varthabharthi

ಓ ಮೆಣಸೇ

ಮೋದಿ ದುರ್ಬಲ ಪ್ರಧಾನಿ

ವಾರ್ತಾ ಭಾರತಿ : 10 Jul, 2017


►ಮೋದಿ ದುರ್ಬಲ ಪ್ರಧಾನಿ

-ರಾಹುಲ್ ಗಾಂಧಿ, ಕಾಂಗ್ರೆಸ್ ಉಪಾಧ್ಯಕ್ಷ

♦ದುರ್ಬಲ ವಿರೋಧ ಪಕ್ಷಗಳಿರುವಾಗ ಮೋದಿ ಬಲಿಷ್ಠ ಪ್ರಧಾನಿಯಾಗಿ ಕಾಣುವುದು ಸಹಜ.

---------------------

►ಇರುವವನೇ ಮನೆಯೊಡೆಯ ಯೋಜನೆ ಶೀಘ್ರ ಜಾರಿಯಾಗಲಿದೆ

-ಶಕುಂತಲಾ ಶೆಟ್ಟಿ, ಶಾಸಕಿ

♦ಜನಪ್ರತಿನಿಧಿಗಳೆಲ್ಲ ವಿಧಾನಸೌಧವನ್ನು ತಮ್ಮ ತಮ್ಮ ಹೆಸರಿಗೆ ಬರೆದುಕೊಂಡರೇ?

---------------------

►ಇಸ್ರೇಲ್-ಭಾರತ ಜೋಡಿ ಸ್ವರ್ಗದಲ್ಲೇ ನಿಶ್ಚಯವಾಗಿದೆ

-ಬೆಂಜಮಿನ್ ನೆತನ್ಯಾಹು, ಇಸ್ರೇಲ್ ಪ್ರಧಾನಿ

♦ಇಸ್ರೇಲ್ ಬೆಂಕಿಯಲ್ಲಿ ಮೋದಿ ಸಹಗಮನ ಮಾಡಿ ತಮ್ಮ ಪಾತಿವ್ರತ್ಯವನ್ನು ಸಾಬೀತು ಮಾಡಬೇಕೇ?

---------------------

►ನನ್ನ ಝಂಡ ಬದಲಾಗಿದೆ ಹೊರತು ಅಜೆಂಡಾ ಅಲ್ಲ

-ಎಚ್.ವಿಶ್ವನಾಥ್, ಮಾಜಿ ಸಚಿವ

♦ಸಿದ್ದರಾಮಯ್ಯರನ್ನು ವಿರೋಧಿಸುವ ಅಜೆಂಡಾ ಕುರಿತು ಹೇಳಿಕೆ.

---------------------

►ಜೆಡಿಎಸ್‌ನಲ್ಲಿ ಸೂಟ್‌ಕೇಸ್ ಸಂಸ್ಕೃತಿ ಇದೆ

-ಪ್ರಜ್ವಲ್ ರೇವಣ್ಣ, ಮಾಜಿ ಸಚಿವ ಎಚ್. ಡಿ.ರೇವಣ್ಣ ಪುತ್ರ

♦ಅದು ಜೆಡಿಎಸ್‌ನ ಸನಾತನ ಸಂಸ್ಕೃತಿಯಂತೆ.

---------------------

►ವಿಧಾನಸಭೆ ಚುನಾವಣೆ ದೃಷ್ಟಿಯಲ್ಲಿಟ್ಟು ಕೊಂಡು ರಾಜ್ಯದ ನಾನಾ ಕಡೆ ತಿಂಗಳಿಗೊಂದು ಜನಾಂಗದ ಸಮಾವೇಶ ನಡೆಸಲಾಗುವುದು

-ಎಚ್.ಡಿ.ದೇವೇಗೌಡ, ಮಾಜಿ ಪ್ರಧಾನಿ

♦ಆ ಜನಾಂಗದ ಪ್ರಗತಿಯನ್ನು ದೃಷ್ಟಿಯಲ್ಲಿಟ್ಟು ಕೊಂಡು ಯಾವಾಗ ಸಮಾವೇಶ ಮಾಡುತ್ತೀರಿ?

---------------------

►ಕಾಂಗ್ರೆಸ್‌ನವರು ದಲಿತರಿಗೆ ಕುರಿ, ಕೋಳಿ ಕೊಟ್ಟು ಮೂಗಿಗೆ ತುಪ್ಪ ಹಚ್ಚಿ ರಾಜಕಾರಣ ಮಾಡುತ್ತಾರೆ

- ಸಿ.ಟಿ.ರವಿ,  ಶಾಸಕ

♦ಕುರಿ, ಕೋಳಿ ಸಾಂಬಾರಿಗೆ ತುಪ್ಪದ ಬದಲು ಎಣ್ಣೆ ಬಳಸಿದರಾಯಿತು.

--------------------
►ರಾಹುಲ್ ಗಾಂಧಿಗೆ ಇನ್ನೂ ಮೆಚ್ಯೂರಿಟಿ ಬಂದಿಲ್ಲ

-ಯಡಿಯೂರಪ್ಪ, ಮಾಜಿ ಮುಖ್ಯಮಂತ್ರಿ

♦ಅವರಿಗಾಗಿ ಹುಡುಗಿ ಹುಡುಕುತ್ತಿದ್ದೀರಾ?

---------------------

►ಮುಂದಿನ ವಿಧಾನಸಭೆ ಚುನಾವಣೆಯಲ್ಲಿ ನಮ್ಮ ಕುಟುಂಬದಿಂದ ಎರಡೇ ಮಂದಿ ಸ್ಪರ್ಧೆ

-ಎಚ್.ಡಿ.ಕುಮಾರಸ್ವಾಮಿ, ಮಾಜಿ ಮುಖ್ಯಮಂತ್ರಿ

♦ಉಳಿದವರೆಲ್ಲ ಬೇರೆ ಪಕ್ಷದಿಂದ ಸ್ಪರ್ಧಿಸಲಿದ್ದಾರೆ ಎಂದಾಯಿತು.

---------------------
►ರಾಹುಲ್ ಗಾಂಧಿಯಂತಹ ಬಚ್ಚಾನಿಂದ ನರೇಂದ್ರ ಮೋದಿ ಏನೂ ಕಲಿಯಬೇಕಾಗಿಲ್ಲ

-ಶೋಭಾ ಕರಂದ್ಲಾಜೆ, ಸಂಸದೆ

♦ಯಾರಿಂದಲಾದರೂ ಸರಿ, ಮೊದಲು ಒಂದಿಷ್ಟು ಕಲಿಯಲಿ.

---------------------

►ಸಚಿವ ಸಂಪುಟ ವಿಸ್ತರಣೆ ಮುಂದಕ್ಕೆ ಹೋಗಿರುವುದಕ್ಕೆ ಆಷಾಢ ಕಾರಣವಲ್ಲ

- ಸಿದ್ದರಾಮಯ್ಯ, ಮುಖ್ಯಮಂತ್ರಿ

♦ಅಷಾಢಭೂತಿ ಹೇಳಿಕೆ ಎಂದರಂತೆ ದೇವೇಗೌಡ.

---------------------

►ರಜನಿಕಾಂತ್ ಆರೋಗ್ಯವೃದ್ಧಿಗಾಗಿ ಅಮೆರಿಕದಲ್ಲಿ ಜೂಜಾಡುತ್ತಿದ್ದಾರೆ

- ಸುಬ್ರಮಣಿಯನ್ ಸ್ವಾಮಿ, ಬಿಜೆಪಿ ಮುಖಂಡ

♦ನನ್ನೊಂದಿಗೆ ಜೂಜಾಟದಲ್ಲಿ ಸೋತವರ ಹತಾಶೆ ಹೇಳಿಕೆ ಎನ್ನುತ್ತಿದ್ದಾರಂತೆ ರಜನಿಕಾಂತ್.

---------------------

►ಉಡುಪಿಯಲ್ಲಿ ನಡೆದಿರುವುದು ಇಫ್ತಾರ್ ಕೂಟವಲ್ಲ, ಸೌಹಾರ್ದ ಭೋಜನ

-ವಿಶ್ವೇಶತೀರ್ಥ ಸ್ವಾಮೀಜಿ, ಪೇಜಾವರ ಮಠ

♦ಜೊತೆಗೆ, ನಡೆದಿರುವುದು ನಮಾಝ್ ಅಲ್ಲ ಯೋಗಾಸನ ಎಂಬ ಹೇಳಿಕೆಯನ್ನೂ ಕೊಟ್ಟು ಬಿಡಿ.

---------------------

►ದತ್ತಪೀಠ ವಿವಾದ ಕುರಿತಾದ ತೀರ್ಮಾನವನ್ನು ದಿಢೀರಾಗಿ ತೆಗೆದುಕೊಳ್ಳಲು ಸಾಧ್ಯವಿಲ್ಲ

- ರೋಶನ್ ಬೇಗ್, ಸಚಿವ

♦ಅಂದರೆ ವಿವಾದ ನಿನ್ನೆ ಶುರುವಾದದ್ದಷ್ಟೇ ಎನ್ನುತ್ತೀರಾ?

 ---------------------

►ಆಪರೇಷನ್ ಕಮಲದಿಂದ ನಮಗೆ ಬಹಳಷ್ಟು ಅನುಭವ ಆಗಿದೆ

- ಎಚ್.ಡಿ.ದೇವೇಗೌಡ, ಮಾಜಿ ಪ್ರಧಾನಿ

♦ಆ ಅನುಭವವನ್ನು ಬಳಸಿಕೊಂಡು ನೀವೂ ಆಪರೇಷನ್‌ಗೆ ಇಳಿಯುವ ಯೋಜನೆ ಇದೆಯೇ?

---------------------

►ದಲಿತರು ಯಾವುದೇ ಹುದ್ದೆ ನೀಡಿದರೂ ನಿಭಾಯಿಸುತ್ತಾರೆ

- ಡಾ.ಜಿ.ಪರಮೇಶ್ವರ್, ಕೆಪಿಸಿಸಿ ಅಧ್ಯಕ್ಷ

♦ತಲೆ ತಲಾಂತರಗಳಿಂದ ಮಲ ಹೊರುತ್ತಾ ಬಂದದ್ದು ಇದೇ ಕಾರಣದಿಂದ.

---------------------

►ಬೇರೆಯವರ ಮೇಲೆ ತಮ್ಮ ನಿಲುವು, ವಿಚಾರಗಳನ್ನು ಬಲವಂತವಾಗಿ ಹೇರುವ ಜನರನ್ನು ದೂರವಿಡಬೇಕು

-ವೆಂಕಯ್ಯ ನಾಯ್ಡು, ಕೇಂದ್ರ ಸಚಿವ

♦ಮತ್ತೇಕೆ ತಡ, ಆರೆಸ್ಸೆಸ್‌ನಿಂದ ದೂರವಿದ್ದರಾಯಿತು.

---------------------

►ಗೋವಾ ಸರಕಾರವನ್ನು ಅಧಿಕಾರದಿಂದ ಕೆಳಗಿಳಿಸಲು ನಾವು ಎಂದೂ ಅಪಮಾರ್ಗ ಹಿಡಿಯುವುದಿಲ್ಲ

-ಗಿರೀಶ್ ಚೂಡನ್‌ಕರ್, ಎಐಸಿಸಿ ಕಾರ್ಯದರ್ಶಿ

♦ಮತ್ಯಾವ ಮಾರ್ಗ ಹಿಡಿದಿದ್ದೀರಿ ಎನ್ನುವುದನ್ನು ಹೇಳಿ.

---------------------

►ಪ್ರಣವ್ ಮುಖರ್ಜಿ ನನ್ನ ತಂದೆಯಂತೆ

-ನರೇಂದ್ರ ಮೋದಿ, ಪ್ರಧಾನಿ

♦ಪ್ರಣವ್ ಅವರನ್ನು ಜಶೋದಾ ಬೆನ್ ಮಾವ ಎಂದು ಕರೆಯಬಹುದೇ?

---------------------

►ಜಿಎಸ್‌ಟಿ ಕ್ರಾಂತಿಯಲ್ಲ

-ಯು.ಟಿ.ಖಾದರ್, ಸಚಿವ

♦ಕಾರ್ಪೊರೇಟ್ ವಾಂತಿ ಎಂದು ಕರೆಯಬಹುದೇ?

---------------------

►ಗಂಗಾ-ಯಮುನಾ ಜೀವಂತ ಘಟಕಗಳಲ್ಲ

-ಸುಪ್ರೀಂಕೋರ್ಟ್

♦ಮನುಷ್ಯರು ಜೀವಂತ ಘಟಕ ಎನ್ನುವುದರ ಕುರಿತಂತೆ ಒಂದು ತೀರ್ಪನ್ನು ಬೇಗ ನೀಡಿ.

‘ವಾರ್ತಾ ಭಾರತಿ’ ನಿಮಗೆ ಆಪ್ತವೇ ? ಇದರ ಸುದ್ದಿಗಳು ಮತ್ತು ವಿಚಾರಗಳು ಎಲ್ಲರಿಗೆ ಉಚಿತವಾಗಿ ತಲುಪುತ್ತಿರಬೇಕೇ? 

ಬೆಂಬಲಿಸಲು ಇಲ್ಲಿ  ಕ್ಲಿಕ್ ಮಾಡಿ

Comments (Click here to Expand)

ಇನ್ನಷ್ಟು ಓ ಮೆಣಸೇ ಸುದ್ದಿಗಳು