varthabharthi

ಫೋಕಸ್

ಸೌದಿ: ಮಂತ್ರವಾದಿ ಅರಬ್ ವ್ಯಕ್ತಿಯ ಬಂಧನ

ವಾರ್ತಾ ಭಾರತಿ : 4 Apr, 2017

ಮದೀನ,ಎ. 4: ಮಂತ್ರವಾದಿಯೊಬ್ಬನನ್ನು ಪೊಲೀಸರು ಬಂಧಿಸಿದ್ದಾರೆ. ಒಂದು ಮನೆಯನ್ನು ಕೇಂದ್ರವಾಗಿಟ್ಟು ಅರಬ್ ಪ್ರಜೆಯೊಬ್ಬ ಮಂತ್ರವಾದದ ಚಟುವಟಿಕೆ ಆರಂಭಿಸಿದ್ದಾನೆ. ಹಲವರು ಅಲ್ಲಿಗೆ ಬಂದು ಹೋಗುತ್ತಿದ್ದಾರೆ ಎಂದು ಮಾಹಿತಿ ಸಿಕ್ಕಿದ ಹಿನ್ನೆಲೆಯಲ್ಲಿ ಪೊಲೀಸರು ತನಿಖೆ ನಡೆಸಿ ಬಂಧಿಸಿದ್ದಾರೆ ಎಂದು ಮದೀನ ಪೊಲೀಸ್ ವಕ್ತಾರ ಕರ್ನಲ್ ಹುಸೈನ್ ಕಹ್ತಾನಿ ಹೇಳಿದ್ದಾರೆ.

ಈತನ ಸೇವಕನಾದ ಇನ್ನೊಬ್ಬನ್ನು ಕೂಡಾಪೊಲೀಸರು ವಶಕ್ಕೆ ಪಡೆದಿದ್ದಾರೆ. ಮಂತ್ರವಾದಕ್ಕೆ ಸಂಬಂಧಿಸಿದ ಪುಸ್ತಕಗಳು, ಪತ್ರಗಳು, ತಾಯಿತಗಳು ಇತ್ಯಾದಿ ಈತನಿಂದ ವಶಪಡಿಸಿಕೊಳ್ಳಲಾಗಿದೆ. ಜೊತೆಗೆ 50,000ರಿಯಾಲ್ ಕೂಡಾ ಪತ್ತೆಯಾಗಿದೆ ಎಂದು ಮದೀನ ಪೊಲೀಸ್ ವಕ್ತಾರ ತಿಳಿಸಿದರು.

‘ವಾರ್ತಾ ಭಾರತಿ’ ನಿಮಗೆ ಆಪ್ತವೇ ? ಇದರ ಸುದ್ದಿಗಳು ಮತ್ತು ವಿಚಾರಗಳು ಎಲ್ಲರಿಗೆ ಉಚಿತವಾಗಿ ತಲುಪುತ್ತಿರಬೇಕೇ? 

ಬೆಂಬಲಿಸಲು ಇಲ್ಲಿ  ಕ್ಲಿಕ್ ಮಾಡಿ

Comments (Click here to Expand)