varthabharthi

ಓ ಮೆಣಸೇ

*ಸಂಸತ್ ಭವನ ಕಾಂಗ್ರೆಸ್ ಮನೆಯಲ್ಲ

ವಾರ್ತಾ ಭಾರತಿ : 19 Dec, 2016

 *ಸಂಸತ್ ಭವನ ಕಾಂಗ್ರೆಸ್ ಮನೆಯಲ್ಲ

  
-ಅನಂತಕುಮಾರ್, ಕೇಂದ್ರ ಸಚಿವ ಆರೆಸ್ಸೆಸ್ ಮುಖ್ಯ ಕಚೇರಿಯೆಂದು ಅಧಿಕೃತವಾಗಿ ಘೋಷಣೆ ಮಾಡಿಬಿಡಿ.

---------------------
  ನಾನು-ಯಡಿಯೂರಪ್ಪ ಈಗ ಸ್ವಲ್ಪ ದೂರವಿದ್ದೇವೆ ಅಷ್ಟೇ. ಇಂದಲ್ಲ ನಾಳೆ ಒಂದಾಗುತ್ತೇವೆ

  - ಕೆ.ಎಸ್.ಈಶ್ವರಪ್ಪ, ಬಿಜೆಪಿ ನಾಯಕ ಇಬ್ಬರಲ್ಲಿ ಯಾರಾದರೂ ಒಬ್ಬರಷ್ಟೇ ಉಳಿಯುತ್ತಾರೆ ಎಂಬ ಸೂಚನೆಯೇ?
---------------------
  1996ರಲ್ಲಿ ಜಯಲಲಿತಾ ಸೋಲಿಗೆ ನಾನೇ ಕಾರಣ
-ರಜನಿಕಾಂತ್, ಸಿನೆಮಾ ನಟ
  ಇಲ್ಲ ನಾನು ಕಾರಣ ಎಂದು ಜಿದ್ದಿಗೆ ಬಿದ್ದಿದ್ದಾರೆ ಶಶಿಕಲಾ.
---------------------
  ನರೇಂದ್ರ ಮೋದಿ ಸಂಸತ್‌ನಿಂದ ಓಡಿ ಹೋದ ಪ್ರಥಮ ಪ್ರಧಾನಿ
-ರನ್‌ದೀಪ್ ಸರ್ಜೇವಾಲಾ,ಕಾಂಗ್ರೆಸ್ ವಕ್ತಾರ.
  
ರಾಹುಲ್‌ಗಾಂಧಿ ಮಾತನಾಡಿ ಭೂಕಂಪ ಆಗಿಬಿಟ್ಟರೆ ಎಂಬ ಭಯದಿಂದಿರಬೇಕು. ಒಟ್ಟಿನಲ್ಲಿ ಜನರ ಹಿತಾಸಕ್ತಿಗಾಗಿ.

---------------------
  ಭಾರತವನ್ನು ಧರ್ಮದ ಆಧಾರದಲ್ಲಿ ವಿಭಜಿಸಲು ಪಾಕ್ ಯತ್ನಿಸುತ್ತಿದೆ
-ರಾಜನಾಥ್‌ಸಿಂಗ್, ಕೇಂದ್ರ ಸಚಿವ
  ಬಾಬರಿ ಮಸೀದಿ ಧ್ವಂಸ, ಗುಜರಾತ್ ಹತ್ಯಾಕಾಂಡ, ದಾದ್ರಿ ಹತ್ಯೆ ಇವೆಲ್ಲವನ್ನೂ ಪಾಕಿಸ್ತಾನವೇ ಬಂದು ಮಾಡಿರಬೇಕು, ಅಲ್ಲವೇ?
---------------------
  ಹೆದ್ದಾರಿಯಲ್ಲಿ ಬಾರ್‌ಗಳಿಗೆ ನಿಷೇಧ
-ಸುಪ್ರೀಂಕೋರ್ಟ್.
  
ನಮಗೆ ಹೆದ್ದಾರಿಯೇ ಬೇಡ ಎಂದು ಕುಡುಕರು ಹೆದ್ದಾರಿ ತಡೆ ಆಚರಿಸಲಿದ್ದಾರಂತೆ.

---------------------
  ಸಮಾಜ ಸೇವೆ ಮಾಡುವಾಗ ಅವಮಾನ ಆಗುವುದು ಸಹಜ
-ಅಣ್ಣಾ ಹಝಾರೆ,ಹೋರಾಟಗಾರ
  
ಆದರೆ ಜನರಲ್ಲಿ ಅನುಮಾನ ಹುಟ್ಟಬಾರದು.

---------------------
  

ಆಡಳಿತದಲ್ಲಿ ನಿರ್ಣಯ ಕೈಗೊಳ್ಳುವಾಗ ಅದಕ್ಕೆ ಬಹುಮತ ಬೇಕೆಂದೇನೂ ಇಲ್ಲ ,ಜನರ ಸಹಮತ ಇದ್ದರೆ ಸಾಕು ಎಂದು ಭೀಷ್ಮ ಹೇಳಿದ್ದರು -ಡಿ.ವಿ.ಸದಾನಂದ ಗೌಡ, ಕೇಂದ್ರ ಸಚಿವ
  ಅಂತಹ ಭೀಷ್ಮ ಕೊನೆಗೆ ಶಿಖಂಡಿಯಿಂದ ಹತರಾಗಬೇಕಾಯಿತು.
---------------------
  ಬುದ್ಧಿ ಜೀವಿಗಳನ್ನು ಅನುಸರಿಸುವ ಕೆಲವು ಮಂದಿ ಹಿಂದೂ ಎನ್ನಲು ಸಂಕೋಚ ಪಡುತ್ತಿದ್ದಾರೆ

  
-ಡಾ.ಚಿದಾನಂದಮೂರ್ತಿ,ಸಂಶೋಧಕ ತಮ್ಮಂಥವರು ಹಿಂದೂ ಎಂದು ಗುರುತಿಸಿಕೊಳ್ಳುತ್ತಿರುವ ಕಾರಣದಿಂದ ಇರಬೇಕು.

---------------------
  
ತನಿಖೆಯಾದರೆ ಸಿದ್ದು ಸಂಪುಟದ ಅನೇಕ ಸಚಿವರು ಜೈಲಿಗೆ -ಯಡಿಯೂರಪ್ಪ, ಮಾಜಿ ಮುಖ್ಯಮಂತ್ರಿ
  
ಜೈಲಿಗೆ ಹೋಗಿ ಬಂದವರ ಅನುಭವದ ಮಾತು.

---------------------
  ಕುತ್ತಿಗೆ ಕುಯ್ದರೂ ಬಿಜೆಪಿ ಬಿಡೋಲ್ಲ

  -ಕೆ.ಎಸ್.ಈಶ್ವರಪ್ಪ, ಬಿಜೆಪಿ ನಾಯಕ ಅದಕ್ಕೇ ಬೆನ್ನಿಗೆ ಇರಿಯುತ್ತಿದ್ದಾರೆ.
---------------------
  ನಾವ್ಯಾರೂ ಅರ್ಜಿ ಹಾಕಿಕೊಂಡು ಆಯಾ ಜಾತಿಯಲ್ಲಿ ಹುಟ್ಟಿಲ್ಲ
-ಸಿದ್ದರಾಮಯ್ಯ, ಮುಖ್ಯಮಂತ್ರಿ
  
ಮುಖ್ಯಮಂತ್ರಿಯಾಗುವ ಸಂದರ್ಭದಲ್ಲಿ ಮಾತ್ರ ಜಾತಿ ಅರ್ಜಿ ಬೇಕಾಗುತ್ತದೆ.

---------------------

  ಇತ್ತೀಚಿನ ರಾಜಕೀಯ ವ್ಯವಸ್ಥೆ, ಭ್ರಷ್ಟಾಚಾರ ಕಂಡು ಮುಂದಿನ ಚುನಾವಣೆೆಯೊಳಗೆ ಸತ್ತರೆ ಸಾಕು ಎಂಬಂತಾಗಿದೆ

 -ಕಾಗೋಡು ತಿಮ್ಮಪ್ಪ, ಸಚಿವ ಯಾರು ಸತ್ತರೆ ಸಾಕು ಎಂದು ಹೇಳಲಿಲ್ಲ.

---------------------
  ದೇಶದಲ್ಲಿ ಕಾಂಗ್ರೆಸ್‌ಗೆ ಕರ್ನಾಟಕವೊಂದೇ ಸಂಪನ್ಮೂಲ ಕೇಂದ್ರ
-ಪ್ರಹ್ಲಾದ್ ಜೋಷಿ, ಸಂಸದ
  ದೋಚುವುದಕ್ಕೆ ಬಿಜೆಪಿಗೆ ಇನ್ನಷ್ಟು ಸಂಪನ್ಮೂಲಗಳ ಅವಶ್ಯವಿದೆಯೇ?
---------------------
  ಸ್ವಜನ ಮತ್ತು ನೈತಿಕತೆ ಇರುವ ರಾಜಕಾರಣಿಗಳನ್ನು ದುರ್ಬೀನು ಹಾಕಿಕೊಂಡು ಹುಡುಕಬೇಕಾದ ಪರಿಸ್ಥಿತಿ ಬಂದಿದೆ
- ಪ್ರಮೋದ್ ಮುತಾಲಿಕ್, ಶ್ರೀ ರಾಮ ಸೇನೆ ಮುಖ್ಯಸ್ಥ
  
ಅವರಿದ್ದಿದ್ದರೆ ನೀವು ಯಾವತ್ತೋ ಜೈಲಲ್ಲಿರಬೇಕಾಗಿರುತ್ತಿತ್ತು.

---------------------
  ಕಪ್ಪು ಹಣ ಬಿಳಿ ಮಾಡುವ ದಂಧೆಯಲ್ಲಿ ಮಂತ್ರಿಮಂಡಲ ಶಾಮೀಲು
-ಶೋಭಾ ಕರಂದ್ಲಾಜೆ, ಸಂಸದೆ
    ಕೇಂದ್ರದ ಮಂತ್ರಿಮಂಡಲದ ಕುರಿತಂತೆ ಈ ಅನುಮಾನ ಮೊದಲೇ ಇತ್ತು. ಬರುವ ವಿಧಾನಸಭೆ ಚುನಾವಣೆಯಲ್ಲಿ ಕಾಂಗ್ರೆಸ್ 20 ಬ್ರಾಹ್ಮಣ ಅಭ್ಯರ್ಥಿಗಳಿಗೆ ಟಿಕೆಟ್ ನೀಡಿದರೆ 15 ಸ್ಥಾನವನ್ನು ಗೆಲ್ಲುತ್ತೇವೆ.
-ದಿನೇಶ್ ಗುಂಡೂರಾವ್, ಕೆಪಿಸಿಸಿ ಕಾರ್ಯಾಧ್ಯಕ್ಷ
  
20 ಅಹಿಂದ ಅಭ್ಯರ್ಥಿಗಳಿಗೆ ಕೊಟ್ಟರೆ 20 ಸ್ಥಾನ ಗೆಲ್ಲುವ ಸಾಧ್ಯತೆಗಳೂ ಇವೆ.

---------------------
  ಆರಂಭದಲ್ಲಿ ಎಲ್ಲರೂ ಅನಾಮಧೇಯರಾಗಿರುತ್ತಾರೆ
-ಬಾಬಾರಾಮ್‌ದೇವ್,ಯೋಗಗುರು.
 ಹಣ ಬಂದ ಬಳಿಕ ಹಣಾಮಧೇಯರು.
---------------------
  ನೋಟು ನಿಷೇಧ ಎಂಬುದು ಒಂದು ದೊಡ್ಡ ಹಗರಣ
-ಪಿ.ಚಿದಂಬರಂ,ಕಾಂಗ್ರೆಸ್ ನಾಯಕ
  ಕಾಂಗ್ರೆಸ್‌ನ ಪಾಲೆಷ್ಟು ಎಂದು ಕೇಳುತ್ತಿದ್ದಾರೆ.
---------------------
  ಪ್ರಧಾನಿ ಬಡವರ ವಿರುದ್ಧ ಯುದ್ಧ ಮಾಡುತ್ತಿದ್ದಾರೆ.
-ರಾಹುಲ್ ಗಾಂಧಿ, ಕಾಂಗ್ರೆಸ್ ಉಪಾಧ್ಯಕ್ಷ
  ಮತ್ತು ನೀವು ಕಾಂಗ್ರೆಸ್ ವಿರುದ್ಧ ಯುದ್ಧ ಮಾಡುತ್ತಿದ್ದೀರಿ.
---------------------
  ನೋಟು ರದ್ದತಿ ಕಾಂಗ್ರೆಸ್‌ನ ನೆಮ್ಮದಿ ಕೆಡಿಸಿದೆ.
-ಅರುಣ್ ಜೇಟ್ಲಿ, ಕೇಂದ್ರ ಸಚಿವ
  ಕಾಂಗ್ರೆಸ್ ನೆಮ್ಮದಿಯನ್ನು ಕೆಡಿಸುವುದಕ್ಕಾಗಿ ದೇಶದ ಜನಸಾಮಾನ್ಯರ ಬದುಕನ್ನು ಕೆಡಿಸುವುದೇ?
---------------------
  2018ರ ಚುನಾವಣೆ ನನ್ನ ಕೊನೆಯ ಹೋರಾಟ
-ಎಚ್.ಡಿ.ಕುಮಾರಸ್ವಾಮಿ, ಮಾಜಿ ಮುಖ್ಯ ಮಂತ್ರಿ
  ಸ್ಪರ್ಧೆಗೆ ಮುನ್ನವೇ ಸೋಲೊಪ್ಪಿಗೆಯೇ?
---------------------
  ನನಗೆ ಸಂಸತ್‌ಗೆ ರಾಜೀನಾಮೆ ನೀಡಬೇಕು ಅನ್ನಿಸುತ್ತದೆ.
-ಎಲ್.ಕೆ.ಅಡ್ವಾಣಿ, ಬಿಜೆಪಿ ಹಿರಿಯ ನಾಯಕ
  
ಅದು ಮೋದಿ ಪ್ರಧಾನಿಯಾದಾಗಲೇ ಹುಟ್ಟಿದ್ದ ಅನಿಸಿಕೆ.

---------------------

  ದಲಿತ ಕಾವ್ಯ ಬುಸುಗುಡುವ ಹಾವಾಗಬಾರದು
-ಡಾ.ಎಲ್.ಹನುಮಂತಯ್ಯ, ಹಿರಿಯ ಕವಿ
 
ಸದ್ಯಕ್ಕೆ ಅದು ಎರಡು ತಲೆಯ ಹಾವಾಗಿ ಬದಲಾಗುತ್ತಿದೆ.

---------------------
  ಪುರುಷ ಹೆಣ್ಣಿನ ಅಸಹಾಯಕತೆಯನ್ನು ದುರುಪಯೋಗ ಪಡಿಸಿಕೊಳ್ಳುವುದು ತಪ್ಪು
-ಉಮಾಶ್ರೀ, ಸಚಿವೆ
  
ಸದುಪಯೋಗ ಪಡಿಸಿಕೊಳ್ಳುವುದು ಹೇಗೆ ಎನ್ನುವುದನ್ನಾದರೂ ವಿವರಿಸಿ.

---------------------

‘ವಾರ್ತಾ ಭಾರತಿ’ ನಿಮಗೆ ಆಪ್ತವೇ ? ಇದರ ಸುದ್ದಿಗಳು ಮತ್ತು ವಿಚಾರಗಳು ಎಲ್ಲರಿಗೆ ಉಚಿತವಾಗಿ ತಲುಪುತ್ತಿರಬೇಕೇ? 

ಬೆಂಬಲಿಸಲು ಇಲ್ಲಿ  ಕ್ಲಿಕ್ ಮಾಡಿ

Comments (Click here to Expand)

ಇನ್ನಷ್ಟು ಓ ಮೆಣಸೇ ಸುದ್ದಿಗಳು