ಏಷ್ಯನ್ ಶಾಟ್ಗನ್ ಚಾಂಪಿಯನ್ಶಿಪ್: ಮಹೇಶ್ವರಿ ಚೌಹಾಣ್ಗೆ ಕಂಚು
ಅಸ್ತಾನಾ, ಆ.11: ಏಷ್ಯನ್ ಶಾಟ್ಗನ್ ಚಾಂಪಿಯನ್ಶಿಪ್ನಲ್ಲಿ ಶೂಟರ್ ಮಹೇಶ್ವರಿ ಚೌಹಾಣ್ ಮಹಿಳೆಯರ ವೈಯಕ್ತಿಕ ಸ್ಕೀಟ್ ಸ್ಪರ್ಧೆಯಲ್ಲಿ ಕಂಚು ಜಯಿಸಿದರು. ಅಂತಾರಾಷ್ಟ್ರೀಯ ಸ್ಪರ್ಧೆಯಲ್ಲಿ ಈ ಸಾಧನೆ ಮಾಡಿದ ಭಾರತದ ಮೊದಲ ಮಹಿಳಾ ಶೂಟರ್ ಎನಿಸಿಕೊಂಡರು.
ಮಹೇಶ್ವರಿ ಅವರು ರಶ್ಮಿ ರಾಥೋರ್ ಹಾಗೂ ಸಾನಿಯಾ ಶೇಕ್ ಜೊತೆಗೂಡಿ ಟೀಮ್ ಇವೆಂಟ್ನಲ್ಲಿ ಭಾರತಕ್ಕೆ ಬೆಳ್ಳಿ ಗೆದ್ದುಕೊಟ್ಟಿದ್ದಾರೆ.
ಈ ಮೂವರು ಶೂಟರ್ಗಳು ಒಟ್ಟು 190 ಅಂಕ ಗಳಿಸಿದರು. ಮೊದಲ ಸ್ಥಾನ ಪಡೆದ ಚೀನಾದ ಶೂಟರ್ಗಳು 195 ಅಂಕ ಗಳಿಸಿದರು. ಆತಿಥೇಯ ಕಝಕಿಸ್ತಾನ(185 ಅಂಕ) ಕಂಚು ಜಯಿಸಿತು.
ಮಹೇಶ್ವರಿ ಅರ್ಹತಾ ಸುತ್ತಿನಲ್ಲಿ 75ರಲ್ಲಿ 68 ಅಂಕ ಗಳಿಸಿ ಅಗ್ರ ಸ್ಥಾನ ಪಡೆದರು. ಫೈನಲ್ ನಲ್ಲಿ ಆರು ಶೂಟರ್ಗಳೊಂದಿಗೆ ಸ್ಪರ್ಧಿಸಿದ ಮಹೇಶ್ವರಿ ಮೂರನೆ ಸ್ಥಾನ ಪಡೆದರು.
Next Story