varthabharthi

ಮಾಹಿತಿ - ಮಾರ್ಗದರ್ಶನ

ಅತಿಥಿ ಉಪನ್ಯಾಸಕರ ಹುದ್ದೆಗೆ ಅರ್ಜಿ ಆಹ್ವಾನ

ವಾರ್ತಾ ಭಾರತಿ : 5 Aug, 2017

ಬೆಂಗಳೂರು, ಆ. 5: ಯುಜಿಸಿ ನಿಯಮಗಳ ಪ್ರಕಾರ ಅರ್ಹತೆಯುಳ್ಳ ಅಭ್ಯರ್ಥಿಗಳಿಂದ (ನೆಟ್/ಸ್ಲೆಟ್, ಪಿಎಚ್‌ಡಿ) ಇಂಗ್ಲಿಷ್ ಹಾಗೂ ಕಾನೂನು ವಿಷಯಗಳನ್ನು ಬೋಧನೆ ಮಾಡಲು ವಿಶ್ವ ವಿದ್ಯಾಲಯ ಕಾನೂನು ಕಾಲೇಜಿನಲ್ಲಿ 2017-18ನೆ ಸಾಲಿನ ಅತಿಥಿ ಉಪನ್ಯಾಸಕರ ಕೆಲಸ ನಿರ್ವಹಿಸಲು ಅರ್ಜಿ ಆಹ್ವಾನಿಸಲಾಗಿದೆ.

ತಮ್ಮ ಅರ್ಜಿಯನ್ನು ಬಿಳಿಹಾಳೆಯಲ್ಲಿ ಸವಿವರವಾಗಿ ಬರೆದು ಅಂಚೆಯ ಮೂಲಕ ಅಥವಾ ಖುದ್ದಾಗಿ ಪ್ರಾಂಶುಪಾಲರು ಅಥವಾ ಇಮೇಲ್ (uni-lawcollege @buv.ernet.in)  ಗೆ ಆ.10ರ ಒಳಗಾಗಿ ಕಳುಹಿಸತಕ್ಕದ್ದು. ಹೆಚ್ಚಿನ ಮಾಹಿತಿಗಾಗಿ ದೂರವಾಣಿ ಸಂಖ್ಯೆ-080-2296 1179 ಸಂಪರ್ಕಿಸಲು ಪ್ರಕಟಣೆ ಕೋರಿದೆ.

ಅರ್ಜಿ ಆಹ್ವಾನ: ಜೀವರಸಾಯನ ಶಾಸ್ತ್ರ ವಿಭಾಗ, ಜ್ಞಾನಭಾರತಿ ಸೆಂಟ್ರಲ್ ಕಾಲೇಜು ಆವರಣ ಎಂಎಸ್ಸಿ ಜೀವರಸಾಯನ ಶಾಸ್ತ್ರ ಬೋಧಿಸಲು ಅತಿಥಿ ಉಪನ್ಯಾಸಕರಿಂದ ಅರ್ಜಿ ಆಹ್ವಾನಿಸಲಾಗಿದೆ.

ಆಸಕ್ತರು ಸ್ವವಿವರ ಮತ್ತು ದೃಢೀಕೃತ ದಾಖಲೆಗಳೊಂದಿಗೆ ಮುಖ್ಯಸ್ಥರು, ಜೀವರಸಾಯನ ಶಾಸ್ತ್ರ ವಿಭಾಗ ಸೆಂಟ್ರಲ್ ಕಾಲೇಜು ಆವರಣ ಇವರಿಗೆ ಅರ್ಜಿಯನ್ನು ಆ.9ರೊಳಗಾಗಿ ಸಲ್ಲಿಸಲು ಪ್ರಕಟಣೆ ಕೋರಿದೆ.

 

Comments (Click here to Expand)