varthabharthi

ನಿಮ್ಮ ಅಂಕಣ

ಹನಿ ನೀರಿಗಾಗಿ ಜನರು ಪರದಾಟ

ವಾರ್ತಾ ಭಾರತಿ : 7 Aug, 2017
-ತಿಪ್ಪೇಸ್ವಾಮಿ.ಜಿ ಟಿ.ಕಲ್ಲಹಳ್ಳಿ

ಮಾನ್ಯರೆ,

ಕೂಡ್ಲಿಗಿ ತಾಲೂಕಿನ ಕೋನೆಬಾಗದ ಗ್ರಾಮವಾದ ಕಲ್ಲಹಳ್ಳಿಯಲ್ಲಿ ಸಾರ್ವಜನಿಕರು ಕುಡಿಯುವ ನೀರಿಗಾಗಿ ಪ್ರತಿನಿತ್ಯ ಪರದಾಡುವ ಪರಿಸ್ಥಿತಿ ಇದೆ. ಕುಡಿಯುವ ನೀರಿಗಾಗಿ ಪಂಚಾಯತ್‌ನಿಂದ ಕೊರೆಸಲ್ಪಟ್ಟ ಕೊಳವೆ ಬಾವಿಗಳು ಬತ್ತಿಹೋಗಿವೆ. ಅಲ್ಲದೆ ಗ್ರಾಮದ ಅಕ್ಕಪಕ್ಕದಲ್ಲಿ ಎರಡು ತೊರೆಗಳು ಹರಿಯುತ್ತವೆ. ಆದರೆ ಈ ಬಾರಿ ಮಳೆಬಾರದೆ ಅವುಗಳು ಬತ್ತಿಹೋಗಿವೆ. ಈ ತೊರೆಗಳಲ್ಲಿ ಗ್ರಾಮದ ಪ್ರಮುಖ ರಾಜಕೀಯ ಮುಖಂಡರು ದಿನನಿತ್ಯ ಟಿಪ್ಪರ್ ಲಾರಿಗಳ ಮೂಲಕ ಅಕ್ರಮವಾಗಿ ಮರಳು ಸಾಗಣೆ ಮಾಡುತ್ತಿದ್ದಾರೆ.

ಇದರ ಪರಿಣಾಮ ರೈತರ ಜಮೀನುಗಳಲ್ಲಿ ಕೃಷಿ ಮಾಡಲು ನೀರು ಇಲ್ಲದಂತಾಗಿ ಜೀವನ ಸಾಗಿಸಲು ನಗರದತ್ತ ಗುಳೆ ಹೋಗುತ್ತಿದ್ದಾರೆ. ಈ ಗ್ರಾಮದಲ್ಲಿ ಸುಮಾರು 2,500ದಷ್ಟು ಮತದಾರರಿದ್ದು 5 ಜನ ಗ್ರಾಮ ಪಂಚಾಯತ್ ಸದಸ್ಯರನ್ನು ಹೊಂದಿದೆ. ಆದರೆ ಈ ಗ್ರಾಮದ ಮೂಲಭೂತ ಸಮಸ್ಯೆಗಳನ್ನು ಕೇಳುವರು ಯಾರೂ ಇಲ್ಲದಂತಾಗಿದೆ. ಈ ಬಗ್ಗೆ ಗ್ರಾಮಸ್ಥರು ಅಧಿಕಾರಿಗಳಿಗೆ ದೂರು ನೀಡಿದರೂ ಸಂಬಂಧಪಟ್ಟವರು ಯಾವುದೇ ಕ್ರಮಕ್ಕೆ ಮುಂದಾಗುತ್ತಿಲ್ಲ 

 

Comments (Click here to Expand)