ಅಭಿಮಾನ್ ಒಲ್ಲೆ ಎಂದ ಅಭಿ-ಐಶ್
ಅಮಿತಾಭ್ಬಚ್ಚನ್ ಹಾಗೂ ಜಯಾಬಚ್ಚನ್ ಅಭಿನಯದ ‘ಅಭಿಮಾನ್’ ಬಾಲಿವುಡ್ನ ಒಂದು ಐಕಾನ್ ಚಿತ್ರವೆಂಬುದರಲ್ಲಿ ಯಾವುದೇ ಸಂಶಯವಿಲ್ಲ. ಇದೀಗ ಅಭಿಮಾನ್ ಬಾಲಿವುಡ್ನಲ್ಲಿ ರಿಮೇಕ್ ಆಗ ಹೊರಟಿದೆ. ಈ ರಿಮೇಕ್ ಚಿತ್ರದಲ್ಲಿ ಅಭಿನ ಯಿಸಲು ಅಮಿತಾಭ್ -ಜಯಾ ದಂಪತಿಯ ಪುತ್ರ ಅಭಿಷೇಕ್ ಹಾಗೂ ಸೊಸೆ ಐಶ್ವರ್ಯಾ ರೈ ಅವರನ್ನು ನಿರ್ಮಾಪಕರು ಸಂರ್ಕಿಸಿದ್ದರಂತೆ.
ಆದರೆ ಈ ತಾರಾದಂಪತಿ ಆ ಕೊಡುಗೆಯನ್ನು ವಿನಯಪೂರ್ವಕವಾಗಿಯೇ ತಿರಸ್ಕರಿಸಿದ್ದರಂತೆ. ಇದಕ್ಕೆ ಕಾರಣವೂ ಇದೆಯಂತೆ. ಅಭಿಮಾನ್ ಭಾರತೀಯ ಚಿತ್ರರಂಗದ ಕ್ಲಾಸಿಕ್ ಚಿತ್ರವಾಗಿದ್ದು, ಅದರ ಸುಂದರನೆನಪನ್ನು ಹಾಗೆಯೇ ಉಳಿಸಿಕೊಳ್ಳಬೇಕೇ ಹೊರತು ರಿಮೇಕ್ ಮಾಡಕೂಡದು ಎಂಬುದೇ ಈ ತಾರಾ ದಂಪತಿಯ ಅಭಿಲಾಷೆಯಂತೆ. ಆದಾಗ್ಯೂ ಅಭಿ-ಐಶ್ ಜೋಡಿ ಬೆಳ್ಳಿತೆರೆಯಲ್ಲಿ ಜೊತೆಯಾಗಿ ಅಭಿನಯಿಸುವುದನ್ನು ಕಾಣಲು ಅವರ ಅಭಿಮಾನಿಗಳು ತುದಿ ಗಾಲಲ್ಲಿ ನಿಂತಿದ್ದಾರೆ. ರಾವಣ್ ಚಿತ್ರದ ಬಳಿಕ ಇವರಿಬ್ಬರೂ ಒಂದೇ ಚಿತ್ರದಲ್ಲಿ ಕಾಣಿಸಿ ಕೊಂಡಿದ್ದಿಲ್ಲ. ಅಭಿ-ಐಶ್ ಅಭಿನಯದ ಗುಲಾಬ್ ಜಾಮೂನ್ ಚಿತ್ರ ಕಳೆದ ವರ್ಷವೇ ಘೋಷಣೆ ಆಗಿದ್ದರೂ, ಸೆಟ್ಟೇರಲು ಇನ್ನೂ ಕಾಲ ಕೂಡಿಬಂದಿಲ್ಲ.