varthabharthi

ನಿಮ್ಮ ಅಂಕಣ

ಸೈನಿಕರೆಡೆಗೆ ನಿಮ್ಮ ನಡೆಯಿರಲಿ...!

ವಾರ್ತಾ ಭಾರತಿ : 23 Jul, 2017
-ಪ್ರಸನ್ನ ಕುಮಾರ್.ಪಿ.ಎನ್. ಪುಟ್ಟಲಿಂಗಯ್ಯನಪಾಳ್ಯ, ದೊಡ್ಡಬಳ್ಳಾಪುರ.

ಮಾನ್ಯರೆ,

ಆಕಾಶದಲ್ಲಿ ಸೂರ್ಯ ದಿನಕ್ಕೆ 12 ತಾಸು ಮಾತ್ರ ಕಾಣಿಸಿಕೊಂಡರೆ, ಸೈನಿಕರು 24 ಗಂಟೆಗಳ ಕಾಲ ಸೇವೆ ಸಲ್ಲಿಸುತ್ತಿದ್ದಾರೆ. ಸೈನಿಕರು ನಮ್ಮ ದೇಶದ ಬೆನ್ನೆಲುಬು ಎಂದು ಎಷ್ಟು ಹೇಳಿದರೂ ತಪ್ಪಾಗಲಾರದು. ಹಗಲಿರುಳೆನ್ನದೆ ಭಾರತಾಂಬೆಗೆ ಸೇವೆ ಸಲ್ಲಿಸಿ, ತಮ್ಮ ಪ್ರಾಣವನ್ನು ಭೂತಾಯಿಗೋಸ್ಕರ ಪಣವಿಡುತ್ತಾರೆ. ಸೈನಿಕರಿಂದ ಭಾರತದ ಜನರು ಪರ್ವತದಷ್ಟು ಧೈರ್ಯ ತುಂಬಿಕೊಂಡು ಸುಖವಾಗಿ ನಿದ್ರೆಗೆ ಜಾರುತ್ತಾರೆ. ಗಡಿ ಕಾಯುವುದೇ ನಮ್ಮ ಧರ್ಮ ಎಂದು ಸೈನಿಕರು ಹೇಳುತ್ತಾರೆ. ದೇಶದ ಭದ್ರತೆಯನ್ನು ಕಾಪಾಡುವ ಇವರಿಗೆ ಈಗ ಭದ್ರತೆಯಿಲ್ಲದಂತಾಗಿದೆ. ನೆರೆ ದೇಶವಾದ ಚೀನಾ ಭಾರತದ ಮೇಲೆ ಯುದ್ಧಕ್ಕೆ ದಂಡೆತ್ತಿ ಬರಲು ತುದಿಗಾಲಲ್ಲಿ ನಿಂತಿದೆೆ. ಚೀನಾವು ತನ್ನ ಸೇನಾಪಡೆಯನ್ನು ಅತ್ಯಂತ ಬಲಿಷ್ಠವಾಗಿ ಮಾಡಿಕೊಂಡಿದ್ದು ಭಾರತದ ಮೇಲೆ ಯುದ್ಧಕ್ಕೆ ಸನ್ನದ್ಧ ಮಾಡಿಕೊಂಡಿದೆ. ಕಳೆದೆರಡು ವಾರಗಳಿಂದ ಭಾರತದ ಪ್ರಧಾನಿ ನರೇಂದ್ರ ಮೋದಿ ರಾಷ್ಟ್ರಪತಿ ಚುನಾವಣೆಯಲ್ಲಿ ಕಾರ್ಯನಿರತರಾಗಿದ್ದು, ಸೈನಿಕರ ಕಡೆ ಗಮನ ನೀಡುತ್ತಿಲ್ಲ. ಭಾರತಕ್ಕೆ 14ನೆ ರಾಷ್ಟ್ರಪತಿ ರಾಮನಾಥ್ ಕೋವಿಂದ್‌ರು ಆಯ್ಕೆಯಾಗಿದ್ದಾರೆ. ಇನ್ನಾದರೂ ಪ್ರಧಾನಿಯ ದೃಷ್ಟಿ ಭಾರತದ ಸೇನಾಪಡೆಯ ಕಡೆ ಹೊರಳಬೇಕಾಗಿದೆ.

ಭಯೋತ್ಪಾದಕರು ನಮ್ಮ ಸೈನಿಕರ ಮೇಲೆ ದಾಳಿ ನಡೆಸಿ ಹಲ್ಲೆ ನಡೆಸುತ್ತಿದ್ದಾರೆ. ನಮ್ಮ ಸೇನಾಪಡೆ ಭಯೋತ್ಪಾದಕರ ಹುಟ್ಟಡಗಿಸಲು ಮೋದಿಯವರ ಅನುಮತಿಗಾಗಿ ಕಾಯುತ್ತಿದೆ. ಇನ್ನು ಸೈನಿಕರಿಗೆ ಬೇಕಾದಂತಹ ಕ್ಷಿಪಣಿಗಳು, ರಕ್ಷಣಾ ಕವಚಗಳು, ಆಧುನಿಕ ಶಸ್ತ್ರಾಸ್ತ್ರಗಳು, ಆಯುಧಗಳು ಇವೆಲ್ಲವುಗಳನ್ನು ಮೋದಿಯವರು ಒದಗಿಸಬೇಕಾಗಿದೆ.

 

Comments (Click here to Expand)