varthabharthi

ನಿಮ್ಮ ಅಂಕಣ

‘ಇಂದಿರಾ ಕ್ಯಾಂಟೀನ್’ ಯಶಸ್ವಿಯಾಗಲಿ

ವಾರ್ತಾ ಭಾರತಿ : 5 Aug, 2017
-ಎಸ್.ಬಿ., ಬೆಂಗಳೂರು

ಮಾನ್ಯರೆ,

ಈಗ ಬೆಂಗಳೂರು ನಗರದ ಅದೆಷ್ಟೋ ಬೀದಿಗಳಲ್ಲಿ ಮೊಬೈಲ್ ಕ್ಯಾಂಟೀನ್‌ಗಳು ಕಾಣಸಿಗುತ್ತವೆ. ಆದರೆ ಇವುಗಳಲ್ಲ್ಲಿ ಹೆಚ್ಚಿನವುಗಳಿಗೆ ಪರವಾನಿಗೆ ಇರುವುದಿಲ್ಲ. ಅಲ್ಲದೆ ಇಲ್ಲಿ ಸಿಗುವ ಆಹಾರ ಕೂಡಾ ಗುಣಮಟ್ಟದ್ದಾಗಿರುವುದಿಲ್ಲ ಎಂಬ ದೂರು ಕೂಡಾ ಬರುತ್ತಿದೆ. ಈ ಕುರಿತು ಚರ್ಚೆಯಾಗುತ್ತಿರುವಾಗಲೇ ರಾಜ್ಯ ಸರಕಾರ ತನ್ನ ಮಹತ್ವಾಕಾಂಕ್ಷಿ ಯೋಜನೆ ‘ಇಂದಿರಾ ಕ್ಯಾಂಟೀನ್’ ಆರಂಭಿಸುವುದಕ್ಕೆ ಮುಂದಾಗಿದೆ. ಆದರೆ ಈ ಕ್ಯಾಂಟೀನ್‌ಗಳು ಪಾರ್ಕ್, ಆಟದ ಮೈದಾನ, ರಾಜಾಕಾಲುವೆಗಳ ಜಾಗದಲ್ಲಿ ನಿರ್ಮಾಣವಾಗದಿರಲಿ. ಇಂತಹ ಸ್ಥಳಗಳು ಖಾಲಿ ಇವೆ ಎಂದು ಇಲ್ಲಿ ಕ್ಯಾಂಟೀನ್ ನಿರ್ಮಿಸಿದರೆ ಈ ಜನಪರ ಯೋಜನೆ ಅರ್ಥ ಕಳೆದುಕೊಳ್ಳುತ್ತದೆ. ಅಲ್ಲದೆ ಈ ಕ್ಯಾಂಟೀನ್‌ಗಳಲ್ಲಿ ಕಡಿಮೆ ದರದ ಊಟ, ತಿಂಡಿ ಮಾರಾಟ ಕಾಟಾಚಾರವಾಗದಿರಲಿ. ಗುಣಮಟ್ಟದ ಆಹಾರ ಸಿಗಲಿ.

 

Comments (Click here to Expand)