ನಿಧನ

ಹಾಜಿ ಕೆ. ಮುಹಮ್ಮದ್

ವಾರ್ತಾ ಭಾರತಿ : 12 Aug, 2017

ಮುಲ್ಕಿ, ಆ.12: ಹಳೆಯಂಗಡಿ ಕದಿಕೆ ನಿವಾಸಿ ಹಾಜಿ ಕೆ. ಮುಹಮ್ಮದ್(78) ಶನಿವಾರ ಮಂಗಳೂರಿನ ಖಾಸಗಿ ಆಸ್ಪತ್ರೆಯಲ್ಲಿ ನಿಧನರಾದರು.

ಇವರು ಅನೇಕ ವರ್ಷಗಳ ಕಾಲ ಹಳೆಯಂಗಡಿ ಕದಿಕೆ ಕೇಂದ್ರ ಜುಮಾ ಮಸೀದಿಯ ಅಧ್ಯಕ್ಷರಾಗಿ, ಮದ್ರಸ ಸಮಿತಿಗಳ ಪದಾಧಿಕಾರಿಯಾಗಿ ಸೇವೆ ಸಲ್ಲಿಸಿದ್ದರು. ಮೃತರು ಪತ್ನಿ, ನಾಲ್ವರು ಪುತ್ರರು, 7 ಪುತ್ರಿಯರ ಸಹಿತ ಅಪಾರ ಬಂಧು ಮಿತ್ರರನ್ನು ಅಗಲಿದ್ದಾರೆ.

ಮೃತರ ಅಂತಿಮ ಸಂಸ್ಕಾರ ರವಿವಾರ ಹಳೆಯಂಗಡಿ ಕದಿಕೆ ಜುಮಾ ಮಸೀದಿಯ ವಠಾರದಲ್ಲಿ ನಡೆಯಲಿದೆ ಎಂದು ಅವರ ಅಳಿಯ, ಬ್ಯಾರಿ ಕಲ್ಚರಲ್ ಫೋರಂನ ಉಪಾಧ್ಯಕ್ಷ ಎಂ.ಇ. ಮೂಳೂರು ತಿಳಿಸಿದ್ದಾರೆ.

 

Comments (Click here to Expand)