varthabharthi

ಝಲಕ್

ಗೋರಕ್ಷಣೆ

ವಾರ್ತಾ ಭಾರತಿ : 16 Jun, 2017
-ಮಗು

‘‘ಮಗಾ, ಹಟ್ಟಿಯಲ್ಲಿ ದನಗಳಿಗೆ ಹುಲ್ಲು ಹಾಕು...’’ ತಾಯಿ ಕೂಗಿದಳು.

‘‘ನನಗೆ ಹೊರಗೆ ಕೆಲಸ ಇದೆ. ಈ ಕೆಲಸವೆಲ್ಲ ನನ್ನಿಂದಾಗಲ್ಲ...’’

ಅಪ್ಪ ಕೂಗಿದ, ‘‘ಮಗಾ, ನಮ್ಮ ದೊಡ್ಡ ಹಸುವಿಗೆ ಎರಡು ದಿನದಿಂದ ಮೈಗೆ ಹುಷಾರಿಲ್ಲ...ಗೋಡಾಕ್ಟರನ್ನ ಕರಕಂಡ್ ಬರಲ್ವಾ...’’

‘‘ನೋಡು...ನಿನ್ನ ದನ, ಹಟ್ಟಿ ಇದೆಲ್ಲ ನನ್ನಿಂದಾಗಲ್ಲ....’’ ಮಗ ಸಿಟ್ಟಾದ.

‘‘ಸರಿ ಕರೆದ ಹಾಲನ್ನಾದರೂ ಎರಡು ಮನೆಗೆ ಕೊಟ್ಟು ಬಾ...’’ ಅಪ್ಪ ಗೋಗರೆದ.

ಮಗ ಸಿಟ್ಟಿನಿಂದ ಎದ್ದು ಮನೆ ಯಿಂದ ಹೊರ ಹೋದ. ರಾತ್ರಿಯಾಗುವಾಗ ಮನೆಗೆ ಸುದ್ದಿ ತಲುಪಿತು. ಮಗ ಗೋರಕ್ಷಕರ ಜೊತೆಗೆ ಸೇರಿ ಅದ್ಯಾರನ್ನೋ ಥಳಿಸಿ ಕೊಂದು, ಜೈಲು ಸೇರಿದ್ದಾನೆ ಎಂದು.

ಎರಡು ದಿನದಿಂದ ರೋಗ ಪೀಡಿತವಾಗಿದ್ದ ಹಸು ಅಂದು ರಾತ್ರಿ ತನ್ನ ಉಸಿರು ಬಿಟ್ಟಿರುವು ದನ್ನು ನೋಡಿ ಗಂಡ, ಹೆಂಡತಿ ಜೋರಾಗಿ ಅಳತೊಡಗಿದರು.

 

Comments (Click here to Expand)

ಇನ್ನಷ್ಟು ಝಲಕ್ ಸುದ್ದಿಗಳು