varthabharthi

ಅಂತಾರಾಷ್ಟ್ರೀಯ

ಬಿಕ್ಕಟ್ಟು ನಿವಾರಣೆಯಲ್ಲಿ ಭಾರತಕ್ಕೆ ಪಾತ್ರ: ಅಮೆರಿಕ ಕಮಾಂಡರ್

ವಾರ್ತಾ ಭಾರತಿ : 12 Aug, 2017

ವಾಶಿಂಗ್ಟನ್, ಆ. 12: ಉತ್ತರ ಕೊರಿಯ ನಾಯಕತ್ವದ ಜೊತೆ ಮಾತುಕತೆ ನಡೆಸುವ ಮೂಲಕ ಕೊರಿಯ ಪರ್ಯಾಯ ದ್ವೀಪದಲ್ಲಿ ಈಗ ನೆಲೆಸಿರುವ ಉದ್ವಿಗ್ನತೆಯನ್ನು ಶಮನ ಮಾಡುವಲ್ಲಿ ಭಾರತ ಪಾತ್ರವೊಂದನ್ನು ನಿಭಾಯಿಸಬಹುದು ಎಂದು ಅಮೆರಿಕ ಪೆಸಿಫಿಕ್ ಕಮಾಂಡ್‌ನ ಕಮಾಂಡರ್ ಅಡ್ಮಿರಲ್ ಹ್ಯಾರಿ ಹ್ಯಾರಿಸ್ ಹೇಳಿದ್ದಾರೆ.

‘‘ಭಾರತಕ್ಕೆ ದೊಡ್ಡ ಧ್ವನಿ ಇದೆ. ಅದರ ಮಾತನ್ನು ಜನರು ಕೇಳುತ್ತಾರೆ. ಹಾಗಾಗಿ, ಉತ್ತರ ಕೊರಿಯದ ಪರಮಾಣು ಕಾರ್ಯಕ್ರಮ ಒಡ್ಡಿರುವ ಬೆದರಿಕೆಯ ಗಂಭೀರತೆಯನ್ನು ಭಾರತ ಆ ದೇಶಕ್ಕೆ ಮನವರಿಕೆ ಮಾಡಿಕೊಡಬಹುದಾಗಿದೆ’’ ಎಂದು ಅವರು ಹೇಳುತ್ತಾರೆ.

 

Comments (Click here to Expand)