varthabharthi

ಓ ಮೆಣಸೇ

ಓ.. ಮೆಣಸೇ..

ವಾರ್ತಾ ಭಾರತಿ : 15 May, 2017
ಪಿ.ಎ. ರೈ

ಅಖಿಲೇಶ್‌ನನ್ನು ಸಿಎಂ ಮಾಡಬಾರದಾಗಿತ್ತು - ಮುಲಾಯಂ ಸಿಂಗ್ ಯಾದವ್, ಉ.ಪ್ರ.ಮಾಜಿಮುಖ್ಯಮಂತ್ರಿ

ಅದಕ್ಕೆ ತಾನೇ ಜನರು ಈ ಬಾರಿ ಅವರನ್ನು ಸಿಎಂ ಮಾಡದೇ ಇರುವುದು.

 ---------------------

ಹಿಂದಿನ ಸರಕಾರದ ಮೂವರು ಮುಖ್ಯಮಂತ್ರಿಗಳನ್ನು ನೆನಪಿಸಿಕೊಂಡಾಗ ಜನತೆ ಈಗಲೂ ಬೆಚ್ಚಿ ಬೀಳುತ್ತಾರೆ - ವಿ.ಅರ್.ಸುದರ್ಶನ್, ಕೆಪಿಸಿಸಿ ಪ್ರ.ಕಾರ್ಯದರ್ಶಿ

ಮತದಾರರನ್ನು ನೆನೆದು ಇದೀಗ ಆ ಮೂವರು ಮಾಜಿ ಮುಖ್ಯಮಂತ್ರಿಗಳು ಬೆಚ್ಚಿ ಬೀಳುತ್ತಿದ್ದಾರಂತೆ.

---------------------

 ಬಿಹಾರ ಮಾದರಿಯಲ್ಲಿ ಕರ್ನಾಟಕ ಗೂಂಡಾ ರಾಜ್ಯ ಆಗುತ್ತಿದೆ - ನಿರ್ಮಲಾ ಸೀತಾರಾಮನ್, ಕೇಂದ್ರ ಸಚಿವೆ

  ಗುಜರಾತ್ ಮಾದರಿಯಲ್ಲಿ ಗೂಂಡಾರಾಜ್ಯವಾದರೆ ಸಂತೋಷವೇ?

---------------------

  ವಿಸ್ತಾರಕ್ ಕಾರ್ಯಕ್ರಮದಲ್ಲಿ ಪ್ರತೀ ತಾಲೂಕು ಮಟ್ಟದಲ್ಲಿ ಕಬಡ್ಡಿ ಪಂದ್ಯಾವಳಿ ಆಯೋಜಿಸಲಾಗುತ್ತದೆ - ಸಂತೋಷ್, ಬಿಜೆಪಿ ರಾ.ಸಂ.ಸಹಕಾರ್ಯದರ್ಶಿ

   ನಿಮ್ಮ ಪಕ್ಷದೊಳಗಿನ ಕಬಡ್ಡಿ ಮುಗಿಯುವುದು ಎಂದು?

---------------------

   ಯಡಿಯೂರಪ್ಪನವರೇ ಮುಂದಿನ ಮುಖ್ಯಮಂತ್ರಿ - ಕೆ.ಎಸ್.ಈಶ್ವರಪ್ಪ, ಬಿಜೆಪಿ ನಾಯಕ

   ಅಂದರೆ ಬಿಜೆಪಿ ಅಧಿಕಾರಕ್ಕೇರುವುದಕ್ಕೆ ನೀವು ಬಿಡುವುದೇ ಇಲ್ಲ ಎಂದಾಯಿತು.

---------------------

   ಈಶ್ವರಪ್ಪರಿಗೆ ಬರ ಎಂದರೆ ಏನು ಎಂಬುದೇ ಗೊತ್ತಿಲ್ಲ -ಸಿದ್ದರಾಮಯ್ಯ, ಮುಖ್ಯಮಂತ್ರಿ

   ಸದ್ಯಕ್ಕೆ ಯಡಿಯೂರಪ್ಪರಿಗೆ ಬರೆ ಹಾಕುವುದಕ್ಕಾಗಿ ಬರ ಬೇಕಾಗಿದೆ.

---------------------

   ಟಿಕೆಟ್ ಬೇಕಾದವರು ಆಯಾ ಕ್ಷೇತ್ರಗಳಿಗೆ ಹೋಗಿ ಪಕ್ಷದ, ಜನರ ಕೆಲಸ ಮಾಡಬೇಕು -ಯಡಿಯೂರಪ್ಪ, ಮಾಜಿ ಮುಖ್ಯಮಂತ್ರಿ

   ತಮಗೆ ಟಿಕೆಟ್ ತಪ್ಪಿಸುವ ಕೆಲಸದಲ್ಲೇ ಎಲ್ಲರೂ ಬಿಝಿಯಾಗಿದ್ದಾರೆ.

---------------------

   ಮನುಷ್ಯ ಮೃಗವಲ್ಲ - ಕಲ್ಲಡ್ಕ ಪ್ರಭಾಕರ ಭಟ್, ಆರೆಸ್ಸೆಸ್ ನಾಯಕ

   ಆದರೆ ಕೆಲವು ನಾಯಕರು ಅವರನ್ನು ಮೃಗವನ್ನಾಗಿ ಪರಿವರ್ತಿಸಬಲ್ಲರು.

---------------------  

ಕಾಂಗ್ರೆಸ್-ಬಿಜೆಪಿಗೆ ಸಮಸ್ಯೆ ಪರಿಹರಿಸುವ ಇಚ್ಛಾಶಕ್ತಿ ಇಲ್ಲ - ಎಚ್. ಡಿ.ಕುಮಾರಸ್ವಾಮಿ, ಜೆಡಿಎಸ್ ರಾಜ್ಯಾಧ್ಯಕ್ಷ

ಕಾಂಗ್ರೆಸ್-ಜೆಡಿಎಸ್ ಅಥವಾ ಬಿಜೆಪಿ-ಜೆಡಿಎಸ್‌ಗೆ ಮಾತ್ರ ಇಚ್ಛಾ ಶಕ್ತಿ ಇರುವುದು ಅಲ್ಲವೇ?

---------------------

ಬರ ಪರಿಹಾರ ದೇವರು ಕೊಟ್ಟರೂ ಪೂಜಾರಿ ಕೊಡುತ್ತಿಲ್ಲ ಎಂಬಂತಾಗಿದೆ - ಶೋಭಾ ಕರಂದ್ಲಾಜೆ, ಸಂಸದೆ

ಜನಾರ್ದನ ಪೂಜಾರಿಯನ್ನು ದೇವರೇ ಕೈ ಬಿಟ್ಟಂತಿದೆ.

---------------------

ಪಕ್ಷದ ಹೈಕಮಾಂಡ್‌ಗೆ ನನ್ನ ಸಾಮರ್ಥ್ಯ ಏನೆಂದು ಗೊತ್ತಿದೆ - ಡಾ.ಜಿ.ಪರಮೇಶ್ವರ್, ಸಚಿವ

  ಹೌದು. ಅದಕ್ಕಾಗಿಯೇ ಕೆಪಿಸಿಸಿ ರಾಜ್ಯಾಧ್ಯಕ್ಷ ಸ್ಥಾನ ಬೇಗನೇ ವರ್ಗಾವಣೆಯಾಗಲಿದೆ.

---------------------

  ಎಡಪಂಥೀಯ ಉಗ್ರವಾದವನ್ನು ನಿಗ್ರಹಿಸಲು ನಾವು ತಂತ್ರಜ್ಞಾನದ ಶಕ್ತಿಯನ್ನು ಸಮರ್ಥವಾಗಿ ಬಳಸಿಕೊಳ್ಳಬೇಕು -ರಾಜನಾಥ್‌ಸಿಂಗ್, ಕೇಂದ್ರ ಸಚಿವ

  ಬಲಪಂಥೀಯ ಉಗ್ರವಾದವನ್ನು ಪೋಷಿಸುವುದೇ ನಿಮ್ಮ ತಂತ್ರ-ಜ್ಞಾನದ ಶಕ್ತಿಯೇ?

---------------------

   ನಾನು - ಬಿಎಸ್‌ವೈ ಇಂಡಿಯಾ-ಪಾಕಿಸ್ತಾನ ಅಲ್ಲ -ಕೆ.ಎಸ್.ಈಶ್ವರಪ್ಪ, ಬಿಜೆಪಿ ನಾಯಕ

   ಭಾರತ ಮತ್ತು ಪಾಕಿಸ್ತಾನ ಜಗಳವನ್ನೇ ಯಡಿಯೂರಪ್ಪ-ಈಶ್ವರಪ್ಪ ಜಗಳಕ್ಕೆ ಹೋಲಿಸುವ ಮಟ್ಟಕ್ಕೆ ತಲುಪಿದೆ.

---------------------

   ಇಲ್ಲಿ ಮೋಡ ಬಿತ್ತನೆ ಮಾಡಿದರೆ ಎಲ್ಲಿ ಮಳೆ ಬರುತ್ತದೆ ಎಂದು ಗೊತ್ತಾಗುವುದಿಲ್ಲ -ಟಿ.ಬಿ.ಜಯಚಂದ್ರ, ಸಚಿವ

   ಹಣದ ಮಳೆಯಂತೂ ನಿಮ್ಮ ಖಜಾನೆಗೆ ಸುರಿಯುತ್ತದೆ ಬಿಡಿ.

---------------------

   ಸಿದ್ದರಾಮಯ್ಯ ಮುಖ್ಯಮಂತ್ರಿ ಆದಾಗ ಕಣ್ಣೀರು ಬಂದಿತ್ತು -ಎಚ್.ವಿಶ್ವನಾಥ, ಮಾಜಿ ಸಂಸದ

   ಅಷ್ಟು ದುಃಖವಾಗಿತ್ತೇ?

---------------------

  ದೇಶ ಬದಲಾಗುತ್ತಿದೆ -ನರೇಂದ್ರ ಮೋದಿ, ಪ್ರಧಾನಿ

  ಬಡವಾಗುತ್ತಿದೆ ಎಂದರೆ ಇನ್ನೂ ಅರ್ಥಪೂರ್ಣ.

---------------------

   ಕೆಪಿಸಿಸಿ ಅಧ್ಯಕ್ಷ ಸ್ಥಾನ ಅರ್ಜಿ ಹಾಕಿ ಪಡೆಯುವ ಹುದ್ದೆಯಲ್ಲ - ಡಾ.ಎಚ್.ಸಿ. ಮಹದೇವಪ್ಪ, ಸಚಿವ

   ಸೂಟ್‌ಕೇಸ್ ಕೊಟ್ಟು ಪಡೆಯುವ ಹುದ್ದೆಯೇ?

---------------------

   ಜನಪ್ರತಿನಿಧಿಗಳಿಗೆ ಕನಿಷ್ಠ ವಿದ್ಯಾರ್ಹತೆಯನ್ನು ಕಡ್ಡಾಯಗೊಳಿಸಬೇಕು - ಡಿ.ವಿ.ಸದಾನಂದಗೌಡ, ಮಾಜಿ ಮುಖ್ಯಮಂತ್ರಿ

  ವಿದ್ಯಾರ್ಹತೆಯಿಲ್ಲದಿದ್ದರೂ ಪರವಾಗಿಲ್ಲ, ಸಂಸ್ಕೃತಿ, ಮಾನ, ಮರ್ಯಾದೆಯನ್ನಾದರೂ ಕಡ್ಡಾಯಗೊಳಿಸಬೇಕು.

---------------------

 ಭಯೋತ್ಪಾದನೆ, ಹಿಂಸೆ, ಭ್ರಷ್ಟಾಚಾರ ನಿವಾರಣೆಗೆ ಮಧ್ವಾಚಾರ್ಯರ ಉಪದೇಶಗಳ ಪ್ರಸಾರ ಅನಿವಾರ್ಯ -ವಿಶ್ವೇಶತೀರ್ಥ ಸ್ವಾಮೀಜಿ, ಪೇಜಾವರ ಮಠ

  ಉಡುಪಿಯಲ್ಲಿ ಕೂತು ತಾವು ಉತ್ಪಾದಿಸುವ ಭಯವೇನು ಕಡಿಮೆಯೇ?

---------------------

  ನಂಜನಗೂಡು,ಗುಂಡ್ಲುಪೇಟೆ ಉಪಚುನಾವಣೆ ನಂತರ ಸಿದ್ದರಾಮಯ್ಯ ಅಹಂಕಾರ ಹೆಚ್ಚಾಗಿದೆ -ಜಗದೀಶ್ ಶೆಟ್ಟರ್, ವಿ.ಪ.ಪ್ರ.ನಾಯಕ

  ಸೋತರೂ ಬಿಜೆಪಿಯ ನಾಯಕರ ದುರಹಂಕಾರ ಇಳಿಯಲಿಲ್ಲವಲ್ಲ, ಇದಕ್ಕೇನು ಹೇಳುತ್ತೀರಿ?

---------------------

   ಇಂದಿನ ಕೆಲಸವನ್ನು ಇಂದೇ ಮುಗಿಸಿ -ಬಾಬಾ ರಾಮ್‌ದೇವ್, ಯೋಗ ಗುರು

   ಒಟ್ಟಿನಲ್ಲಿ ಜನಸಾಮಾನ್ಯರ ಬದುಕನ್ನು ಮುಗಿಸಲು ಅತ್ಯಾತುರರಾಗಿದ್ದೀರಿ ಎಂದಾಯಿತು.

---------------------

   ಈ ಹಿಂದೆ ನನ್ನನ್ನು ಕೆಪಿಸಿಸಿ ಅಧ್ಯಕ್ಷನನ್ನಾಗಿ ಮಾಡಿದ ಸಂದರ್ಭದಲ್ಲಿ ನಾನು ಮಲೇಶ್ಯಾದಲ್ಲಿದ್ದೆ - ಮಲ್ಲಿಕಾರ್ಜುನ ಖರ್ಗೆ, ಕಾಂಗ್ರೆಸ್ ನಾಯಕ

    ಮತ್ತೆ ಮಲೇಶ್ಯಕ್ಕೆ ಹೋಗುವ ಉದ್ದೇಶವಿದೆಯೇ?

‘ವಾರ್ತಾ ಭಾರತಿ’ ನಿಮಗೆ ಆಪ್ತವೇ ? ಇದರ ಸುದ್ದಿಗಳು ಮತ್ತು ವಿಚಾರಗಳು ಎಲ್ಲರಿಗೆ ಉಚಿತವಾಗಿ ತಲುಪುತ್ತಿರಬೇಕೇ? 

ಬೆಂಬಲಿಸಲು ಇಲ್ಲಿ  ಕ್ಲಿಕ್ ಮಾಡಿ

Comments (Click here to Expand)

ಇನ್ನಷ್ಟು ಓ ಮೆಣಸೇ ಸುದ್ದಿಗಳು