varthabharthi

ಕರ್ನಾಟಕ

ಹನೂರು: ಬಹುಜನ ಸಮಾಜ ಪಾರ್ಟಿಯ ಕಾರ್ಯಕರ್ತರ ಸಮಾವೇಶ

ವಾರ್ತಾ ಭಾರತಿ : 12 Aug, 2017

ಹನೂರು, ಆ.12: ಕರ್ನಾಟಕದಲ್ಲಿ 2018ರ ಚುನಾವಣೆಗೆ ಯಾರು ಸರ್ಕಾರ ರಚನೆ ಮಾಡಬೇಕು ಎನ್ನುವುದನ್ನು ಬಹುಜನ ಸಮಾಜ ಪಾರ್ಟಿ ಪಕ್ಷ ತಿರ್ಮಾನ ಮಾಡಬೇಕು. ಅತಂಹ ಅತಂತ್ರ ಸ್ಥಿತಿಯನ್ನು ನಿರ್ಮಿಸಿ ಕರ್ನಾಟಕದಲ್ಲಿ ಮೂರನೇ ಶಕ್ತಿಯಾಗಿ ಗೆಲುವು ಸಾಧಿಸಲು ಇಂದಿನಿಂದ ಪ್ರತಿ ಬೂತ್ ಮಟ್ಟದಲ್ಲಿ ಮನೆ ಮನೆಗೆ ತರಳಿ ಪ್ರಚಾರ ಕೈಗೂಳ್ಳಿ ಎಂದು ಪಕ್ಷದ ಕಾರ್ಯಕರ್ತರಿಗೆ ಬಹುಜನ ಸಮಾಜ ಪಾರ್ಟಿಯ ಅಧ್ಯಕ್ಷ ಎನ್. ಮಹೇಶ್‌ ಕಿವಿ ಮಾತು ಹೇಳಿದರು.

ಹನೂರು ಪಟ್ಟಣದ ಗೌರಿ ಶಂಕರ ಕಲ್ಯಾಣ ಮಂಟಪದಲ್ಲಿ ಆಯೋಜಿಸಿದ್ದ ಹನೂರು ವಿಧಾಸಭಾ ಕ್ಷೇತ್ರದ ಬಹುಜನ ಸಮಾಜ ಪಾರ್ಟಿಯ ಕಾರ್ಯಕರ್ತರ ಸಮಾವೇಶವನ್ನು ಉದ್ಘಾಟಿಸಿ ಮಾತನಾಡಿದ ಇವರು, ಕರ್ನಾಟಕದಲ್ಲಿ ಬಹುಜನ ಪಾರ್ಟಿ ಪಕ್ಷದ ಕಾರ್ಯಕರ್ತರು ಬೀದರ್ ನಿಂದ ಹನೂರು ವಿಧಾ ನಸಭಾದವರೆಗೂ ಇದ್ದು, ಎಲ್ಲಾ ಕಾರ್ಯಕರ್ತರು ಒಮ್ಮತದಿಂದ ನಿರ್ಣಯ ಮಾಡಿ ಮುಂದಿನ 2018ರ ಚುನಾವಣೆಯಲ್ಲಿ 80ಕೂ ಹೆಚ್ಚು ಅಧಿಕ ಸಂಖ್ಯಾಬಲದಲ್ಲಿಗೆದ್ದು, ಯಾರು ಆಡಳಿತ ನೆಡಸಬೇಕು ಎಂಬ ತಿರ್ಮಾನವನ್ನು ಬಿಎಸ್ಪಿ ಪಕ್ಷವೇ ಸೂಚನೆ ನೀಡುವ ರೀತಿಯಲ್ಲಿ ರಾಜ್ಯದಲ್ಲಿ ಮೂರನೇ ಶಕ್ತಿಯಾಗಿ ಹೂರ ಹೊಮ್ಮವ ಎಲ್ಲಾ ಲಕ್ಷಣಗಳು ಇದೆ. ಕಾರ್ಯಕರ್ತರು ಇಂದಿನಿಂದ ಪ್ರತಿ ಮನೆ ಮನೆಗೆ ತೆರಳಿ ಹನೂರು ವಿಧಾನ ಸಭಾಕ್ಷೇತ್ರದಲ್ಲೂ ಸಹ ಗೆಲ್ಲುವ ಮಾರ್ಗೊಪಾಯಗಳನ್ನು ಕಂಡುಕೊಂಡು ಪ್ರಚಾರ ಕೈಗೂಳ್ಳಿ ಎಂದು ಹೇಳಿದರು.
         
ಸರ್ವಾಧಿಕಾರ ಆಡಳಿತ ವ್ಯವಸ್ಥೆ ಮತ್ತು ಕೋಮುವಾದಿ ಪಕ್ಷ: ಇಂದು ಕೇಂದ್ರದಲ್ಲಿ ಬಿಜೆಪಿ ಆಡಳಿತಕ್ಕೆ ಬಂದು ಪ್ರಜೆಗಳ ಮೇಲೆ ಸರ್ವಾಧಿಕಾರ ಧೋರಣೆ ಮಾಡುತ್ತಿದ್ದು, ನಮ್ಮ ಸಂವಿಧಾನದಲ್ಲಿ ಆಹಾರ ತಿನ್ನುವ ಹಕ್ಕು ಪ್ರತಿಯೊಬ್ಬರ ಹಕ್ಕಾಗಿದ್ದು, ನಾವು ಧರಿಸುವ ಬಟ್ಟೆ ನಮ್ಮ ಹಕ್ಕಾಗಿದ್ದು, ಪ್ರಪಂಚದಲ್ಲಿ ಯಾವ ದೇಶದಲ್ಲೂ ಸಹ ನಾವು ತಿನ್ನುವ ಆಹಾರದ ಬಗ್ಗೆ ಚರ್ಚೆಗಳೇ ನೆಡೆದಿಲ್ಲ. ಆದರೆ ನರೇಂದ್ರ ಮೋದಿ ಆಡಳಿತದಲ್ಲಿ ಸರ್ವಾಧಿಕಾರ ಆಡಳಿತ ವ್ಯವಸ್ಥೆ ನಿರ್ಮಾಣವಾಗಿದ್ದು,  ಕೇಂದ್ರದಲ್ಲಿ ಬಿಜೆಪಿ ಪಕ್ಷ ಆಡಳಿತಕ್ಕೆ ಬಂದ ಮೇಲೆ ಆರ್‌ಎಸ್‌ಎಸ್, ಬಜರಂಗದಳ, ವಿಶ್ವ ಹಿಂದುಪರಿಷತ್ ಎಂಬ ಕೋಮುವಾದಿ ಸಂಘಟನೆಗಳು ಬೇರೆ ಬೇರೆ ರೂಪದಲ್ಲಿೆ ಹಿಂದೂ ಮುಸ್ಲಿಂ ಪರಿಶಿಷ್ಟಜಾತಿ ಪರಿಶಿಷ್ಟ ಪಂಗಡಗಳ ಮತ್ತು ಜಾತಿ ಜಾತಿಗಳ ನಡುವೆ ವೈಷಮ್ಯಗಳನ್ನು ಹೂಡಿ ಎತ್ತಿಕಟ್ಟುವಂತಹ  ವಾತವರಣ ನಿರ್ಮಾಣವಾಗಿದೆ. ಇದನ್ನೆಲ್ಲಾ ತಡೆಯುಶಕ್ತಿ ಮತದಾರಿಂದ ಮಾತ್ರ ಸಾದ್ಯ ಎಂದು ಕಾರ್ಯಕರ್ತರಲ್ಲಿ ತಿಳಿಸಿದರು.

ಈ ಸಂದರ್ಭದಲ್ಲಿ ಕಾರ್ಯದರ್ಶಿಗಳಾದ ಆರ್.ಪಿ ನಂಜುಂಡಸ್ವಾಮಿ, ಜಿಲ್ಲಾದ್ಯಕ್ಷರಾದ ಭಾಗಳಿ ರೇವಣ್ಣ, ಶಿವಪ್ರಸಾದ್, ಶಿವನಂಜಪ್ಪ, ರಾಜೇಂದ್ರ ಕೆಂಪರಾಜು, ಪುಟ್ಟಸ್ವಾಮಿ, ಶಾಗ್ಯ ಮಹೇಶ್ ಮಹದೇವಣ್ಣ, ಸಿದ್ದರಾಜು ಇನ್ನಿತರರರು ಹಾಜರಿದ್ದರು,
 

 

Comments (Click here to Expand)