varthabharthi

ನಿಮ್ಮ ಅಂಕಣ

ಸಾರ್ವಜನಿಕ ಸ್ಥಳದಲ್ಲಿ ಧೂಮಪಾನ, ಗುಟ್ಕಾ ನಿಷೇಧಕ್ಕೆ ಬೆಲೆಯಿಲ್ಲವೇ?

ವಾರ್ತಾ ಭಾರತಿ : 9 Aug, 2017
-ಪ್ರಸನ್ನಕುಮಾರ.ಪಿ.ಎನ್, ಪುಟ್ಟಲಿಂಗಯ್ಯನಪಾಳ್ಯ, ದೊಡ್ಡಬಳ್ಳಾಪುರ.

ಮಾನ್ಯರೆ,

ಧೂಮಪಾನ, ಮದ್ಯಪಾನ, ತಂಬಾಕು, ಗುಟ್ಕಾ, ಪಾನ್‌ಮಸಾಲಾ ಮುಂತಾದವುಗಳ ಸೇವನೆಯು ಈಗಿನ ಯುವಕರಲ್ಲಿ ಒಂದು ಫ್ಯಾಶನ್ ಆಗಿದೆ. ಸಾರ್ವಜನಿಕ ಜಾಗಗಳಲ್ಲಿ ಧೂಮಪಾನ, ಗುಟ್ಕಾ ನೀಷೇಧದ ಸೂಚನಾ ಫಲಕಗಳು ಇದ್ದರೂ ಬೆಲೆಯಿಲ್ಲದಂತಾಗಿದೆ. ಈಗಾಗಲೇ ಹಲವು ರಾಜ್ಯಗಳು ಇವುಗಳಿಗೆ ಸಂಪೂರ್ಣ ನಿಷೇಧ ಹೇರಿವೆ. ಆದರೆ ಕರ್ನಾಟಕ ಸರಕಾರ ಇವುಗಳ ಸಮಸ್ಯೆಗೆ ಕಡಿವಾಣ ಹಾಕಲು ಯೋಚನೆ ಮಾಡುತ್ತಿಲ್ಲ.

ಕಳೆದ ವಾರ ಕಣ್ಣೆದುರೇ ವ್ಯಕ್ತಿಯೊಬ್ಬರು ಬಸ್ ನಿಲ್ದಾಣದಲ್ಲಿ ಸ್ಥಳೀಯರ ನಡುವೆಯೇ ಧೂಮಪಾನ ಮಾಡುತ್ತಿದ್ದುದನ್ನು ತಡೆಯಲು ಬಂದ ವ್ಯಕ್ತಿಯನ್ನು ‘‘ನನ್ನಿಷ್ಟ ಎಲ್ಲಿಯಾದರೂ ಸೇವನೆ ಮಾಡುವೆ, ನೀನೇ ಪಕ್ಕಕ್ಕೆ ನಿಲ್ಲು’’ ಎಂದು ಖಾರವಾಗಿ ಎದುರುತ್ತರ ನೀಡಿದ. ಇದೇ ಸಮಸ್ಯೆ ಇಲ್ಲಿ ಮಾತ್ರವಲ್ಲದೆ ರಾಜ್ಯದೆಲ್ಲೆಡೆ ಇರಬಹುದು.

ಸರಕಾರ ಇನ್ನಾದರೂ ಆರೋಗ್ಯಕ್ಕೆ ಹಾನಿಕರವಾಗಿರುವ ವಸ್ತುಗಳಿಗೆ ನಿಷೇದ ಹೇರಬೇಕು. ಅಲ್ಲದೆ ಕಾನೂನು ನಿಯಮಗಳನ್ನು ಉಲ್ಲಂಘನೆ ಮಾಡುವವರಿಗೆ ಶಿಕ್ಷೆ ಮತ್ತು ದುಪ್ಪಟ್ಟು ದಂಡ ವಿಧಿಸಬೇಕು ಮತ್ತು ಪ್ರತಿಯೊಂದು ಬಸ್ ನಿಲ್ದಾಣದಲ್ಲಿ ಸಿಸಿ ಟಿವಿ ಅಳವಡಿಸಬೇಕು.

 

Comments (Click here to Expand)