ಮಕ್ಕಾದಲ್ಲಿ ಎಡವಿ ಬಿದ್ದು ಹಜ್ ಯಾತ್ರಾರ್ಥಿ ನಿಧನ
ಮಕ್ಕಾ,ಆ.1: ಕೇರಳದಿಂದ ಹಜ್ಗೆ ತೆರಳಿದ ವ್ಯಕ್ತಿಯೊಬ್ಬರು ಮೃತಪಟ್ಟ ಸ್ಥಿತಿಯಲ್ಲಿ ಕಂಡು ಬಂದಿದ್ದಾರೆ. ಖಾಸಗಿ ಸಂಸ್ಥೆಯ ಮೂಲಕ ಮಕ್ಕಕ್ಕೆ ಬಂದಿದ್ದ ಕೇರಳದ ಒಟ್ಟಪಾಲಂನ ಪುಳಿಕ್ಕಲ್ ಮುಹಮ್ಮದಲಿ(60) ಮೃತಪಟ್ಟ ವ್ಯಕ್ತಿಯಾಗಿದ್ದಾರೆ. ಹರಮ್ನ(ಮಕ್ಕದ ಪವಿತ್ರ ಮಸೀದಿ) ಸಮೀಪದ ಅಲ್ಜಿಯಾದಿಯಲ್ಲಿ ಬೆಟ್ಟದಿಂದ ಕಾಲುಎಡವಿ ಬಿದ್ದು ಮೃತಪಟ್ಟಿರಬಹುದೆಂದು ಭಾವಿಸಲಾಗಿದೆ.
ಶುಕ್ರವಾರ ಹರಮ್ನಲ್ಲಿ ತವಾಫ್ ಮಾಡುತ್ತಿದ್ದ ವೇಳೆ ಇವರು ಕಾಣೆಯಾಗಿದ್ದರು. ನಂತರ ಸಾಮಾಜಿಕ ಕಾರ್ಯಕರ್ತರು ಮತ್ತು ಸ್ವಯಂ ಸೇವಕರು ಹುಡಕಾಡಿದರೂ ಪತ್ತೆಯಾಗಿರಲಿಲ್ಲ. ಸೋಮವಾರ ಸ್ವಚ್ಛತಾ ಕಾರ್ಮಿಕರು ಬೆಟ್ಟದ ಬದಿಯ ಕಟ್ಟಡದ ಹಿಂಭಾಗದಲ್ಲಿ ಇವರ ಮೃತದೇಹವನ್ನು ನೋಡಿದ್ದಾರೆ.
ಮೃತದೇಹವನ್ನು ಅಲ್ ನೂರ್ ಆಸ್ಪತ್ರೆಯ ಶವಾಗಾರದಲ್ಲಿ ಇರಿಸಲಾಗಿದೆ. ಮಕ್ಕಾದಲ್ಲಿಯೇ ಅಂತಿಮ ಸಂಸ್ಕಾರ ನಡೆಸಲಾಗುವುದು ಎಂದು ಮಕ್ಕಾದ ಕೆ.ಎಂ.ಸಿ.ಸಿ. ಪ್ರಧಾನಕಾರ್ಯದರ್ಶಿ ಮುಜೀಬ್ ಪುಕೊಟ್ಟೂರ್ ತಿಳಿಸಿದ್ದಾರೆ.
Next Story