ಇಂಡಿ ರೇಸ್ನಲ್ಲಿ ಭೀಕರ ಅಪಘಾತ; ಚಾಲಕ ಪಾರು
ಇಂಡಿಯಾನಾಪೊಲಿಸ್, ಮೇ 29: ಪ್ರತಿಷ್ಠಿತ ಇಂಡಿ 500 ರೇಸ್ನಲ್ಲಿ ರವಿವಾರ ಭೀಕರ ಅಪಘಾತದಲ್ಲಿ ರೇಸ್ ಕಾರು ಪುಡಿ ಪುಡಿಯಾಗಿದ್ದರೂ ಚಾಲಕ ನ್ಯೂಝಿಲೆಂಡ್ ಮೂಲಕ ಸ್ಕಾಟ್ ಡಿಕ್ಸನ್ ಪವಾಡ ಸದೃಶ ಪಾರಾಗಿದ್ದಾರೆ.
ಟ್ರಾಕ್ನಲ್ಲಿ ಡಿಕ್ಸನ್ ಅವರು 53ನೆ ಲ್ಯಾಪ್ ವೇಳೆ ಎದುರಾಳಿ ಬ್ರಿಟಿಷ್ ಚಾಲಕ ಜೀ ಹೋವರ್ಡ್ ಅವರನ್ನು ಹಿಂದಿಕ್ಕುವ ಯತ್ನದಲ್ಲಿ ಡಿಕ್ಸನ್ ಕಾರು ಹೋವರ್ಡ್ ಕಾರಿಗೆ ಡಿಕ್ಕಿ ಹೊಡೆದು ಎತ್ತರಕ್ಕೆ ಹಾರಿ ತಡೆಗೋಡೆಯ ಮೇಲೆ ಅಪ್ಪಳಿಸಿದೆ. ಕಾರಿನ ಬಹುತೇಕ ಭಾಗಗಳು ಪುಡಿ ಪುಡಿಯಾಗಿ ತಡೆಗೋಡೆಯ ಮೇಲೆ ಬಿದ್ದಿದೆ.ಆದರೆ 2008ರ ಚಾಂಪಿಯನ್ ಡಿಕ್ಸನ್ ಸಣ್ಣ ಪುಟ್ಟ ಗಾಯಗಳಿಂದ ಅಪಾಯದಿಂದ ಪಾರಾಗಿದ್ದಾರೆ.
ಕಾರಿನಲ್ಲಿದ್ದ ಆಧುನಿಕ ರಕ್ಷಣಾ ವ್ಯವಸ್ಥೆ ಡಿಕ್ಸನ್ ಅವರನ್ನು ಕಾಪಾಡಿದೆ.ಈ ಅಪಘಾತ ದ ಬಳಿಕ ಡಿಕ್ಸನ್ ಮತ್ತು ಜೇ ಹೋವರ್ಡ್ ರೇಸ್ನಿಂದ ದೂರ ಸರಿದರು.
Next Story