varthabharthi

ಇ-ಜಗತ್ತು

ಭಾರತದ ಮಾರುಕಟ್ಟೆಗೆ ಕಾಲಿಟ್ಟ "ವನ್‌ಪ್ಲಸ್ 5 ಸ್ಮಾರ್ಟ್‌ಫೋನ್" ವಿಶೇಷತೆಗಳು...

ವಾರ್ತಾ ಭಾರತಿ : 22 Jun, 2017

ಮುಂಬೈ, ಜೂ.22: ಚೀನಾದ ವನ್‌ಪ್ಲಸ್ ಸ್ಮಾರ್ಟ್‌ಫೋನ್ ಬ್ರಾಂಡ್‌ನ ಹೊಸ ಉಪಕ್ರಮ ವನ್‌ಪ್ಲಸ್ 5 ಸ್ಮಾರ್ಟ್‌ಫೋನ್ ಜೂನ್ 20ರಂದು ವಿಶ್ವಮಾರುಕಟ್ಟೆಗೆ ಬಿಡುಗಡೆಯಾಗಿದ್ದು, 22ರಂದು ಭಾರತದ ಮಾರುಕಟ್ಟೆಗೆ ಕಾಲಿಟ್ಟಿದೆ.

  • ವೈಶಿಷ್ಟ: ವನ್‌ಪ್ಲಸ್ 5 ಸ್ಮಾರ್ಟ್‌ಫೋನ್ ಅಮೆಝಾನ್ ಇಂಡಿಯಾ ವೆಬ್‌ಸೈಟ್ ಮೂಲಕ ಜೂನ್ 22ರ ಸಂಜೆ 4:30ರಿಂದ ಗ್ರಾಹಕರಿಗೆ ಲಭ್ಯವಿದೆ. ಅಲ್ಲದೆ ವನ್‌ಪ್ಲಸ್ ಅಂಗಡಿಗಳಲ್ಲೂ ಇದು ಲಭ್ಯವಿದೆ. ಭಾರತಾದ್ಯಂತ ವಾಹನದಲ್ಲಿ ಮಾರಾಟ ಕಾರ್ಯಕ್ರಮವನ್ನೂ ಹಮ್ಮಿಕೊಳ್ಳಲಾಗುತ್ತದೆ ಎಂದು ಸಂಸ್ಥೆಯ ಪ್ರಕಟಣೆ ತಿಳಿಸಿದೆ.
  • ಫೋನಿನ ಬೆಲೆಯ ಬಗ್ಗೆ ಅಧಿಕೃತವಾಗಿ ತಿಳಿದುಬಂದಿಲ್ಲವಾದರೂ, ಇದರ ಬೆಲೆ 32,999 (6 ಜಿಬಿ ರ್ಯಾಮ್/64 ಜಿಬಿ ಸ್ಟೋರೇಜ್ ಸ್ಥಳಾವಕಾಶ ಇರುವ ಮಾದರಿ, ಹಾಗೂ 37,999(8 ಜಿಬಿ ರ್ಯಾಮ್/64 ಜಿಬಿ ಸ್ಟೋರೇಜ್ ಸ್ಥಳಾವಕಾಶದ ಮಾದರಿ) ಎಂದು ತಿಳಿದು ಬಂದಿದೆ.
  • ಈ ಫೋನ್ ಎಲ್ಲಾ ಅಂಗಡಿಗಳಲ್ಲಿ ಮಾರಾಟಕ್ಕೆ ಲಭ್ಯವಿದೆಯೇ ಎಂಬ ಬಗ್ಗೆ ಸಂಸ್ಥೆ ಮಾಹಿತಿ ನೀಡಿಲ್ಲ. ಆದರೆ ಬೆಂಗಳೂರಿನಲ್ಲಿರುವ ಸಂಸ್ಥೆಯ ‘Knowing Store’ನಲ್ಲಿ  ಈ ಫೋನಿನ ಬಗ್ಗೆ ತಿಳಿದುಕೊಳ್ಳಲು ಗ್ರಾಹಕರಿಗೆ ಅವಕಾಶ ಇರುತ್ತದೆ.

  • ಜೂನ್ 23ರಂದು ಹೊಸದಿಲ್ಲಿಯ ಆ್ಯಂಬಿಯನ್ಸ್ ಮಾಲ್, ವಸಂತ್ ಕುಂಜ್, 24ರಂದು ಬೆಂಗಳೂರಿನ ಬ್ರಿಗೇಡ್ ರಸ್ತೆಯಲ್ಲಿರುವ ವನ್‌ಪ್ಲಸ್ ಎಕ್ಸ್‌ಪೀರಿಯನ್ಸ್ ಸ್ಟೋರ್ ಹಾಗೂ ಅಳಂದೂರಿನಲ್ಲಿರುವ ಟ್ರಾನ್ಸ್‌ಕಾರ್ ಇಂಡಿಯಾದಲ್ಲಿ, 25ರಂದು ಹೈದರಾಬಾದ್‌ನ ಜುಬಿಲಿ ಹಿಲ್ಸ್‌ನಲ್ಲಿರುವ ಇಂಡಿಯನ್ ಮೋಟಾರ್‌ಸೈಕಲ್‌ನಲ್ಲಿ ವಾಹನದಲ್ಲಿ ಮಾರಾಟ ಕಾರ್ಯಕ್ರಮ ನಡೆಯಲಿದೆ.
  • ಮಿಡ್‌ನೈಟ್ ಬ್ಲಾಕ್ ಮತ್ತು ಸ್ಲೇಟ್ ಗ್ರೇ- ಈ ಎರಡು ಬಣ್ಣಗಳಲ್ಲಿ ದೊರೆಯುತ್ತದೆ.
  • 5.5. ಇಂಚ್ ಫುಲ್ ಎಚ್‌ಡಿ ಆಪ್ಟಿಕ್ ಅಮೋಲೆಡ್ ಡಿಸ್‌ಪ್ಲೇ, 6ಜಿಬಿ / 8ಜಿಬಿ ರ್ಯಾಮ್‌ಗಳಿವೆ. ಅಡ್ರೆನೊ 540 ಜಿಪಿಯು, 3300 ಎಂಎಎಚ್ ನಾನ್ ರಿಮೂವೆಬಲ್ ಬ್ಯಾಟರಿ, ಪ್ರೊಪ್ರೈಟರಿ ಡ್ಯಾಷ್ ಚಾರ್ಜಿಂಗ್ ತಂತ್ರಜ್ಞಾನ, ಬ್ಲೂಟೂಥ್ 5.0,ಎನ್‌ಎಫ್‌ಸಿ, ಜಿಪಿಎಸ್, ವೈ-ಫೈ ಮತ್ತು 4ಜಿ ಎಲ್‌ಟಿಇ, ಅಂಡ್ರಾಯ್ಡ್ 7.1.. ನೌಗಾಟ್ ಆಧರಿತ ಆಕ್ಸಿಜನ್ ಒಎಸ್ 4.5, ಎರಡು ನ್ಯಾನೊ ಸಿಮ್ ಕಾರ್ಡ್ ವ್ಯವಸ್ಥೆ ಹೊಂದಿದೆ. 16ಎಂಪಿ ಮತ್ತು 20 ಎಂಪಿ -ಡ್ಯುಯೆಲ್ ರಿಯರ್ ಕ್ಯಾಮರಾ ಹೊಂದಿದೆ.

‘ವಾರ್ತಾ ಭಾರತಿ’ ನಿಮಗೆ ಆಪ್ತವೇ ? ಇದರ ಸುದ್ದಿಗಳು ಮತ್ತು ವಿಚಾರಗಳು ಎಲ್ಲರಿಗೆ ಉಚಿತವಾಗಿ ತಲುಪುತ್ತಿರಬೇಕೇ? 

ಬೆಂಬಲಿಸಲು ಇಲ್ಲಿ  ಕ್ಲಿಕ್ ಮಾಡಿ

Comments (Click here to Expand)