ಹೋರಾಟ.

---------------------
ಭಾರತ ವಿಶ್ವದ ನಂ.1 ಸ್ಥಾನದಲ್ಲಿರಬೇಕಾದರೆ ಯುವ ಜನರ ಪಾತ್ರ ಅತ್ಯಂತ ಮುಖ್ಯ -ನಿತಿನ್ ಗಡ್ಕರಿ, ಕೇಂದ್ರ ಸಚಿವ    
ಯುವ ಜನರೆಲ್ಲ ಎಟಿಎಂ ಕ್ಯೂನಲ್ಲಿದ್ದಾರೆ.

---------------------
ಪ್ರಧಾನಿ ಮೋದಿಗೆ ತಾಕತ್ತಿದ್ದರೆ ತನ್ನ ಪುತ್ರಿಯ ಮದುವೆಗೆ 500 ಕೋಟಿ ರೂ. ಖರ್ಚು ಮಾಡಿದ ಜನಾರ್ದನ ರೆಡ್ಡಿಯನ್ನು ಬಂಧಿಸಲಿ - ಜನಾರ್ದನ ಪೂಜಾರಿ, ಕಾಂಗ್ರೆಸ್ ನಾಯಕ
ಜನಾರ್ದನ ಪೂಜಾರಿಯನ್ನು ಬಂಧಿಸಿದರೂ ಸಾಕು ಎನ್ನುತ್ತಿದ್ದಾರೆ ರಾಜ್ಯದ ಮುಖ್ಯಮಂತ್ರಿ

---------------------
ನೋಟು ನಿಷೇಧದಿಂದ ಬಡವರಿಗೆ ತೊಂದರೆ -ವಿನಯ್ ಕುಮಾರ್ ಸೊರಕೆ, ಶಾಸಕ
ಮೊದಲು ತಮಗಾಗಿರುವ ತೊಂದರೆಯನ್ನು ವಿವರಿಸಿ.

---------------------
ಡಾ.ಜಿ.ಪರಮೇಶ್ವರ್ ಮುಂದಿನ ಮುಖ್ಯಮಂತ್ರಿ - ಸೋಮಶೇಖರ್, ಶಾಸಕ
 ಸದ್ಯಕ್ಕೆ ಈಗ ಅವರು ವಹಿಸಿಕೊಂಡಿರುವ ಸ್ಥಾನದ ಬಗ್ಗೆ ಅವರಿಗೆ ನೆನಪಿಸಿ.

---------------------
ದೇಶದಲ್ಲಿ ಆರ್ಥಿಕ ತುರ್ತು ಪರಿಸ್ಥಿತಿ ನಿರ್ಮಾಣವಾಗಿದೆ- ಡಾ.ಜಿ.ಪರಮೇಶ್ವರ್, ಸಚಿವ
ಪಕ್ಷಕ್ಕೆ ತುರ್ತಾಗಿ ಹಣ ಹೊಂದಿಸುವುದು ಕಷ್ಟವಾಗಿರಬೇಕಲ್ಲ?

‘ವಾರ್ತಾ ಭಾರತಿ’ ನಿಮಗೆ ಆಪ್ತವೇ ? ಇದರ ಸುದ್ದಿಗಳು ಮತ್ತು ವಿಚಾರಗಳು ಎಲ್ಲರಿಗೆ ಉಚಿತವಾಗಿ ತಲುಪುತ್ತಿರಬೇಕೇ? 

ಬೆಂಬಲಿಸಲು ಇಲ್ಲಿ  ಕ್ಲಿಕ್ ಮಾಡಿ

Comments (Click here to Expand)

ಇನ್ನಷ್ಟು ಓ ಮೆಣಸೇ ಸುದ್ದಿಗಳು