ಸೌದಿ: 472 ಕೆಜಿ ಹಶೀಶ್ ವಶ
ಜಿದ್ದಾ, ಜು. 31: ಸೌದಿ ಅರೇಬಿಯದೊಳಕ್ಕೆ 472.55 ಕೆಜಿ ಹಶೀಶ್ ಮತ್ತು 855 ಆ್ಯಂಫೆಟಮೈನ್ ಮಾತ್ರೆ (ಮಾದಕ ದ್ರವ್ಯ ಮಾತ್ರೆಗಳು)ಗಳನ್ನು ಸಾಗಿಸುವ ಯತ್ನವೊಂದನ್ನು ಜಝನ್ ಮತ್ತು ನಜ್ರನ್ನಲ್ಲಿರುವ ಗಡಿ ಸೈನಿಕರು ವಿಫಲಗೊಳಿಸಿದ್ದಾರೆ.
ಕಳೆದ ಎರಡು ವಾರಗಳ ಅವಧಿಯಲ್ಲಿ ಸೌದಿ ಅರೇಬಿಯದೊಳಗೆ ಭಾರೀ ಪ್ರಮಾಣದಲ್ಲಿ ಹಶೀಶ್ ಮತ್ತು ಆ್ಯಂಫೆಟಮೈನ್ ಮಾತ್ರೆಗಳನ್ನು ಸಾಗಿಸಲು ನಡೆಸಲಾದ ಹಲವಾರು ಯತ್ನಗಳನ್ನು ಗಡಿ ಸೈನಿಕರು ವಿಫಲಗೊಳಿಸಿದ್ದಾರೆ ಎಂದು ವಕ್ತಾರ ಕರ್ನಲ್ ಸಾಹಿರ್ ಬಿನ್ ಮುಹಮ್ಮದ್ ಅಲ್-ಹರ್ಬಿ ತಿಳಿಸಿದರು.
ಈ ಸಂಬಂಧ 10 ಇತಿಯೋಪಿಯನ್ನರು, 19 ಯಮನಿಗರು ಮತ್ತು ಓರ್ವ ಸೌದಿ ರಾಷ್ಟ್ರೀಯನನ್ನು ಬಂಧಿಸಲಾಗಿದೆ.
Next Story