varthabharthi

ಓ ಮೆಣಸೇ

*ಯಡಿಯೂರಪ್ಪನವರೇ ಮಂದಿನ ಮುಖ್ಯಮಂತ್ರಿ

ವಾರ್ತಾ ಭಾರತಿ : 30 Jan, 2017
ಪಿ.ಎ.ರೈ

  *ಯಡಿಯೂರಪ್ಪನವರೇ ಮಂದಿನ ಮುಖ್ಯಮಂತ್ರಿ
-ಈಶ್ವರಪ್ಪ, ಬಿಜೆಪಿ ನಾಯಕ
 ಬಿಜೆಪಿ ಅಧಿಕಾರಕ್ಕೆ ಬರುವುದಿಲ್ಲ ಎನ್ನುವುದು ಅಷ್ಟರಮಟ್ಟಿಗೆ ಮನದಟ್ಟಾಗಿರಬೇಕು.

------------------------------
  ಚಪ್ಪಲಿ ಕೈಗೆತ್ತಿಕೊಳ್ಳುವುದು ಸಾಹಿತಿಗಳ ಸಂಸ್ಕೃತಿಯಲ್ಲ್ಲ
- ಗಿರಡ್ಡಿ ಗೋವಿಂದರಾಜು, ಸಾಹಿತಿ.
  ಇನ್ನೊಬ್ಬರ ಚಪ್ಪಲಿಯನ್ನು ತಮ್ಮ ತಲೆಯ ಮೇಲಿಟ್ಟುಕೊಳ್ಳುವುದೇ ಸದ್ಯಕ್ಕೆ ಸಾಹಿತಿಗಳ ಸಂಸ್ಕೃತಿ ಎಂದು ಬಿಂಬಿಸಲು ಹೊರಟಂತಿದೆ.

------------------------------
   ಕಂಬಳ ಉಳಿಸಲು ಜೈಲಿಗೆ ಹೋಗಲೂ ಸಿದ್ಧ್ದ
-ಅಭಯಚಂದ್ರ ಜೈನ್, ಶಾಸಕ
 ಕಂಬಳದ ಕೋಣಗಳ ಜೊತೆಗೇ ಹೋದರೆ ಅನುಕೂಲ.

------------------------------
   ಕೆ.ಎಸ್.ಈಶ್ವರಪ್ಪ ಬಿಜೆಪಿಯ ನಿಷ್ಠಾವಂತ ಕಾರ್ಯಕರ್ತ
-ಎಚ್.ಡಿ.ಕುಮಾರ ಸ್ವಾಮಿ, ಜೆಡಿಎಸ್ ರಾಜ್ಯಾಧ್ಯಕ್ಷ
  ಜೆಡಿಎಸ್‌ನಲ್ಲಿ ಅಂತಹ ನಿಷ್ಠಾವಂತ ಕಾರ್ಯಕರ್ತರಿಲ್ಲದೇ ಇರುವ ಬಗ್ಗೆ ಅಸಮಾಧಾನವೇ?
------------------------------
   ಕಲ್ಲು ಎಸೆದರೆ ಮಾವಿನಕಾಯಿ ಉದುರುವುದಿಲ್ಲ

  -ಡಿ.ವಿ.ಸದಾನಂದ ಗೌಡ, ಕೇಂದ್ರ ಸಚಿವ

ಬಹುಶಃ ಮಂತ್ರದಲ್ಲೇ ಮಾವಿನ ಕಾಯಿ ಉದುರಿಸುವ ಜಾಣರಿರಬೇಕು.

------------------------------
   ಮೋದಿಯನ್ನು ಟೀಕಿಸುವುದರಿಂದ ಏನೂ ಸಿಗಲ್ಲ
-ಬಾಬಾರಾಮ ದೇವ್, ಯೋಗಗುರು
  ಹಳೆಯ ನೋಟುಗಳಂತೂ ಮರಳುವುದಿಲ್ಲ.
------------------------------
   ಹಿಂಸಾರಹಿತವಾದ ಕಂಬಳಕ್ಕೆ ನನ್ನ ಸಂಪೂರ್ಣ ಬೆಂಬಲವಿದೆ
-ವಿಶ್ವೇಶತೀರ್ಥ ಸ್ವಾಮೀಜಿ, ಪೇಜಾವರ ಮಠ
  ಉಡುಪಿಯಲ್ಲಿ ನಡೆಯುತ್ತಿರುವ ಮನುಷ್ಯ ಹಿಂಸೆಗಳ ಬಗ್ಗೆ ತಮ್ಮ ಅಭಿಪ್ರಾಯ ಇನ್ನೂ ಹೇಳಿಲ್ಲ.

------------------------------

   ಕಾನೂನಿಂದಲೇ ಎಲ್ಲವನ್ನೂ ಮಾಡಲಾಗದು
-ಯು.ಟಿ.ಖಾದರ್, ಸಚಿವ
  ಅಂದರೆ ಕೆಲವೊಮ್ಮೆ ಕಾನೂನಿನ ಜೊತೆಗೆ ದುಡ್ಡೂ ಅಗತ್ಯ ಎಂಬ ಸಂದೇಶವೇ?

  ಯಡಿಯೂರಪ್ಪ ಹಾಗೂ ಈಶ್ವರಪ್ಪ ಇಬ್ಬರೂ ಜೋಕರ್‌ಗಳು
-ಬಸವರಾಜ ರಾಯರೆಡ್ಡಿ, ಸಚಿವ
ಸಿಎಂ ಇಬ್ರಾಹೀಂ ಅವರ ಹೆಸರು ಉಲ್ಲೇಖಿಸದೇ ಇರುವುದಕ್ಕೆ ಅವರಿಗೆ ಸಿಟ್ಟಾಗಿದೆಯಂತೆ.

------------------------------
  ಮೀಸಲಾತಿ ಬೇಡವೇ ಬೇಡ ಎನ್ನುವವರ ಕೈ ಕತ್ತರಿಸಬೇಕು
-ಶಿವರಾಜ್ ತಂಗಡಗಿ, ಶಾಸಕ
  ಮೊದಲು ಮೀಸಲಾತಿ ಫಲಾನುಭವಿಗಳು ತಮ್ಮ ಹಕ್ಕುಗಳಿಗಾಗಿ ಹೋರಾಡುವುದನ್ನು ಕಲಿಯಬೇಕು.

------------------------------
  ದೇವರ ರಾಜ್ಯ ಎಂಬ ಹೆಗ್ಗಳಿಕೆಗೆ ಪಾತ್ರವಾಗಿರುವ ಕೇರಳ ರಾಕ್ಷಸರ ರಾಜ್ಯವಾಗುತ್ತಿದೆ
-ದತ್ತಾತ್ರೇಯ ಹೊಸಬಾಳೆ, ಆರೆಸ್ಸೆಸ್ ನಾಯಕ
ಹೌದು, ಬಿಜೆಪಿಯ ಮೊತ್ತ ಮೊದಲ ಶಾಸಕನೊಬ್ಬ ಆಯ್ಕೆಯಾದ ಪರಿಣಾಮ ಇರಬೇಕು.

------------------------------
   ಮುಂದೊಂದು ದಿನ ಕಸಾಯಿಖಾನೆಗಳು ಗೋಶಾಲೆಗಳಾಗಲಿವೆ
- ರಾಘವೇಶ್ವರ ಸ್ವಾಮೀಜಿ, ರಾಮಚಂದ್ರಾಪುರ ಮಠ
ಅಂದರೆ ಹೊರಗೆ ಗೋಶಾಲೆ ಫಲಕ, ಒಳಗೆ ಕಸಾಯಿಖಾನೆ.

------------------------------
  ಉ.ಪ. ಮುಖ್ಯಮಂತ್ರಿ ಅಖಿಲೇಶ್ ಯಾದವ್ ಭ್ರಷ್ಟರು ಮತ್ತು ಕ್ರಿಮಿನಲ್‌ಗಳನ್ನು ಪೋಷಿಸುತ್ತಿದ್ದಾರೆ

  -ಕೇಶವ ಪ್ರಸಾದ್ ವೌರ್ಯ, ಉ.ಪ್ರ ಬಿಜೆಪಿ ಅಧ್ಯಕ್ಷ

ಇಲ್ಲದೇ ಇದ್ದರೆ ಸಂಘಪರಿವಾರ ಆ ರಾಜ್ಯದಲ್ಲಿ ಈ ಮಟ್ಟಿಗೆ ಮೆರೆಯುವುದಕ್ಕೆ ಸಾಧ್ಯವಾಗುತ್ತಿರಲಿಲ್ಲ.
------------------------------
  ಬಿಎಸ್‌ವೈ-ಈಶ್ವರಪ್ಪ ನಡುವೆ ನಾನು ಹುಳಿ ಹಿಂಡಿಲ್ಲ
-ಎಂ.ಬಿ.ಬಾನು ಪ್ರಕಾಶ್, ವಿಧಾನ ಪರಿಷತ್ ಸದಸ್ಯ
  ಹುಳಿ ಹಿಂಡುವುದಕ್ಕೆ ಅಲ್ಲಿ ಹಾಲಾದರೂ ಎಲ್ಲಿದೇ?

 ಅಧಿಕಾರ ನಮಗೆ ಅಭಿವೃದ್ಧ್ದಿಯ ಮಾರ್ಗ ಮಾತ್ರ
-ದೇವೇಂದ್ರ ಫಡ್ನವೀಸ್, ಮಹಾರಾಷ್ಟ್ರ ಮಖ್ಯಮಂತ್ರಿ
  ಯಾರ ಅಭಿವೃದ್ಧಿ ಎನ್ನುವುದು ಪ್ರಶ್ನೆ.
------------------------------
  ಯುಗಾದಿ ನಂತರ ಕಾಂಗ್ರೆಸ್‌ಗೆ ಒಳ್ಳೆಯ ದಿನ -ಡಿ.ಕೆ.ಶಿವಕುಮಾರ್, ಸಚಿವ
  ನೀವೇನಾದರೂ ರಾಜೀನಾಮೆ ನೀಡುವ ಸಾಧ್ಯತೆಗಳಿವೆಯೇ?
------------------------------

 ಗಡಿ ಇಲ್ಲದ ದೇಶ ದೇಶವೇ ಅಲ್ಲ
-ಡೊನಾಲ್ಡ್ ಟ್ರಂಪ್, ಅಮೆರಿಕ ಅಧ್ಯಕ್ಷ
  ಸದ್ಯಕ್ಕೆ ಅಮೆರಿಕ ಅಧ್ಯಕ್ಷರಿಗೆ ಮತಿ ಇಲ್ಲ ಎನ್ನುವುದೇ ಎಲ್ಲರ ಆತಂಕ.

------------------------------

  ಐಟಿ ದಾಳಿ ನಡೆದಾಕ್ಷಣ ಅಪರಾಧಿಗಳಲ್ಲ

-ಕೆ.ಜೆ.ಜಾರ್ಜ್, ಸಚಿವ

ಆರೋಪಿಗಳೆಂದಾದರೂ ಕರೆಯಲು ಅಪ್ಪಣೆ ಕೊಡಿ.

------------------------------
  ನಾನು ಮಾತನಾಡುವ ವ್ಯಕ್ತಿಯಲ್ಲ, ಕೆಲಸ ಮಾಡುವವನು
- ವಿಶ್ವನಾಥ ಶೆಟ್ಟಿ, ಲೇಕಾಯುಕ್ತ
  ಯಾರ ಪರವಾಗಿ ಎಂಬ ಅನುಮಾನವೂ ಜನರಲ್ಲಿ ಇದೆ.
------------------------------
  ಕಾನೂನು ಬೇಕಾದರೂ ಮುರಿಯಬಹುದು, ಸಂಪ್ರದಾಯ, ಸಂಸ್ಕೃತಿ ಮುರಿಯಲು ಸಾಧ್ಯವಿಲ್ಲ
-ಯು.ಟಿ. ಖಾದರ್, ಸಚಿವ
  ಸಂಪ್ರದಾಯ, ಸಂಸ್ಕೃತಿ ಉಳಿಸಲು ಕಾನೂನನ್ನು ಮುರಿಯಿರಿ ಎಂದು ಕರೆ ನೀಡುತ್ತಿದ್ದೀರಾ?
------------------------------
   ಬಿಜೆಪಿ ಜೊತೆ 25 ವರ್ಷಗಳ ಮೈತ್ರಿ ವ್ಯರ್ಥ
-ಶಿವಸೇನೆ
  ಸಂಗ್ರಹಿಸಿಟ್ಟ ಸಂಪತ್ತೆಲ್ಲ ನೋಟು ನಿಷೇಧದಿಂದಾಗಿ ವ್ಯರ್ಥವಾಯಿತೇ?
------------------------------
  ಭಾರತದಲ್ಲಿ ಪ್ರಜಾಪ್ರಭುತ್ವ ಬಲಿಷ್ಠ
-ರಮಾನಾಥ ರೈ, ಸಚಿವ
  ದೇಹದ ತೂಕ ಹೆಚ್ಚಾದಷ್ಟು ಬಲಿಷ್ಠರಾಗುತ್ತಾರೆ ಎಂದು ನಂಬಿಕೆಯ ಮೇಲೆ ಈ ಹೇಳಿಕೆ.
--------------------------------------------

‘ವಾರ್ತಾ ಭಾರತಿ’ ನಿಮಗೆ ಆಪ್ತವೇ ? ಇದರ ಸುದ್ದಿಗಳು ಮತ್ತು ವಿಚಾರಗಳು ಎಲ್ಲರಿಗೆ ಉಚಿತವಾಗಿ ತಲುಪುತ್ತಿರಬೇಕೇ? 

ಬೆಂಬಲಿಸಲು ಇಲ್ಲಿ  ಕ್ಲಿಕ್ ಮಾಡಿ

Comments (Click here to Expand)

ಇನ್ನಷ್ಟು ಓ ಮೆಣಸೇ ಸುದ್ದಿಗಳು