varthabharthi

ಓ ಮೆಣಸೇ

ಓ ಮೆಣಸೇ...

ವಾರ್ತಾ ಭಾರತಿ : 7 Aug, 2017

  ಮುಖ್ಯಮಂತ್ರಿ ಸಿದ್ದರಾಮಯ್ಯ ರಾಜ್ಯದಲ್ಲಿ ಬೆಂಕಿ ಹಚ್ಚುವ ಕೆಲಸ ಮಾಡುತ್ತಿದ್ದಾರೆ

- ಆರ್.ಅಶೋಕ್, ಬಿಜೆಪಿ ನಾಯಕ

ಬಹುಶಃ ರಾಜ್ಯ ಬಿಜೆಪಿಗೆ ಎಂದರೆ ಇನ್ನಷ್ಟು ಸ್ಪಷ್ಟವಾಗುತ್ತದೆ.
---------------------
 
ಗುಜರಾತ್ ಕೈ ಶಾಸಕರು ಜಾನುವಾರುಗಳು

-ಸುಬ್ರಮಣಿಯನ್ ಸ್ವಾಮಿ, ಬಿಜೆಪಿ ಮುಖಂಡ

ಮತ್ತು ಐಟಿ ಅಧಿಕಾರಿಗಳು ಗೋರಕ್ಷಕರೇ?
---------------------
 
 
ವಯಸ್ಸಾಗಿದ್ದರೂ ನಾನು ಸುಮ್ಮನೆ ಕೂರುವುದಿಲ್ಲ

-ಎಚ್.ಡಿ.ದೇವೇಗೌಡ, ಮಾಜಿ ಪ್ರಧಾನಿ

ಇತ್ತೀಚೆಗೆ ಸುಮ್ಮನೆ ಮಲಗುತ್ತಿರುವುದು ಅದಕ್ಕೇ ಎಂದು ಕಾಣುತ್ತದೆ.

---------------------
 
ಜೆಡಿಎಸ್ ವರಿಷ್ಠರು ಮಾಡಿದ ತಪ್ಪಿನಿಂದ ಬಿಜೆಪಿ ರಾಜ್ಯದಲ್ಲಿ ಇಷ್ಟೊಂದು ಬೆಳೆದಿದೆ

- ಮೋಟಮ್ಮ, ಕೆಪಿಸಿಸಿ ಉಪಾಧ್ಯಕ್ಷೆ
  ಕಾಂಗ್ರೆಸ್ ವರಿಷ್ಠರು ಮಾಡಿದ ತಪ್ಪಿಗೆ ದೇಶದಲ್ಲಿ ಬೆಳೆದಿದೆ.
---------------------
 
ಕೋಮುವಾದ ತೊಲಗಿಸಿ

-ನರೇಂದ್ರ ಮೋದಿ, ಪ್ರಧಾನಿ
  ನಿಮ್ಮನ್ನು ತೊಲಗಿಸದೆ ಅದು ಹೇಗೆ ಸಾಧ್ಯ?
---------------------
 
ಮನುಷ್ಯನಿಗೆ ಪ್ರಕೃತಿ ನಾಶದ ಹಕ್ಕಿಲ್ಲ

-ಜೆ.ಆರ್.ಲೋಬೊ, ಶಾಸಕ
  ಮನುಷ್ಯ ತನ್ನನ್ನು ತಾನು ಮನುಷ್ಯ ಎಂದು ಭಾವಿಸದೇ ಇದ್ದರೆ?
---------------------
 
ರಾಷ್ಟ್ರೀಕೃತ ಬ್ಯಾಂಕ್‌ಗಳ ಸಾಲದ ಒಂದು ಪೈಸೆಯನ್ನೂ ಕಟ್ಟಬೇಡಿ

-ರಮೇಶ್‌ಕುಮಾರ್, ಸಚಿವ
  ಅವರೇ ಬಂದು ವಸೂಲು ಮಾಡುತ್ತಾರೆ ಎಂಬ ಸೂಚನೆಯೇ?
---------------------
 
ನಾನು ಮಾತ್ರ ಭ್ರಷ್ಟ, ಉಳಿದವರೆಲ್ಲ ಶುದ್ಧರಾ?

-ನವಾಝ್ ಶರೀಫ್, ಪಾಕ್ ಮಾಜಿ ಪ್ರಧಾನಿ
 
ನಿಮ್ಮ ಮಾತಿಗೆ ನರೇಂದ್ರ ಮೋದಿ ತಲೆ ದೂಗಿದರಂತೆ.

---------------------
ಧರ್ಮ ರಾಜಕೀಯ ಅಭಿವೃದ್ಧಿಗೆ ಮಾರಕ

-ಎಚ್.ಡಿ.ಕುಮಾರಸ್ವಾಮಿ, ಮಾಜಿ ಮುಖ್ಯಮಂತ್ರಿ
 
ತಮ್ಮ ಸಮಯಸಾಧಕ ರಾಜಕೀಯಕ್ಕಿಂತ ಅದೇ ವಾಸಿ.

---------------------
 
ಮಾಜಿ ಸಚಿವ ಎಚ್.ವಿಶ್ವನಾಥ್ ಒಬ್ಬ ದಡ್ಡ

-ಆಂಜನೇಯ, ಸಚಿವ
 
ಇಷ್ಟು ಸಮಯ ಕಾಂಗ್ರೆಸ್‌ನೊಳಗಿದ್ದುದೇ ಅದಕ್ಕೆ ಸಾಕ್ಷಿ.

---------------------
 
ಲಾಲು ಸಹವಾಸ ಸಾಕಾಗಿ ಹೋಯಿತು ಅದಕ್ಕೆ ಮಹಾಮೈತ್ರಿ ಮುರಿಯಬೇಕಾಯಿತು.

- ನಿತೀಶ್‌ಕುಮಾರ್, ಬಿಹಾರ ಮುಖ್ಯಮಂತ್ರಿ
  ಆದರೆ ಒಂದೇ ಉಸುರಿಗೆ ತ್ರಿವಳಿ ತಲಾಖ್‌ನ್ನು ಕೇಂದ್ರ ಮಾನ್ಯ ಮಾಡುವುದಿಲ್ಲವಲ್ಲ?
---------------------
 
ಪ್ರಧಾನಿ ನರೇಂದ್ರ ಮೋದಿ ಹೇಳೋದೊಂದು, ಮಾಡೋದೊಂದು

-ಮಲ್ಲಿಕಾರ್ಜುನ ಖರ್ಗೆ, ಕಾಂಗ್ರೆಸ್ ನಾಯಕ
  ಹೇಳಿದ್ದನ್ನೆಲ್ಲ ಮಾಡಿದರೆ ಅವರು ಪ್ರಧಾನಿ ಹೇಗಾಗುತ್ತಾರೆ
---------------------
  ಕರ್ನಾಟಕ ಕೋಮುಗಲಭೆಯ ತವರೂರು

-ಪ್ರಹ್ಲಾದ್ ಜೋಷಿ, ಸಂಸದ
 
ನಿಮ್ಮ ಪಾಲಿಗೆ ತವರು ಮನೆಯ ಉಡುಗೊರೆ.

---------------------
 
ದೇವೇಗೌಡರು ನನ್ನ ರಾಜಕೀಯ ಗುರು

-ಝಮೀರ್ ಅಹ್ಮದ್, ಜೆಡಿಎಸ್ ಬಂಡಾಯ ಶಾಸಕ
  ಚೋರಶಿಷ್ಯನಿಗೆ ಅದೇನೋ ಗುರು ಅಂತಾರಲ್ಲ.....
---------------------
  ವಂದೇ ಮಾತರಂ ಹಾಡದಿದ್ದರೆ ತಪ್ಪಿಲ್ಲ

-ರಾಮದಾಸ್ ಅಠಾವಳೆ, ಕೇಂದ್ರ ಸಚಿವ

ಹಾಡಿದರೆ ಸರಿ ಎಂದವರು ಯಾರು?
---------------------
  ಜಾತಿಗಳ ಮಧ್ಯೆ ಬೆಂಕಿ ಹಚ್ಚುತ್ತಿರುವುದಕ್ಕೆ ಮುಖ್ಯಮಂತ್ರಿ ಸಿದ್ದರಾಮಯ್ಯರಿಗೆ ನೊಬೆಲ್ ಪ್ರಶಸ್ತಿ ಕೊಡಬೇಕು

-ಕೆ.ಎಸ್.ಈಶ್ವರಪ್ಪ, ಬಿಜೆಪಿ ನಾಯಕ
  ನಿಮಗೆ ಗೊಬೆಲ್ಸ್ ಪ್ರಶಸ್ತಿ ಕೊಟ್ಟರೆ ಹೇಗೆ?
---------------------
  ಕೇರಳ ಈಗ ದೇವರ ನಾಡಾಗಿ ಉಳಿದಿಲ್ಲ

- ಮೀನಾಕ್ಷಿ ಲೇಖಿ, ಬಿಜೆಪಿ ಸಂಸದೆ
  ದೇವರು ನಿಮ್ಮ ಕೈ ಬಿಟ್ಟಿರುವುದು ಈಗ ಸ್ಪಷ್ಟವಾಯಿತೇ?
---------------------
  ಗೋಮಾಂಸವು ವಿಷಕಾರಿ

-ಇಂದ್ರೇಶ್ ಕುಮಾರ್, ಆರೆಸ್ಸೆಸ್ ನಾಯಕ
ನಿಮ್ಮ ಸಿದ್ಧಾಂತದಷ್ಟು ವಿಷವೇನೂ ಅದರಲ್ಲಿಲ್ಲ.

---------------------
 
ನಗುವಿಗಿಂತ ಉತ್ತಮ ಮದ್ದು ಬೇರೆ ಇಲ್ಲ

-ಬಾಬಾ ರಾಮ್‌ದೇವ್, ಯೋಗಗುರು
 
ನಿಮ್ಮ ಪತಂಜಲಿ ಉತ್ಪನ್ನದ ಕುರಿತ ಜೋಕುಗಳು ಹುಟ್ಟಿದ ಬಳಿಕ ಜನರಲ್ಲಿ ಆರೋಗ್ಯ ಹೆಚ್ಚುತ್ತಿದೆ.

---------------------
ಸೇನೆ ಇರುವುದೇ ಯುದ್ಧ ಮಾಡಲು

- ಸುಶ್ಮಾ ಸ್ವರಾಜ್, ಕೇಂದ್ರ ಸಚಿವೆ

ಸೇನೆ ಇದೆ ಎನ್ನುವ ಕಾರಣಕ್ಕಾಗಿ ಗಡಿಯಲ್ಲಿ ಇರುವೆ ಬಿಟ್ಟುಕೊಂಡಿರುವುದೇ?
---------------------
 
ನಾನೇನೂ ಕಿವಿಯಲ್ಲಿ ಹೂವು ಇಟ್ಟುಕೊಂಡಿಲ್ಲ

-ಸಚಿವ ಡಿ.ಕೆ. ಶಿವಕುಮಾರ್, (ಐಟಿ ದಾಳಿಯ ಬಳಿಕ)
  ಕಿವಿಯಲ್ಲಿ ಕಮಲದ ಹೂವು ಇಟ್ಟುಕೊಂಡಿದ್ದರೆ ಈ ದಾಳಿ ನಡೆಯುತ್ತಿರಲಿಲ್ಲ.

‘ವಾರ್ತಾ ಭಾರತಿ’ ನಿಮಗೆ ಆಪ್ತವೇ ? ಇದರ ಸುದ್ದಿಗಳು ಮತ್ತು ವಿಚಾರಗಳು ಎಲ್ಲರಿಗೆ ಉಚಿತವಾಗಿ ತಲುಪುತ್ತಿರಬೇಕೇ? 

ಬೆಂಬಲಿಸಲು ಇಲ್ಲಿ  ಕ್ಲಿಕ್ ಮಾಡಿ

 

Comments (Click here to Expand)

ಇನ್ನಷ್ಟು ಓ ಮೆಣಸೇ ಸುದ್ದಿಗಳು