varthabharthi

ನಿಮ್ಮ ಅಂಕಣ

ಸೈನಿಕರ ಸಂಖ್ಯೆಯನ್ನು ಹೆಚ್ಚಿಸಿ

ವಾರ್ತಾ ಭಾರತಿ : 7 Aug, 2017
-ರಾಘವೇಂದ್ರ ಜಂಗ್ಲಿ, ಗಂಗಾವತಿ

ಮಾನ್ಯರೆ,

ಪಾಕಿಸ್ತಾನದಂತೆ ಚೀನಾ ಕೂಡ ಗಡಿಕ್ಯಾತೆ ತೆಗೆಯುತ್ತಿದೆ. ಚೀನಾಕ್ಕೆ ಭಾರತದ ಶಕ್ತಿ ಏನೆಂಬುದನ್ನು ತೋರಿಸಿಕೊಡಬೇಕು. ಆ ಮೂಲಕ ಬೇರೆ ರಾಷ್ಟ್ರಗಳಿಗೂ ಭಾರತ ಎಷ್ಟ್ರು ಬಲಿಷ್ಠವಾಗಿದೆ ಎಂಬುದನ್ನು ಪ್ರದರ್ಶಿಸಬೇಕು. ಚೀನಾ ಇತ್ತೀಚಿನ ದಿನಗಳಲ್ಲಿ ಭಾರತದ ಮೇಲೆ ಪಾಕಿಸ್ತಾನಿ ಉಗ್ರರನ್ನು ಬಳಸಿಕೊಂಡು, ಹಿಂದಿನಿಂದ ಇರಿಯುವಂತಹ ಕೆಲಸ ಮಾಡುತ್ತಿದೆ. ನಮ್ಮಲ್ಲಿ ಚೀನಾಗೆ ಸೆಡ್ಡು ಹೊಡೆಯುವ ರಕ್ಷಣಾ ಸಲಕರಣೆಗಳು ಅತ್ಯಂತ ವಿರಳವಾಗಿರುವುದರಿಂದ, ಕೇಂದ್ರ ಸರಕಾರ ಸೇನಾ ಬಲವನ್ನು ಹೆಚ್ಚಿಸಲು ಅಧಿಕ ಶಸತ್ತ್ರಾಸ್ತ್ರಗಳನ್ನು ಪೂರೈಸಲು ಮುಂದಾಗಿರುವುದು ಇದಕ್ಕೆ ಪೂರಕವಾಗಿದೆ. ಯುದ್ಧಕ್ಕೆ ಸನ್ನದ್ಧರಾಗಲು ಸೈನಿಕರಿಗೆ ಸ್ವಲ್ಪಮಟ್ಟಿಗೆ ಒಪ್ಪಿಗೆ ನೀಡಿರುವುದು ಸೂಕ್ತವಾಗಿದೆ. ಶಸ್ತ್ರಾಸ್ತ್ರಗಳನ್ನು ಹೆಚ್ಚಿಸುವುದಲ್ಲದೆ, ಸೈನಿಕರ ಸಂಖ್ಯೆಯನ್ನೂ ಹೆಚ್ಚಿಸಿ ಸೇನಾಬಲವನ್ನು ಮತ್ತಷ್ಟು ಬಲಿಷ್ಠಗೊಳಿಬೇಕಿದೆ.

 

Comments (Click here to Expand)