ರಾಷ್ಟ್ರೀಯ

ಆಧಾರ್-ಪಾನ್ ಕಾರ್ಡ್ ಲಿಂಕ್ ಮಾಡಲು ಯಾವುದೇ ಕಾಲಮಿತಿ ನಿಗದಿಪಡಿಸಿಲ್ಲ: ಕೇಂದ್ರ ಸರಕಾರ

ವಾರ್ತಾ ಭಾರತಿ : 11 Aug, 2017

ಹೊಸದಿಲ್ಲಿ, ಆ.11: ಆಧಾರ್ ಕಾರ್ಡ್ ಜೊತೆಗೆ ಪಾನ್ ಕಾರ್ಡನ್ನು ಲಿಂಕ್ ಮಾಡಲು ಕೇಂದ್ರ ಸರಕಾರ ಯಾವುದೇ ಕಾಲಮಿತಿಯನ್ನು ನಿಗದಿಪಡಿಸಿಲ್ಲ ಎಂದು ಕೇಂದ್ರ ಸಚಿವ ಅರುಣ್ ಜೇಟ್ಲಿ ಲೋಕಸಭೆಗೆ ಮಾಹಿತಿ ನೀಡಿದ್ದಾರೆ.

ಪಾನ್ ಕಾರ್ಡ್ ಜೊತೆಗೆ ಆಧಾರ್ ಕಾರ್ಡನ್ನು ಲಿಂಕ್ ಮಾಡಲು ಸರಕಾರ ಕಾಲಮಿತಿಯನ್ನು ನಿಗದಿಪಡಿಸಿದೆಯೇ ಎನ್ನುವ ಪ್ರಶ್ನೆಗೆ ಅವರು “ಇಲ್ಲ” ಎಂದು ಉತ್ತರಿಸಿದರು.

ಜೂನ್ 28ರ ಅಂಕಿಅಂಶದ ಪ್ರಕಾರ ದೇಶದಲ್ಲಿ 25 ಕೋಟಿ ಪಾನ್ ಕಾರ್ಡ್ ಹೊಂದಿರುವವರಿದ್ದರು ಹಾಗೂ 111 ಕೋಟಿ ಜನರಿಗೆ ಆಧಾರ್ ಕಾರ್ಡ್ ನೀಡಲಾಗಿತ್ತು.

ಪಾನ್ ಕಾರ್ಡ್ ಜೊತೆಗೆ ಆಧಾರನ್ನು ಲಿಂಕ್ ಮಾಡಲು ಸರಕಾರ ಆಗಸ್ಟ್ 31 ಕೊನೆಯ ದಿನ ಎಂದು ಈ ತಿಂಗಳ ಆರಂಭದಲ್ಲಿ ಸರಕಾರ ಹೇಳಿತ್ತು.

 

Comments (Click here to Expand)