varthabharthi

ನಿಮ್ಮ ಅಂಕಣ

ಮೆಟ್ರೋ ಸಿಬ್ಬಂದಿಗೆ ಕನಿಷ್ಠ ಸೌಲಭ್ಯಗಳನ್ನು ಕಲ್ಪಿಸಿ

ವಾರ್ತಾ ಭಾರತಿ : 29 Jul, 2017
-ಕೆ.ಎಸ್.ನಾಗರಾಜ್,ಹನುಮಂತನಗರ, ಬೆಂಗಳೂರು

ಮಾನ್ಯರೆ,

ಬೆಂಗಳೂರು ನಗರದಲ್ಲಿ 1ನೆ ಹಂತದ ಮೆಟ್ರೋ ರೈಲಿನ ಯೋಜನೆ ಪೂರ್ಣಗೊಂಡಿದ್ದು, ಈಗ ಕಾರ್ಯಗತವಾಗಿರುವುದು ಸಂತೋಷದ ಸಂಗತಿ. ಇದರಲ್ಲಿ ಸಾವಿರಾರು ಸಿಬ್ಬಂದಿ ದುಡಿಯತ್ತಿದ್ದಾರೆ. ಪ್ರತಿಯೊಬ್ಬ ನೌಕರರೂ 8 ಗಂಟೆಗಳ ಕಾಲ ಕೆಲಸ ಮಾಡಬೇಕಾಗಿರುತ್ತದೆ. ಆದರೆ ಮೆಟ್ರೋ ನಿಗಮದಿಂದ 18 ಸಾವಿರ ರೂಪಾಯಿಗಳನ್ನು ಪಡೆದುಕೊಳ್ಳುವ ಏಜೆನ್ಸಿಗಳು 10 ಸಾವಿರ ರೂಪಾಯಿಗಳನ್ನು ಮಾತ್ರ ನೌಕರರಿಗೆ ನೀಡುತ್ತಿದ್ದಾರೆ. ಮೆಟ್ರೋ ಸಿಬ್ಬಂದಿ 8 ಗಂಟೆಗಳ ಕಾಲ ನಿಂತುಕೊಂಡೇ ಕೆಲಸ ಮಾಡಬೇಕಾಗಿದೆ. ಅನೇಕ ನಿಲ್ದಾಣಗಳಲ್ಲಿ ಇವರಿಗೆ ಶೌಚಾಲಯವಿಲ್ಲ ಮತ್ತು ಕುಡಿಯುವ ನೀರಿನ ವ್ಯವಸ್ಥೆಯೂ ಇಲ್ಲ. ಈ ಹಿನ್ನೆಲೆಯಲ್ಲಿ ಮೆಟ್ರೋ ರೈಲಿನಲ್ಲಿ ದುಡಿಯುತ್ತಿರುವ ಕಾರ್ಮಿಕರಿಗೆ ಕನಿಷ್ಠ ಸೌಲಭ್ಯಗಳನ್ನು ನೀಡಬೇಕು. ಇವರಿಗೆ ಸ್ಟೂಲ್‌ಗಳನ್ನು (ಚೇರ್) ಒದಗಿಸಿದರೆ ಕೆಲವು ನಿಮಿಷಗಳ ಕಾಲವಾದರೂ ಇವರು ಕುಳಿತುಕೊಂಡು ವಿಶ್ರಾಂತಿ ತೆಗೆದುಕೊಳ್ಳಬಹುದು. 8 ಗಂಟೆಗಳ ಕಾಲ ನಿರಂತರವಾಗಿ ಮಹಿಳಾ ಮತ್ತು ಪುರುಷ ಸಿಬ್ಬಂದಿ ನಿಂತು ಕೆಲಸ ಮಾಡುವುದು ಎಂದರೆ ಕಷ್ಟದ ಕೆಲಸ. ಈ ಹಿನ್ನೆಲೆಯಲ್ಲಿ ಇವರಿಗೆ ಕೆಲವು ಮೂಲಸೌಲಭ್ಯಗಳನ್ನು ನೀಡುವ ನಿಟ್ಟಿನಲ್ಲಿ ಸರಕಾರ ಕೂಡಲೇ ಗಮನ ಹರಿಸಬೇಕಾಗಿದೆ.

 

Comments (Click here to Expand)