varthabharthi

ಕ್ರೀಡೆ

ವಿಶ್ವ ಅಥ್ಲೆಟಿಕ್ಸ್ ಚಾಂಪಿಯನ್‌ಶಿಪ್

ಜಾವೆಲಿನ್‌ನಲ್ಲಿ ಭಾರತದ ದಾವಿಂದರ್ ಸಿಂಗ್ ಕಾಂಗ್ ಅಂತಿಮ ಸುತ್ತಿಗೆ ತೇರ್ಗಡೆ

ವಾರ್ತಾ ಭಾರತಿ : 11 Aug, 2017

ಲಂಡನ್, ಆ.11: ಇಲ್ಲಿ ನಡೆಯುತ್ತಿರುವ ವಿಶ್ವ ಅಥ್ಲೆಟಿಕ್ಸ್ ಚಾಂಪಿಯನ್‌ಶಿಪ್‌ಲ್ಲಿ ಭಾರತದ ಜಾವೆಲಿನ್ ಎಸೆತಗಾರ ದಾವಿಂದರ್ ಸಿಂಗ್ ಕಾಂಗ್ ಅಂತಿಮ ಸುತ್ತಿಗೆ ತೇರ್ಗಡೆಯಾಗುವ ಮೂಲಕ ಈ ಸಾಧನೆ ಮಾಡಿದ ಭಾರತದ ಮೊದಲ ಅಥ್ಲೀಟ್ ಎನಿಸಿಕೊಂಡಿದ್ದಾರೆ. ಅಂತಿಮ ಸುತ್ತಿನ ಸ್ಪರ್ಧೆ ಆಗಸ್ಟ್ 12ರಂದು ನಡೆಯಲಿದೆ. ಇದೇ ವೇಳೆ ಭಾರತದ ಭರವಸೆಯ ಜಾವೆಲಿನ್ ಎಸೆತಗಾರ ನೀರಜ್ ಚೋಪ್ರಾ ವಿಫಲರಾಗಿದ್ದಾರೆ.

ಕಾಂಗ್ ಅವರು ಗುರುವಾರ ಅರ್ಹತಾ ಸುತ್ತಿನ ಬಿ’ ಗ್ರೂಪ್‌ನ ಸ್ಪರ್ಧೆಯಲ್ಲಿ 84.22ಮೀ ದೂರಕ್ಕೆ ಜಾವೆಲಿನ್ ಎಸೆದು ಅಂತಿಮ ಸುತ್ತಿಗೆ ಅರ್ಹತೆ ಪಡೆದರು.

 ಫೈನಲ್‌ಗೆ ಅರ್ಹತೆ ಪಡೆಯಲು 83 ಮೀಟರ್ ದೂರಕ್ಕೆ ಜಾವೆಲಿನ್ ಎಸೆಯಬೇಕಿತ್ತು. ಕಾಂಗ್ ಅವರು ಮೊದಲ ಪ್ರಯತ್ನದಲ್ಲಿ 82.22 ಮೀ, ಎರಡನೆ ಪ್ರಯತ್ನದಲ್ಲಿ 82.14 ಮೀ. ಮತ್ತು ಮೂರನೆ ಯತ್ನದಲ್ಲಿ 84.22 ಮೀಟರ್ ದೂರಕ್ಕೆ ಜಾವೆಲಿನ್ ಎಸೆದು ಅಂತಿಮ ಹಂತಕ್ಕೆ ತೇರ್ಗಡೆಯಾದರು.

ಪಂಜಾಬ್‌ನ 26ರ ಹರೆಯದ ಕಾಂಗ್ ಭುಜನೋವಿನ ನಡುವೆಯೂ ಉತ್ತಮ ಸಾಧನೆ ಮಾಡಿದರು.

 ಇದೇ ವೇಳೆ ‘ಎ’ ಗುಂಪಿನ ಅರ್ಹತಾ ಸುತ್ತಿನಲ್ಲಿ ಭಾರತದ ನೀರಜ್ ಚೋಪ್ರಾ ಮೂರು ಪ್ರಯತ್ನಗಳಲ್ಲೂ ವಿಫಲರಾದರು. ಅವರಿಗೆ ಮೂರನೆ ಯತ್ನದಲ್ಲಿ 80.54 ಮೀಟರ್ ದೂರಕ್ಕೆ ಜಾವೆಲಿನ್ ಎಸೆಯಲು ಸಾಧ್ಯವಾಯಿತು.

 

Comments (Click here to Expand)