varthabharthi

ಇ-ಜಗತ್ತು

ಜಿಯೋಗೆ ಸೆಡ್ಡು ಹೊಡೆದ ವೊಡಾಫೋನ್: ನೆಟ್ ಪ್ಯಾಕ್ ನಲ್ಲಿ ಭಾರೀ ಆಫರ್ ಘೋಷಣೆ

ವಾರ್ತಾ ಭಾರತಿ : 19 Jun, 2017

ಹೊಸದಿಲ್ಲಿ, ಜೂ,19: ರಿಲಾಯನ್ಸ್ ಜಿಯೋ ಗ್ರಾಹಕರನ್ನು ಸೆಳೆಯುತ್ತಿರುವುದರಿಂದ ಪೈಪೋಟಿ ನೀಡಬೇಕಾದ ಟೆಲಿಕಾಂ ಸಂಸ್ಥೆಗಳು ಒಂದೊಂದಾಗಿ ಭಾರೀ ಆಫರ್ ಗಳನ್ನು ಘೋಷಿಸುತ್ತಿದೆ. ಈ ನಡುವೆ ವೊಡಾಫೋನ್ ಸೂಪರ್ ನೈಟ್ ಆಫರನ್ನು ಘೋಷಿಸಿದ್ದು, ಈ ಮೂಲಕ ಗ್ರಾಹಕರು ಅನ್ ಲಿಮಿಟೆಡ್ ಡಾಟಾವನ್ನು ಗಂಟೆಯೊಂದಕ್ಕೆ 6 ರೂ,ಗಿಂತಲೂ ಕಡಿಮೆ ದರದಲ್ಲಿ ಬಳಸಬಹುದು.

ರಿಲಾಯನ್ಸ್ ಜಿಯೊದ 10 ರೂ,ಗೆ 1 ಜಿಬಿ 4ಜಿ ಡಾಟಾಗೆ ಸೆಡ್ಡುಹೊಡೆಯುವ ಆಫರ್ ಇದಾಗಿದ್ದು, 29 ರೂ. ಪ್ಯಾಕ್ ರಿಚಾರ್ಜ್ ಮಾಡಿಸಿ ಗ್ರಾಹಕರು ಮಧ್ಯರಾತ್ರಿ 1 ಗಂಟೆಯಿಂದ ಬೆಳಗ್ಗೆ 6 ಗಂಟೆಯವರೆಗೆ ಅನ್ ಲಿಮಿಟೆಡ್ ಡಾಟಾ ಬಳಸಬಹುದಾಗಿದೆ.

ಈ ಆಫರನ್ನು ಮಧ್ಯರಾತ್ರಿ 1 ಗಂಟೆಯ ನಂತರ ಮಾತ್ರವೇ ಬಳಸಬಹುದಾಗಿದೆ. “ವೊಡಾಫೋನ್ ಸೂಪರ್ ನೈಟ್ ಪ್ಯಾಕ್ ಮೂಲಕ ಗ್ರಾಹಕರು ಅನಿಯಮಿತ ಡಾಟಾವನ್ನು ಗಂಟೆಗೆ ಕೇವಲ 6 ರೂ.ನಂತೆ ಬಳಸಬಹುದು” ಎಂದು ವೊಡಾಫೋನ್ ಹೇಳಿದೆ.

‘ವಾರ್ತಾ ಭಾರತಿ’ ನಿಮಗೆ ಆಪ್ತವೇ ? ಇದರ ಸುದ್ದಿಗಳು ಮತ್ತು ವಿಚಾರಗಳು ಎಲ್ಲರಿಗೆ ಉಚಿತವಾಗಿ ತಲುಪುತ್ತಿರಬೇಕೇ? 

ಬೆಂಬಲಿಸಲು ಇಲ್ಲಿ  ಕ್ಲಿಕ್ ಮಾಡಿ

Comments (Click here to Expand)