varthabharthi

ಅಂತಾರಾಷ್ಟ್ರೀಯ

ಜಗತ್ತಿನ ಅತ್ಯಂತ ಹಿರಿಯ ಪುರುಷ ನಿಧನ

ವಾರ್ತಾ ಭಾರತಿ : 12 Aug, 2017

ಜೆರುಸಲೇಂ, ಆ. 12: ಜಗತ್ತಿನ ಅತ್ಯಂತ ಹಿರಿಯ ಪುರುಷನೆಂದು ಗಿನ್ನೆಸ್ ವಿಶ್ವ ದಾಖಲೆ ಪುಸ್ತಕದಲ್ಲಿ ದಾಖಲಾಗಿರುವ ಇಸ್ರೇಲ್ ಕ್ರಿಸ್ಟಲ್ ಶುಕ್ರವಾರ ನಿಧನರಾಗಿದ್ದಾರೆ. ಅವರಿಗೆ 113 ವರ್ಷ ವಯಸ್ಸಾಗಿತ್ತು.

‘‘ಇಸ್ರೇಲ್ ಕ್ರಿಸ್ಟಲ್ ತನ್ನ 114ನೆ ಜನ್ಮದಿನದ ಒಂದು ತಿಂಗಳು ಮೊದಲು ಶುಕ್ರವಾರ ನಿಧನರಾದರು’’ ಎಂದು ‘ಹಾರೆಝ್’ ಪತ್ರಿಕೆ ತನ್ನ ಆನ್‌ಲೈನ್ ಮುದ್ರಣದಲ್ಲಿ ವರದಿ ಮಾಡಿದೆ.

ನಾಝಿ ಯಾತನಾ ಶಿಬಿರದಿಂದ ಬದುಕಿ ಹೊರಬಂದಿರುವ ಅವರು ಇಬ್ಬರು ಮಕ್ಕಳು, 9 ಮೊಮ್ಮಕ್ಕಳು ಮತ್ತು 32 ಮರಿಮಕ್ಕಳನ್ನು ಅಗಲಿದ್ದಾರೆ.

ಮೂಲತಃ ಪೋಲ್ಯಾಂಡ್‌ನ ಝರ್ನೊವ್ ನಗರದವರಾದ ಅವರು 1903 ಸೆಪ್ಟಂಬರ್ 15ರಂದು ಜನಿಸಿದರು.

ಕ್ರಿಸ್ಟಲ್ ಜಗತ್ತಿನ ಅತ್ಯಂತ ಹಿರಿಯ ಪುರುಷ ಎಂಬುದಾಗಿ ಗಿನ್ನೆಸ್ ವರ್ಲ್ಡ್ ರೆಕಾರ್ಡ್ಸ್ 2016 ಮಾರ್ಚ್‌ನಲ್ಲಿ ಅವರನ್ನು ಗುರುತಿಸಿತ್ತು.

 

Comments (Click here to Expand)