varthabharthi

ರಾಷ್ಟ್ರೀಯ

ಗೋರಖ್ ಪುರ ಘಟನೆ ದುರಂತವಲ್ಲ, 'ಹತ್ಯಾಕಾಂಡ': ಕೈಲಾಶ್ ಸತ್ಯಾರ್ಥಿ

ವಾರ್ತಾ ಭಾರತಿ : 12 Aug, 2017

ಹೊಸದಿಲ್ಲಿ, ಆ.12: ಆಕ್ಸಿಜನ್ ಕೊರತೆಯಿಂದ ಗೋರಖ್ ಪುರ ಆಸ್ಪತ್ರೆಯಲ್ಲಿ 60 ಮಕ್ಕಳು ಮೃತಪಟ್ಟ ಘಟನೆಗೆ ಸಂಬಂಧಿಸಿ ಪ್ರತಿಕ್ರಿಯೆ ನೀಡಿರುವ ನೋಬೆಲ್ ಶಾಂತಿ ಪ್ರಶಸ್ತಿ ಪುರಸ್ಕೃತ ಕೈಲಾಶ್ ಸತ್ಯಾರ್ಥಿ, "ಈ ಘಟನೆ ದುರಂತವಲ್ಲ. ಬದಲಾಗಿ, ಹತ್ಯಾಕಾಂಡ" ಎಂದಿದ್ದಾರೆ.

ಈ ಬಗ್ಗೆ ಟ್ವಿಟ್ಟರ್ ನಲ್ಲಿ ಉತ್ತರ ಪ್ರದೇಶ ಸರಕಾರವನ್ನು ತರಾಟೆಗೆತ್ತಿಕೊಂಡಿರುವ ಅವರು, “ನಮ್ಮ ಮಕ್ಕಳಿಗೆ 70 ವರ್ಷಗಳ ಸ್ವಾತಂತ್ರ್ಯ ಎಂದರೇ ಇದುವೇ” ಎಂದು ಪ್ರಶ್ನಿಸಿದ್ದಾರೆ.

ಪ್ರಕರಣಕ್ಕೆ ಸಂಬಂಧಿಸಿ ಪ್ರತಿಕ್ರಿಯಿಸಿರುವ ಮುಖ್ಯಮಂತ್ರಿ ಆದಿತ್ಯನಾಥ್ ಪ್ರಕರಣದ ತನಿಖೆ ನಡೆಸಲು ಆದೇಶಿಸಲಾಗಿದ್ದು, ಆಕ್ಸಿಜನ್ ಕೊರತೆಯುಂಟಾಗಲು ಕಾರಣಕರ್ತರಾದವರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಲಾಗುವುದು ಎಂದಿದ್ದಾರೆ.

ಆಸ್ಪತ್ರೆಯಲ್ಲಿ ಆಕ್ಸಿಜನ್ ವ್ಯವಸ್ಥೆ ಸ್ಥಗಿತಗೊಂಡು ಶುಕ್ರವಾರದ ವೇಳೆಗೆ 48 ಗಂಟೆಗಳ ಅವಧಿಯಲ್ಲಿ 30 ಮಕ್ಕಳು ಮೃತಪಟ್ಟಿದ್ದರು. ಇಂದು ಈ ಸಾವಿನ ಸಂಖ್ಯೆ 60ಕ್ಕೇರಿದೆ.

 

Comments (Click here to Expand)