ಮದುವೆ ಮನೆ

ಫತೇ ಮುಹಮ್ಮದ್-ರಯ್ಯಾನ್ ಸೈಯದ್

ವಾರ್ತಾ ಭಾರತಿ : 15 Jul, 2017

'ವಿಶ್ವಾಸ್ ಬಾವಾ ಬಿಲ್ಡರ್ಸ್'ನ ಆಡಳಿತ ನಿರ್ದೇಶಕ ಅಬ್ದುರ್ರವೂಫ್ ಪುತ್ತಿಗೆ-ಮರ್ಯಮ್ ಶಬೀನಾ ದಂಪತಿಯ ಪುತ್ರ ಫತೇ ಮುಹಮ್ಮದ್ ಪುತ್ತಿಗೆ ಹಾಗೂ 'ಗ್ರೀನ್ ವ್ಯಾಲಿ' ಶಿಕ್ಷಣ ಸಂಸ್ಥೆಗಳ ಅಧ್ಯಕ್ಷ ಹಾಗೂ ಆಡಳಿತ ಟ್ರಸ್ಟಿ ಸೈಯದ್ ಅಬ್ದುಲ್ ಖಾದರ್ ಬಾಶು-ಯಾಸ್ಮೀನ್ ಸಲಾಹುದ್ದೀನ್ ದಂಪತಿಯ ಪುತ್ರಿ ರಯ್ಯಾನ್ ಸೈಯದ್ ರ ವಿವಾಹ ಸಮಾರಂಭವು ಮಂಗಳೂರಿನ ಟಿ.ಎಂ.ಎ. ಪೈ ಹಾಲ್ ನಲ್ಲಿ ನೆರವೇರಿತು. 

ಸಮಾರಂಭದಲ್ಲಿ ಕ್ರಿಕೆಟಿಗ ಹರ್ಭಜನ್ ಸಿಂಗ್, ಸಚಿವ ಯು.ಟಿ.ಖಾದರ್, ಮಾಜಿ ಕೇಂದ್ರ ಸಚಿವ, ರಾಜ್ಯಸಭಾ ಸದಸ್ಯ ಆಸ್ಕರ್ ಫೆರ್ನಾಂಡಿಸ್, ಶಾಸಕರಾದ ಮೊಯ್ದಿನ್ ಬಾವ, ಜೆ.ಆರ್. ಲೋಬೊ, ರಾಜ್ಯ ಪೊಲೀಸ್ ಮಹಾನಿರ್ದೇಶಕ ಆರ್.ಕೆ.ದತ್ತ, ಐಜಿಪಿ ಹರಿಶೇಖರನ್ ಸೇರಿದಂತೆ ಸಾಮಾಜಿಕ, ಧಾರ್ಮಿಕ ರಂಗದ ಹಲವು ಗಣ್ಯರು ಭಾಗವಹಿಸಿದ್ದರು.

 

Comments (Click here to Expand)