varthabharthi

ರಾಷ್ಟ್ರೀಯ

30 ಮಕ್ಕಳು ಸಾವನ್ನಪ್ಪಿದ ಬಳಿಕ ಕಂಪೆನಿಗೆ 20 ಲಕ್ಷ ರೂ. ಪಾವತಿ

ವಾರ್ತಾ ಭಾರತಿ : 12 Aug, 2017

ಲಕ್ನೋ: ಆಮ್ಲಜನಕ ಪೂರೈಸುವ ಸಂಸ್ಥೆಗೆ ಬಾಬಾ ರಾಘವ ದಾಸ್ ವೈದ್ಯಕೀಯ ಕಾಲೇಜು ಆಸ್ಪತ್ರೆ ಈ ತಿಂಗಳ ಅಂತ್ಯದವರೆಗೆ ಪಾವತಿ ಮಾಡಿಲ್ಲ. ಆದರೆ, ಆಮ್ಲಜನಕದ ಕೊರತೆಯಿಂದ 30 ಮಕ್ಕಳು ಮೃತಪಟ್ಟ ಬಳಿಕ ಬಿಆರ್‌ಡಿ 20.04 ಲಕ್ಷ ರೂಪಾಯಿ ಬಿಡುಗಡೆ ಮಾಡಿತು ಎಂದು ಆಮ್ಲಜನಕ ಪೂರೈಕೆ ಕಂಪೆನಿ ತಿಳಿಸಿದೆ. ನಾವು ವಿತರಣೆಗಾರರು. ರಾಜಸ್ಥಾನದ ರೇವರಿಯಲ್ಲಿರುವ ಐನಾಕ್ಸಂ ಕಂಪೆನಿಯಿಂದ ನಾವು ಆಮ್ಲಜನಕ ಖರೀದಿಸುತ್ತೇವೆ. ಆದರೆ, ಬಿಆರ್‌ಡಿ ಸರಿಯಾಗಿ ಹಣ ಪಾವತಿಸುತ್ತಿಲ್ಲ. ಪ್ರತಿ ಸಂದರ್ಭ ನಮ್ಮಲ್ಲಿ ನಿಧಿ ಇಲ್ಲ ಎಂದು ಆಸ್ಪತ್ರೆಯ ಅಧಿಕಾರಿಗಳು ಹೇಳುತ್ತಿದ್ದಾರೆ ಎಂದು ಪುಷ್ಪಾ ಸೇಲ್ಸ್‌ನ ದೀಪಂಕರ್ ಶರ್ಮಾ ಹೇಳಿದ್ದಾರೆ. ಬಾಕಿ ಪಾವತಿಸುವಂತೆ ಬಿಆರ್‌ಡಿಯೊಂದಿಗೆ ನಿರಂತರ ಮಾತುಕತೆಯಲ್ಲಿರುವ ಕಂಪೆನಿಗಳಲ್ಲಿ ಪುಷ್ಪಾ ಸೇಲ್ಸ್ ಕೂಡ ಒಂದು. 

 

Comments (Click here to Expand)