ಕರಾವಳಿ

ಮೀನುಗಾರಿಕಾ ಬೋಟ್ ಅವಘಡ: 30 ಮಂದಿ ಪಾರು

ವಾರ್ತಾ ಭಾರತಿ : 12 Aug, 2017

ಭಟ್ಕಳ,ಆ.12: ಮೀನುಗಾರಿಕೆಗೆ ತೆರಳಿದ್ದ ಕುಂದಾಪುರ ತಾಲೂಕಿನ ರಾಮಾ ಖಾರ್ವಿ ಹಾಗೂ ಪ್ರಭಾಕರ ಖಾರ್ವಿ ಎಂಬವರ ಬೋಟ್ ನ ಫ್ಯಾನ್ ತುಂಡಾಗಿ ಮುಳುಗಡೆಯ ಭೀತಿ ಎದುರಿಸಿದ್ದು, ಅದರಲ್ಲಿದ್ದ ಮೂವತ್ತು ಮಂದಿಯನ್ನು ರಕ್ಷಿಸಿದ ಘಟನೆ ಶುಕ್ರವಾರ ತಡರಾತ್ರಿ ಭಟ್ಕಳ ತಾಲೂಕಿನ ಮುಂಡಳ್ಳಿಯ ನಸ್ತಾರ ಸಮುದ್ರತೀರದಲ್ಲಿ ನಡೆದಿದೆ.

‘ಯಕ್ಷೇಶ್ವರಿ’ ಎಂಬ ಹೆಸರಿನ ಮೀನುಗಾರಿಕಾ ಬೋಟ್ ಭಟ್ಕಳ ಬಂದರ್ ಗೆ ಮರಳುವಾಗ ಬೋಟ್ ನಫ್ಯಾನ್ ತುಂಡಾಗಿ ಕಾರ್ಯವನ್ನು ಸ್ಥಗಿತಗೊಳಿಸಿ ಮುಳುಗುವ ಭೀತಿ ಎದುರಿಸಿತ್ತು ಎಂದು ತಿಳಿದುಬಂದಿದೆ.

ಗಾಳಿ, ಮಳೆ ಹಾಗೂ ಸಮುದ್ರದ ರಭಸದ ಅಲೆಗಳಿಗೆ ಸಿಲುಕಿದ ಬೋಟ್ ಮುಂಡಳ್ಳಿಯ ನಸ್ತಾರ ಸಮುದ್ರತೀರಕ್ಕೆ ಬಂದು ತಲುಪಿದೆ. ಬೋಟ್‍ನ ತಳಭಾಗ ಸಂಪೂರ್ಣ ಒಡೆದು ಸಮುದ್ರದ ನೀರು ಸೇರಿ ಉಸುಕುತುಂಬಿ ಸಮುದ್ರದ ದಡದಲ್ಲಿಯೇ ಸಿಲುಕಿಕೊಂಡಿತು.

ರಾತ್ರಿ ಇಡೀ ಹರಸಾಹಸ ಪಟ್ಟು ಸಮುದ್ರವನ್ನು ಮೇಲ್ದಂಡೆಗೆ ಎಳೆಯಲು ಸಾಧ್ಯವಾಗದೇ ಇಲ್ಲಿನ ಸ್ಥಳಿಯರು ಹಾಗೂ ಮೀನುಗಾರರು ವಿಫಲರಾದರು. ಬೋಟ್ ಸಂಪೂರ್ಣ ಹಾನಿಯಾಗಿದ್ದು, 1.5 ಕೋಟಿಗೂ ಅಧಿಕಮೌಲ್ಯ ರೂ. ಹಾನಿಯಾದ ಬಗ್ಗೆ ಅಂದಾಜಿಸಲಾಗಿದೆ. ಬೋಟ್‍ನಲ್ಲಿದ್ದ ಒಟ್ಟು 5000ಲೀ. ಡೀಸೆಲ್ ಸಹ ಸಮುದ್ರಕ್ಕೆ ಸೇರಿದೆ.

ಸ್ಥಳಕ್ಕೆ ಕರಾವಳಿ ಪೋಲೀಸ್ ಪಡೆ ಹಾಗೂ ಗ್ರಾಮೀಣ ಪೋಲೀಸ್‍ರು ಬಂದಿದ್ದು, ಸದ್ಯ ಕ್ರೇನ್ ಮೂಲಕಬೋಟ್ ಸಮುದ್ರ ದಡದಿಂದ ಮೇ¯ತ್ತಲಾಗಿದೆ. ಈ ಬಗ್ಗೆ ಭಟ್ಕಳ ಗ್ರಾಮೀಣ ಪೋಲೀಸ್ ಠಾಣೆಯಲ್ಲಿ ದೂರುದಾಖಲಾಗಿದೆ.

 

Comments (Click here to Expand)