varthabharthi

ಓ ಮೆಣಸೇ

ಓ.. ಮೆಣಸೇ..

ವಾರ್ತಾ ಭಾರತಿ : 1 May, 2017
ಪಿ.ಎ. ರೈ

ಉಪಚುನಾವಣೆ ಗೆಲುವಿನ ನಂತರ ಸಿದ್ದರಾಮಯ್ಯ ಪಿತ್ತ ನೆತ್ತಿಗೇರಿದೆ - ಯಡಿಯೂರಪ್ಪ, ಮಾಜಿ ಮುಖ್ಯಮಂತ್ರಿ

ಸಿದ್ದರಾಮಯ್ಯ ಗೆಲುವನ್ನು ಬಿಜೆಪಿಯೊಳಗಿನ ಜನರೇ ಹೆಚ್ಚು ಸಂಭ್ರಮಿಸುವಂತಿದೆ.

---------------------

ಯಡಿಯೂರಪ್ಪರೇ ಮುಂದಿನ ಮುಖ್ಯಮಂತ್ರಿ - ಈಶ್ವರಪ್ಪ, ವಿ.ಪ.ವಿ.ನಾಯಕ

ಬಿಜೆಪಿ ಮುಂದಿನ ಬಾರಿ ಅಧಿಕಾರಕ್ಕೆ ಬರುವುದಿಲ್ಲ ಎನ್ನುವುದು ನಿಮಗೆ ಖಚಿತವಿದ್ದಂತಿದೆ.

---------------------

ನಾನು ಕಾಂಗ್ರೆಸ್‌ನಲ್ಲಿರುತ್ತೇನೋ,ಇಲ್ಲವೆ ಎಲ್ಲಿರುತ್ತೇನೆ ಎಂಬುದು ನನಗೇ ಗೊತ್ತಿಲ್ಲ - ಎಚ್.ವಿಶ್ವನಾಥ್, ಮಾಜಿ ಸಂಸದ

ತಮ್ಮ ಮೆಚ್ಚಿನ ಜ್ಯೋತಿಷಿಯ ಬಳಿ ಒಮ್ಮೆ ಕೇಳಿ ನೋಡಬಾರದೇ?

---------------------

ರಾಜ್ಯ ಬಿಜೆಪಿಯಲ್ಲಿ ಸಣ್ಣ ಪುಟ್ಟ ಅಭಿಪ್ರಾಯ ಭೇದವಿದೆ ಅಷ್ಟೇ - ಶೋಭಾ ಕರಂದ್ಲಾಜೆ, ಸಂಸದೆ

 ಈಶ್ವರಪ್ಪರ ಹೆಸರು ಸಣ್ಣ ಮತ್ತು ಯಡಿಯೂರಪ್ಪ ಹೆಸರು ಪುಟ್ಟ ಎಂದು ತಾವು ಮುದ್ದಾಗಿ ಕರೆಯುತ್ತಿದ್ದೀರಿ.

---------------------

ಮುಂದಿನ ಚುನಾವಣೆಯಲ್ಲಿ ಶ್ರೀರಾಮ ಸೇನೆ ಯಾವುದೇ ಪಕ್ಷದೊಂದಿಗೆ ಮೈತ್ರಿ ಮಾಡಲ್ಲ - ಪ್ರಮೋದ್ ಮುತಾಲಿಕ್, ಶ್ರೀರಾಮ ಸೇನೆ ಸಂಸ್ಥಾಪಕ

ತನಿಖೆ ನಡೆಸಿದರೆ ವಿದೇಶಿ ಉಗ್ರರ ಜೊತೆಗಿರುವ ಮೈತ್ರಿ ಬೆಳಕಿಗೆ ಬರಬಹುದೇನೋ?
---------------------

ನಾನು ಬದುಕಿರುವಾಗಲೇ ಜೆಡಿಎಸ್ ಪಕ್ಷವನ್ನು ಮತ್ತೆ ಅಧಿಕಾರಕ್ಕೆ ತರಬೇಕು - ಎಚ್.ಡಿ.ದೇವೆಗೌಡ, ಮಾಜಿ ಪ್ರಧಾನಿ

ಅಲ್ಲಿಯವರೆಗೆ ಜೆಡಿಎಸ್ ಬದುಕಿದ್ದರೆ ತಾನೇ.

---------------------
ಕೆಂಪು ದೀಪ ಇಲ್ಲದೆ ಓಡಾಡಿದ್ರೆ ನಮ್ಮಂಥವರಿಗೆ ತೂಕ ಇರಲ್ಲ - ವಿನಯ ಕುಲಕರ್ಣಿ, ಸಚಿವ

ಮೊದಲು ಇರುವ ಬೊಜ್ಜಿನ ತೂಕ ಇಳಿಸಿ.

---------------------

ಪ್ರಜಾಪ್ರಭುತ್ವದಲ್ಲಿ ಭಿನ್ನಾಭಿಪ್ರಾಯಕ್ಕೆ ಸ್ವಾಗತವಿದೆ - ಮೆಹಬೂಬ ಮುಫ್ತಿ, ಜಮ್ಮು-ಕಾಶ್ಮೀರ ಮುಖ್ಯಮಂತ್ರಿ

ಪೆಲೆಟ್ ಗನ್ ನಿಮ್ಮ ಪ್ರಜಾಪ್ರಭುತ್ವದ ಸಂಕೇತವೇ?
---------------------

ಜನಪರ ಯೋಜನೆ ತಂದಾಗ ಅದರ ಬಗ್ಗೆ ಭಯ ಹುಟ್ಟಿಸುವ ತಜ್ಞರೂ ಹುಟ್ಟಿಕೊಳ್ಳುತ್ತಾರೆ - ವೀರಪ್ಪ ಮೊಯ್ಲಿ, ಸಂಸದ

ಆದರೆ ನೀವು ಮಹಾಕಾವ್ಯ ಬರೆದು ಹುಟ್ಟಿಸುತ್ತಿರುವ ಭಯ ಏನು ಕಡಿಮೆಯೇ?
---------------------

ದನ-ಕರುಗಳ ಜೊತೆಗೆ ಹುಲಿ,ಆನೆ ಕೂಡಾ ನಮ್ಮದು ಎಂಬ ಭಾವನೆ ಮೂಡಿದಾಗ ಪರಿಸರ ಉಳಿಯುತ್ತದೆ - ಪ್ರಕಾಶ್ ರೈ, ನಟ

ಜೊತೆಗಿರುವ ಮನುಷ್ಯರ ಕುರಿತಂತೆಯೂ ಈ ಭಾವನೆ ಮೂಡುವುದು ಬೇಡವೇ?
---------------------

ರಾಜ್ಯದಲ್ಲಿ ಅಧಿಕಾರಕ್ಕೆ ಬಂದ 24 ಗಂಟೆಯೊಳಗೆ ರೈತರ ಸಾಲ ಮನ್ನಾ ಮಾಡುವೆ - ಎಚ್.ಡಿ.ಕುಮಾರಸ್ವಾಮಿ, ಮಾಜಿ ಮುಖ್ಯಮಂತ್ರಿ

ನೀವು ಈ ಹಿಂದೆ ಮುಖ್ಯಮಂತ್ರಿಯಾಗಿದ್ದಾಗ ನಿಮ್ಮ ಗಡಿಯಾರ ಕೆಟ್ಟು ಹೋಗಿತ್ತೆ?
---------------------

 ದೇಶದಲ್ಲಿ ಗೋವಿಗೆ ರಕ್ಷಣೆ ಇದೆ, ಯೋಧರಿಗಿಲ್ಲ - ರಮ್ಯಾ, ಮಾಜಿ ಸಂಸದೆ

ಗೋರಕ್ಷಕರ ಕೈಯಲ್ಲಿರುವಷ್ಟು ಆಧುನಿಕ ಶಸ್ತ್ರ ನಮ್ಮ ಯೋಧರ ಕೈಯಲ್ಲಿಲ್ಲವೇ?
---------------------

ಹಾವಾಯಿ ಚಪ್ಪಲಿ ಧರಿಸುವ ಸಾಮಾನ್ಯ ವ್ಯಕ್ತಿಯೂ ವಿಮಾನದಲ್ಲಿ ಪ್ರಯಾಣಿ ಸುವಂತಾಗಬೇಕು - ನರೇಂದ್ರ ಮೋದಿ, ಪ್ರಧಾನಿ

ಚಪ್ಪಲಿಯಲ್ಲಿ ಬಾರಿಸಿದ ಶಿವಸೇನೆ ಸಂಸದನನ್ನು ಬಹಿಷ್ಕರಿಸಿದ್ದಕ್ಕೆ ಈ ಹೇಳಿಕೆಯೇ?
---------------------

ಈಗ ಬಿಜೆಪಿಯಲ್ಲಿ ನಡೆಯತ್ತಿರುವುದು ಒಳ್ಳೆಯ ಬೆಳವಣಿಗೆ. ನನ್ನ ಬೆಂಬಲ ಈಶ್ವರಪ್ಪರಿಗೆ - ಐವನ್ ಡಿಸೋಜಾ, ವಿ.ಪ.ಮುಖ್ಯ ಸಚೇತಕ

ಅಂದರೆ ಕಾಂಗ್ರೆಸ್ ತೊರೆಯುವ ಹುನ್ನಾರವೇ?
---------------------

ಕೇಸರಿ ಭಯೋತ್ಪಾದನೆ ಎಂಬುದು ಆಗಿನ ಗೃಹಸಚಿವ ಪಿ.ಚಿದಂಬರಂ ಅವರ ಸೃಷ್ಟಿ - ಸಾಧ್ವಿಪ್ರಜ್ಞಾಸಿಂಗ್

ನಿಮ್ಮ ಸೃಷ್ಟಿಯ ಹಿಂದೆ ಯಾರಿದ್ದಾರೆ ಎನ್ನುವುದನ್ನೂ ಹೇಳಿ.
---------------------

ನಮಗೆ ಕಡ್ಲೆಪುರಿ, ಚಿತ್ರಾನ್ನ ತಿಂದುಕೊಂಡಿದ್ದ ಹಳೆಯ ಯಡಿಯೂರಪ್ಪ ಬೇಕು -ಸೊಗಡು ಶಿವಣ್ಣ, ಮಾಜಿ ಸಚಿವ

ನಮಗೆ ನಾಡನ್ನೇ ಮುಕ್ಕಿ ತಿಂದಿರುವ ಯಡಿಯೂರಪ್ಪ ಬೇಕು ಎನ್ನುವುದು ಬಿಜೆಪಿಯೊಳಗಿನ ಕೆಲವು ಭ್ರಷ್ಟರ ಆಗ್ರಹ.
---------------------

ಕಾಲ ಕಾಲಕ್ಕೆ ನಮ್ಮ ವರಸೆಗಳನ್ನು ಬದಲಿಸುತ್ತಿರಬೇಕು - ಬಾಬಾ ರಾಮ್‌ದೇವ್, ಯೋಗ ಗುರು

ತಮ್ಮ ಸಂಸ್ಥೆಯ ಉತ್ಪನ್ನಗಳನ್ನಂತೂ ಬದಲಿಸಲೇಬೇಕು.

---------------------

ನಾವು ಅಪ್ಪ ಅಮ್ಮನಿಗೆ ಹುಟ್ಟಿದವರು - ಈಶ್ವರಪ್ಪ, ಬಿಜೆಪಿ ನಾಯಕ

ಹೌದೇ?

‘ವಾರ್ತಾ ಭಾರತಿ’ ನಿಮಗೆ ಆಪ್ತವೇ ? ಇದರ ಸುದ್ದಿಗಳು ಮತ್ತು ವಿಚಾರಗಳು ಎಲ್ಲರಿಗೆ ಉಚಿತವಾಗಿ ತಲುಪುತ್ತಿರಬೇಕೇ? 

ಬೆಂಬಲಿಸಲು ಇಲ್ಲಿ  ಕ್ಲಿಕ್ ಮಾಡಿ

Comments (Click here to Expand)

ಇನ್ನಷ್ಟು ಓ ಮೆಣಸೇ ಸುದ್ದಿಗಳು