varthabharthi

ನಿಮ್ಮ ಅಂಕಣ

ಸರಳ ಜೀವನ ನಡೆಸೋಣ

ವಾರ್ತಾ ಭಾರತಿ : 3 Aug, 2017
-ನಾಗೇಗೌಡ ಕೀಲಾರ ಶಿವಲಿಂಗಯ್ಯ

ಮಾನ್ಯರೆ,

ಸಾಮಾನ್ಯವಾಗಿ ಬಡತನವನ್ನು ಈ ರೀತಿಯಲ್ಲೂ ವಿವರಿಸಬಹುದು. ಬಡವರ ಬಳಿ ‘ಕೆಲವೊಂದು ವಸ್ತುಗಳು ಇಲ್ಲದಿರುವುದು’ ಅಥವಾ ಅಂತಹ ವಸ್ತುಗಳನ್ನು ಕೊಳ್ಳುವ ಆರ್ಥಿಕ ಶಕ್ತಿ ಇಲ್ಲದೇ ಇರುವುದು. ಆದರೆ ಜೀವನ ನಡೆಸಲು ಏನು ಅಗತ್ಯ ಅದನ್ನು ಪೂರೈಸಿಕೊಳ್ಳುವಷ್ಟು ಆರ್ಥಿಕ ಶಕ್ತಿ ಇರುತ್ತದೆ. ಈ ಕಾರ್ಪೊರೇಟ್ ಸಂಸ್ಥೆಗಳು ನಮ್ಮನ್ನು ಬಡವರು ಎಂದು ಕರೆದು ಜೀವನಪರ್ಯಂತ ಅವರು ಉತ್ಪಾದಿಸುವ ವಸ್ತುಗಳನ್ನು ಕೊಳ್ಳಲು ನಾವು ಕಮ್ಮಿ ಕೂಲಿಗೆ ದುಡಿಯುವಂತೆ ಮಾಡುತ್ತಿದ್ದಾರೆ. ಆದ್ದರಿಂದ ನಾವು ಸರಕಾರ ಹೇಳುವ ಬಡತನದ ವ್ಯಾಖ್ಯಾನವನ್ನು ನಂಬದೆ ಸ್ವಇಚ್ಛೆಯಿಂದ ನಮಗೆ ಅಗತ್ಯವಾದ ವಸ್ತುಗಳನ್ನು ಮಾತ್ರ ಕೊಳ್ಳುತ್ತಾ ಸರಳ ಜೀವನ ನಡೆಸಿದರೆ ಈ ಬಹುರಾಷ್ಟ್ರೀಯ ಕಂಪೆನಿಗಳ ಹುನ್ನಾರವನ್ನು ತಡೆದು ದೇಶದ ಶೇ. 50ಕ್ಕಿಂತ ಹೆಚ್ಚು ಸಂಪನ್ಮೂಲಗಳು ಕೇವಲ 12 ಜನರ ಕೈಯಲ್ಲಿ ಇರುವುದನ್ನು ಇಲ್ಲವಾಗಿಸಬಹುದು. ಈ ಬಹುರಾಷ್ಟ್ರೀಯ ಕಂಪೆನಿಗಳು ತಮ್ಮ ಲಾಭದ ಸ್ವಾರ್ಥಕ್ಕಾಗಿ ಬಡವರ ಮತ್ತು ಬಡತನದ ಉತ್ಪಾದನೆ ಕೂಡ ಮಾಡುತ್ತಿದ್ದಾರೆ.

 

Comments (Click here to Expand)