varthabharthi

ಕರ್ನಾಟಕ

ಮರಕ್ಕೆ ಲಾರಿ ಢಿಕ್ಕಿಯಾಗಿ ಮೂವರು ಮೃತ್ಯು

ವಾರ್ತಾ ಭಾರತಿ : 12 Aug, 2017

ಮಾಲೂರು, ಆ.12: ವೇಗವಾಗಿ ಚಲಿಸುತ್ತಿದ್ದ ಲಾರಿಯೊಂದು ಮರಕ್ಕೆ ಢಿಕ್ಕಿ ಹೊಡೆದ ಪರಿಣಾಮ ಸ್ಥಳದಲ್ಲೇ ಇಬ್ಬರು ಮೃತಪಟ್ಟಿದ್ದು, ಆಸ್ಪತ್ರೆಯಲ್ಲಿ ಓರ್ವ ಮೃತಪಟ್ಟಿದ್ದಾನೆ ಎಂದು ತಿಳಿದು ಬಂದಿದೆ.

ಮಾಲೂರಿನಿಂದ ಕೋಲಾರದ ಕಡೆ ಚಲಿಸುತ್ತಿದ್ದ ಲಾರಿಯಲ್ಲಿ ಒಟ್ಟು 9 ಮಂದಿಯಿದ್ದು, ಲಾರಿ ಚಾಲಕ ಹಾಗೂ ನಿರ್ವಾಹಕನಿಗೆ ತೀವ್ರ ಗಾಯಗಳಾಗಿದ್ದು, ರಮೇಶ್(35), ನಾಗರಾಜ್ (34) ಸ್ಥಳದಲ್ಲೇ ಮೃತಪಟ್ಟರೆ, ಆಸ್ಪತ್ರೆಯಲ್ಲಿ ಚಿಕಿತ್ಸೆ ಫಲಕಾರಿಯಾಗದೆ ಮತ್ತೊಬ್ಬರು ಮೃತಪಟ್ಟಿದ್ದಾರೆ.

6 ಮಂದಿಗೆ ತೀವ್ರಗಾಯಗಳಾಗಿವೆ. ಮಾಲೂರಿನಿಂದ ಕೋಲಾರದೆಡೆಗೆ ಪ್ರಯಾಣಿಸುತ್ತಿದ್ದ ಲಾರಿಯು ಶನಿವಾರ ಬೆಳಗ್ಗೆ ದೊಡ್ಡಕಡತೂರಿನ ಸಮೀಪ ಅಪಘಾತಕ್ಕೀಡಾಗಿದೆ. ಅಪಘಾತದ ತೀವ್ರತೆಗೆ ಚಾಲಕನ ಕಾಲು ಲಾರಿ ಹಾಗೂ ಮರದ ನಡುವೆ ಸಿಲುಕಿದ್ದು, ಜೆಸಿಬಿ ಮೂಲಕ ಹೊರ ತೆಗೆದು ಆಸ್ಪತ್ರೆಗೆ ದಾಖಲಿಸಲಾಗಿದೆ.

 

Comments (Click here to Expand)