varthabharthi

ಓ ಮೆಣಸೇ

ಓ... ಮನಸೇ...

ವಾರ್ತಾ ಭಾರತಿ : 9 Jan, 2017

      ಮೋದಿ ವರ್ಷಾಂತ್ಯದ ಭಾಷಣ ಟುಸ್.
- ಕಾಗೋಡು ತಿಮ್ಮಪ್ಪ, ಸಚಿವ
  ವಿರೋಧ ಪಕ್ಷಗಳು ಟುಸ್ ಆಗಿ ಕೂತಿರುವುದರಿಂದ ಮೋದಿ ಉಳಿದಿದ್ದಾರೆ.
---------------------
      
ಇ-ಮೇಲ್ ಬಿಡಿ, ಕೊರಿಯರ್ ಬಳಸಿ. - ಡೊನಾಲ್ಡ್ ಟ್ರಂಪ್, ಅಮೆರಿಕದ ನಿಯೋಜಿತ ಅಧ್ಯಕ್ಷ.
  ಡಿಜಿಟಲ್ ಯಂತ್ರಗಳನ್ನೆಲ್ಲ ಗುಜರಿಗೆ ಹಾಕುವ ಬದಲು ಭಾರತಕ್ಕೆ ರಫ್ತು ಮಾಡುತ್ತೀರಾ?
---------------------
      
ಉಡುಪಿ ಕೃಷ್ಣಮಠದಲ್ಲಿ ಪಂಕ್ತಿ ಭೇದ ಇಲ್ಲ. - ಎಚ್.ಆಂಜನೇಯ, ಸಚಿವ
  ಪೇಜಾವರರ ಎಂಜಲು ಸೇವೆ ಚೆನ್ನಾಗಿ ನಡೆದಿರಬೇಕಲ್ಲ?
---------------------
     
ವಂದೇ ಮಾತರಂನ ಅರ್ಥ ತಿಳಿದುಕೊಂಡರೆ ಮಾತೃ ಭೂಮಿಯ ಬಗ್ಗೆ ಹೆಮ್ಮೆ ಮೂಡುತ್ತದೆ. - ಸುಮಿತ್ರಾ ಮಹಾಜನ್, ಲೋಕಸಭೆ ಸ್ಪೀಕರ್
  ಹಾಗಾದರೆ ವಂದೇ ಮಾತರಂನ ಅರ್ಥಗೊತ್ತಿಲ್ಲದವರಿಗೆಲ್ಲ ಮಾತೃಭೂಮಿಯ ಕುರಿತು ಹೆಮ್ಮೆಯಿಲ್ಲ ಎಂದರ್ಥವೇ?
---------------------
     ಎಲ್ಲ ರಾಜಕಾರಣಿಗಳ ಜೊತೆಗೂ ನನಗೆ ಸಂಬಂಧವಿದೆ
- ವಿಶ್ವೇಶ ತೀರ್ಥ ಸ್ಮಾಮೀಜಿ, ಪೇಜಾವರ ಮಠ
  
ಆಯಾ ಪಕ್ಷಗಳು ಬಂದಾಗ ನಿಮ್ಮ ಕೆಲಸವನ್ನು ಸುಲಭವಾಗಿ ಮಾಡಿಸಿಕೊಳ್ಳುವುದಕ್ಕಾಗಿ ಇದು ಅನಿವಾರ್ಯ.

---------------------
     
ನನ್ನನ್ನು ಬದುಕಲು ಬಿಡಿ. - ಅಮರ್ ಸಿಂಗ್, ಎಸ್ಪಿ ನಾಯಕ
  ಅದಕ್ಕಾಗಿ ಪಕ್ಷವನ್ನು ಬಲಿಕೊಡಿ ಎಂದು ಕರೆಯೇ?
---------------------
     
ಹೊಸ ವರ್ಷದ ಮುನ್ನಾದಿನ ಪ್ರಧಾನಿ ಭಾಷಣ ಹೊಸ ಭರವಸೆ ಮೂಡಿಸಿದೆ. - ಯಡಿಯೂರಪ್ಪ, ಮಾಜಿ ಮುಖ್ಯಮಂತ್ರಿ
  ಅದರಲ್ಲಿ ಈಶ್ವರಪ್ಪ ಅವರ ಬ್ರಿಗೇಡ್ ವಿರುದ್ಧ ಏನಾದರೂ ಮಾತನ್ನಾಡಿದ್ದಾರೆಯೇ?
---------------------
     
ಮಕ್ಕಳನ್ನು ಕನ್ನಡ ಮಾಧ್ಯಮ ಶಾಲೆಗೆ ಕಳುಹಿಸುವ ಪೋಷಕರೇ ನಿಜವಾದ ಕನ್ನಡಾಭಿಮಾನಿಗಳು. - ಅಭಯಚಂದ್ರ ಜೈನ್, ಶಾಸಕ
  
ಕನ್ನಡ ಮಾಧ್ಯಮ ಶಾಲೆಗಳನ್ನು ಮುಚ್ಚಿಸುವ ಸರಕಾರಗಳ ಬಗ್ಗೆಯೂ ಹೇಳಿ.

---------------------
     
ಭ್ರಷ್ಟಾಚಾರ ಇದ್ದಲ್ಲಿ ಶ್ರೀನಿವಾಸ ಪ್ರಸಾದ್ ಇರುವುದಿಲ್ಲ. - ಅನಂತ ಕುಮಾರ್, ಕೇಂದ್ರ ಸಚಿವ
  
ಭ್ರಷ್ಟಾಚಾರಕ್ಕಿಂತ ಅಸ್ಪಶ್ಯತೆ ವಾಸಿ ಎಂದು ತಿಳಿದುಕೊಂಡಿರಬೇಕು.

---------------------
     
ದೇವೇಗೌಡ ನನಗೆ ಅಪ್ಪಾಜಿಯಂತೆ. - ಸಿ.ಎಂ.ಇಬ್ರಾಹೀಂ, ರಾಜ್ಯ ಯೋಜ ಆಯೋಗದ ಉಪಾಧ್ಯಕ್ಷ
  
ನಾನೇನಾದರೂ ಆತನಿಗೆ ಅಪ್ಪಾಜಿಯಾಗಿದ್ದರೆ, ಗರ್ಭದಲ್ಲೇ ಭ್ರೂಣ ಹತ್ಯೆ ಮಾಡಿಸಿಬಿಡುತ್ತಿದ್ದೆ ಎಂದು ಗೌಡರು ಹೇಳುತ್ತಿದ್ದಾರಂತೆ.

---------------------
      
ಸಮಾಜವಾದಿ ಪಕ್ಷದ ಬೆಳವಣಿಗೆ ಮಹಾಭಾರತವನ್ನು ನೆನಪಿಸುತ್ತದೆ. - ಸುಬ್ರಮಣ್ಯ ಸ್ವಾಮಿ, ಬಿಜೆಪಿ ಮುಖಂಡ
  
ನೀವಂತೂ ಶಕುನಿಯ ಪಾತ್ರ ಚೆನ್ನಾಗಿ ನಿರ್ವಹಿಸುತ್ತಿದ್ದೀರಿ, ಬಿಡಿ.

---------------------
     
ಕೆಪಿಸಿಸಿಗೆ ಸ್ವತಂತ್ರ ಅಧ್ಯಕ್ಷರು ಬೇಕು. - ಎಚ್.ವಿಶ್ವನಾಥ್, ಮಾಜಿ ಸಂಸದ
     
ಹಾಗಾದರೆ ಸ್ವತಂತ್ರ ಪಕ್ಷ ಕಟ್ಟುವುದೇ ವಾಸಿ.

---------------------
     
ಬಿಜೆಪಿ ನಾಯಕರು ಪ್ರಚಾರ ಪ್ರಿಯರು. - ರಮಾನಾಥ ರೈ, ಸಚಿವ
  
ಅಪ ಪ್ರಚಾರ ಪ್ರಿಯರು.

---------------------
      
ಯಾರನ್ನೋ ಮುಖ್ಯಮಂತ್ರಿ ಮಾಡಲು ಸಂಗೊಳ್ಳಿ ರಾಯಣ್ಣ ಬ್ರಿಗೇಡ್ ಹುಟ್ಟುಹಾಕಿಲ್ಲ. - ಕೆ.ಎಸ್.ಈಶ್ವರಪ್ಪ, ಬಿಜೆಪಿ ನಾಯಕ
  ತಮ್ಮನ್ನೇ ಮುಖ್ಯಮಂತ್ರಿ ಮಾಡಿಕೊಳ್ಳುವ ಉದ್ದೇಶವೇ?

---------------------
     ಮೋದಿ ಆಶ್ವಾಸನೆಗಳು ಅಳುವ ಮಕ್ಕಳಿಗೆ ತಂದೆ ಚಾಕಲೇಟ್ ಕೊಟ್ಟಂತೆ.
 - ಎಚ್.ಡಿ.ದೇವೇಗೌಡ, ಮಾಜಿ ಪ್ರಧಾನಿ
  
ನೀವೂ ಅತ್ತು ನೋಡಿ, ನಿಮ್ಮ ಮಕ್ಕಳಿಗೆ ಕ್ಯಾಡ್‌ಬರೀಸ್ ಚಾಕಲೇಟ್ ಕೊಡುವ ಸಾಧ್ಯತೆ ಇದೆ.

---------------------
      
ನಗದು ರಹಿತ ವ್ಯವಹಾರದಿಂದ ದೇಶ ಮುನ್ನಡೆ. - ನಳಿನ್ ಕುಮಾರ್ ಕಟೀಲು, ಸಂಸದ
 
ದೇಶ ಇನ್ನು ಮುಂದೆ ನಗದು. ಅಳುವುದಷ್ಟೇ ಗತಿ.

---------------------
   
ಸಂಸದ ನಳಿನ್ ಕುಮಾರ್ ಕಟೀಲು ಮನೆಮನೆಗೆ ಹೋಗಿ ಕ್ಷಮೆಯಾಚಿಸಲಿ. - ಜನಾರ್ದನ ಪೂಜಾರಿ, ಕಾಂಗ್ರೆಸ್ ನಾಯಕ
  ಮತ್ತು ಪ್ರಭಾಕರ ಭಟ್ಟರು ಈ ಬಾರಿಯ ಬಿಜೆಪಿ ಟಿಕೆಟ್‌ನ್ನು ನಿಮಗೆ ನೀಡಬೇಕೇ?

---------------------
 ಜನರ ಪ್ರೀತಿ ವಿಶ್ವಾಸವೇ ನನ್ನ ಆಸ್ತಿ. - ವಿನಯ ಕುಮಾರ್ ಸೊರಕೆ, ಶಾಸಕ
 
ಅವೆಲ್ಲ ಅಕ್ರಮ ಆಸ್ತಿ ಎಂದು ಕಾಂಗ್ರೆಸ್ ಘೋಷಿಸಿ, ವಶಪಡಿಸಿಕೊಂಡಿದೆ.

---------------------
     
ಉ.ಪ್ರ.ಮುಖ್ಯಮಂತ್ರಿ ಹುದ್ದೆಗೆ ನನಗಿಂತಲೂ ಅಖಿಲೇಶ್ ಯಾದವ್ ಸೂಕ್ತ ಅಭ್ಯರ್ಥಿ. - ಶೀಲಾ ದೀಕ್ಷಿತ್, ಕಾಂಗ್ರೆಸ್ ನಾಯಕಿ
  
ಎಸ್ಪಿಯನ್ನು ಚುನಾವಣೆಗೆ ಮುನ್ನವೇ ಸೋಲಿಸಿದ್ದಕ್ಕಾಗಿ ನಿಮ್ಮ ಕೊಡುಗೆಯಿರಬೇಕು.

---------------------
     
ತಾನು ಕುಳಿತಿರುವ ಮರದ ರೆಂಬೆಯನ್ನೇ ಕಡಿಯುತ್ತಿರುವ ಕಾಳಿದಾಸ ಮೋದಿ. - ಮಮತಾ ಬ್ಯಾನರ್ಜಿ, ಪ.ಬ. ಮುಖ್ಯಮಂತ್ರಿ
  ಮುಂದೆ ಕಾಳಿದಾಸ ಮಹಾಕವಿಯಾಗಿಯೂ ಹೆಸರು ಮಾಡಿದ ಎನ್ನುವುದನ್ನು ಮರೆತು ಟೀಕೆ ಮಾಡುತ್ತಿದ್ದೀರಿ.
---------------------
     
ಸಂಸ್ಕೃತ ಕಲಿಯದ ನಾನು ನತದೃಷ್ಟ. - ಪ್ರಮೋದ್ ಮಧ್ವರಾಜ್, ಸಚಿವ
  
ಮೊದಲು ಕನ್ನಡ ಸರಿಯಾಗಿ ಮಾತನಾಡದೇ ಇರುವುದಕ್ಕಾಗಿ ಕಣ್ಣೀರು ಸುರಿಸಿ.

---------------------
     
ಈಗ ದೇಶದ ಬಡವರೆಲ್ಲ ಪ್ರಧಾನಿ ಮೋದಿ ಅವರನ್ನು ಬೆಂಬಲಿಸುತ್ತಿದ್ದಾರೆ. - ಅಮಿತ್‌ಶಾ, ಬಿಜೆಪಿ ಅಧ್ಯಕ್ಷ
  
ಹಾಗಾದರೆ ಅಂಬಾನಿ, ಅದಾನಿ ಅವರಿಗೆ ಬಿಪಿಎಲ್ ಕಾರ್ಡ್ ಹಂಚಿ ಬಿಡಿ.

---------------------

‘ವಾರ್ತಾ ಭಾರತಿ’ ನಿಮಗೆ ಆಪ್ತವೇ ? ಇದರ ಸುದ್ದಿಗಳು ಮತ್ತು ವಿಚಾರಗಳು ಎಲ್ಲರಿಗೆ ಉಚಿತವಾಗಿ ತಲುಪುತ್ತಿರಬೇಕೇ? 

ಬೆಂಬಲಿಸಲು ಇಲ್ಲಿ  ಕ್ಲಿಕ್ ಮಾಡಿ

Comments (Click here to Expand)

ಇನ್ನಷ್ಟು ಓ ಮೆಣಸೇ ಸುದ್ದಿಗಳು