ಟ್ರಿಪಲ್ ಜಂಪ್: ಕ್ರಿಸ್ಟಿಯನ್ ಟೇಲರ್ ಗೆ ಚಿನ್ನ
ಲಂಡನ್, ಆ.11: ಡಬಲ್ ಒಲಿಂಪಿಕ್ಸ್ ಚಾಂಪಿಯನ್ ಅಮೆರಿಕದ ಕ್ರಿಸ್ಟಿಯನ್ ಟೇಲರ್ ಟ್ರಿಪಲ್ ಜಂಪ್ನಲ್ಲಿ ತನ್ನ ಪಾರಮ್ಯ ಮುಂದುವರಿಸಿದ್ದು, ಗುರುವಾರ ವಿಶ್ವ ಅಥ್ಲೆಟಿಕ್ಸ್ ಚಾಂಪಿಯನ್ಶಿಪ್ನಲ್ಲಿ 3ನೆ ಬಾರಿ ಚಿನ್ನ ಜಯಿಸಿದ್ದಾರೆ. ಮತ್ತೊಮ್ಮೆ ಸಹ ಆಟಗಾರ ವಿಲ್ ಕ್ಲೇ(17.63 ಮೀ.)ಅವರನ್ನು ಮಣಿಸಿದರು. ಪೋರ್ಚುಗಲ್ನ ನೆಲ್ಸನ್ ಎವೊರಾ(17.19 ಮೀ.) ಕಂಚು ಜಯಿಸಿದ್ದಾರೆ.
ಟೇಲರ್ ತನ್ನ ಮೂರನೆ ಪ್ರಯತ್ನದಲ್ಲಿ 17.68 ಮೀ. ದೂರ ಜಿಗಿದು ಚಿನ್ನ ಜಯಿಸಿದರು. 37ರ ಹರೆಯದ ಟೇಲರ್ ವಿಶ್ವ ಚಾಂಪಿಯನ್ಶಿಪ್ನಲ್ಲಿ ಮೂರು ಚಿನ್ನ ಜಯಿಸಿದ ಮೊದಲ ಟ್ರಿಪಲ್ ಜಂಪರ್ ಎಂಬ ಕೀರ್ತಿಗೆ ಭಾಜನರಾದರು. 2011 ಹಾಗೂ 2015ರ ವಿಶ್ವ ಚಾಂಪಿಯನ್ಶಿಪ್ನಲ್ಲಿ ಟೇಲರ್ ಮೊದಲ ಸ್ಥಾನ ಪಡೆದಿದ್ದರು. 2012 ಹಾಗೂ 2016ರ ಒಲಿಂಪಿಕ್ಸ್ನಲ್ಲೂ ಟೇಲರ್ ಚಿನ್ನ ಜಯಿಸಿದ್ದರು.
Next Story