ವಿಶ್ವ ಬ್ಯಾಡ್ಮಿಂಟನ್ ಚಾಂಪಿಯನ್ಶಿಪ್ ರ್ಯಾಂಕಿಂಗ್: ಭಾರತ ಪ್ರಾಬಲ್ಯ
ಹೊಸದಿಲ್ಲಿ, ಆ.10: ವಿಶ್ವ ಬ್ಯಾಡ್ಮಿಂಟನ್ ಚಾಂಪಿಯನ್ಶಿಪ್ ಟೂರ್ನಿ ಆ.21ರಂದು ಗ್ಲಾಸ್ಗೊದಲ್ಲಿ ಆರಂಭವಾಗಲಿದೆ. ಟೂರ್ನಿಯಲ್ಲಿ ಭಾರತದ ಆಟಗಾರರು ಪದಕಗಳನ್ನು ಗೆದ್ದು ತವರಿಗೆ ವಾಪಸಾಗುವ ಭರವಸೆ ಮೂಡಿಸಿದ್ದಾರೆ.
ಇತ್ತೀಚಿನ ವರ್ಷಗಳಲ್ಲಿ ಭಾರತದ ಆಟಗಾರರು ಬ್ಯಾಡ್ಮಿಂಟನ್ನಲ್ಲಿ ಉತ್ತಮ ಪ್ರದರ್ಶನ ನೀಡುತ್ತಿದ್ದಾರೆ.
ವಿಶ್ವ ಚಾಂಪಿಯನ್ಶಿಪ್ನಲ್ಲಿ ಭಾರತಕ್ಕೆ ಎರಡು ಬಾರಿ ಮಾತ್ರ ಕಂಚು ಜಯಿಸಲು ಸಾಧ್ಯವಾಗಿದೆ. ಬ್ಯಾಡ್ಮಿಂಟನ್ ಆಟಗಾರ್ತಿ ಪಿ.ವಿ.ಸಿಂಧು ವರ್ಲ್ಡ್ ಚಾಂಪಿಯನ್ಶಿಪ್ನಲ್ಲಿ ಎರಡು ಬಾರಿ ಭಾರತಕ್ಕೆ ಕಂಚು ತಂದು ಕೊಟ್ಟಿದ್ದಾರೆ.
ಮಹಿಳೆಯರ ಸಿಂಗಲ್ಸ್ ರ್ಯಾಂಕಿಂಗ್ನಲ್ಲಿ ಸಿಂಧು ನಂ.4 ಮತ್ತು ಸೈನಾ ನೆಹ್ವಾಲ್ 12ನೆ ಸ್ಥಾನ ಹೊಂದಿದ್ದಾರೆ.
ಪುರುಷರ ಸಿಂಗಲ್ಸ್ನ ಅಗ್ರ 100 ಆಟಗಾರರ ಪಟ್ಟಿಯಲ್ಲಿ ಭಾರತದ 12 ಮಂದಿ ಆಟಗಾರರು ಸ್ಥಾನ ಪಡೆದಿದ್ದಾರೆ. ಈ ಪೈಕಿ ನಾಲ್ವರು ಆಟಗಾರರು ಅಗ್ರ 20 ಸ್ಥಾನ ಹೊಂದಿದ್ದಾರೆ. ಅವರೆಂದರೆ ಕೆ.ಶ್ರೀಕಾಂತ್(8), ಪ್ರಣಯ್ .ಎಸ್(15), ಅಜಯ್ ಜಯರಾಮ್(17) ಮತ್ತು ಸಾಯ್ ಪ್ರಣೀತ್ ಬಿ (19).
ಸಮೀರ್ ವರ್ಮ(29), ಸೌರಭ್ ವರ್ಮ(32), ಪಿ.ಕಶ್ಯಪ್(46), ಶುಭಶಂಕರ್ ಡೇಯ್ (73), ಅಭಿಷೇಕ್ ಯಲ್ಗಾರ್(81), ಆನಂದ್ ಪವಾರ್(95), ಸಿರಿಲ್ ವರ್ಮ(97) ಮತ್ತು ಪ್ರತುಲ್ ಜೋಶ್(99).