varthabharthi

ರಾಷ್ಟ್ರೀಯ

ಸ್ವಚ್ಛತೆಯಿಲ್ಲದ ವಾತಾವರಣ, ಬಯಲುಶೌಚ ಗೋರಖ್ ಪುರ ದುರಂತಕ್ಕೆ ಕಾರಣ: ಆದಿತ್ಯನಾಥ್

ವಾರ್ತಾ ಭಾರತಿ : 12 Aug, 2017

ಉತ್ತರ ಪ್ರದೇಶ, ಆ.12; ಬಾಬ ರಾಘವ್ ದಾಸ್ ಮೆಡಿಕಲ್ ಕಾಲೇಜಿನಲ್ಲಿ ಆಕ್ಸಿಜನ್ ಸ್ಥಗಿತದಿಂದ 63 ಮಕ್ಕಳು ಸಾವನ್ನಪ್ಪಿರುವ ಬಗ್ಗೆ ತನಿಖೆ ನಡೆಯುತ್ತಿರುವ ನಡುವೆಯೇ ಹೇಳಿಕೆ ನೀಡಿರುವ ಉತ್ತರ ಪ್ರದೇಶ ಮುಖ್ಯಮಂತ್ರಿ ಆದಿತ್ಯನಾಥ್, ಅನೈರ್ಮಲ್ಯ ಹಾಗೂ ಬಯಲುಶೌಚ ಈ ದುರಂತಕ್ಕೆ ಕಾರಣ ಎಂದಿದ್ದಾರೆ.

ಅಲಹಾಬಾದ್ ನಲ್ಲಿ ನಡೆದ ಸಾರ್ವಜನಿಕ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, “ನನ್ನ ಕ್ಷೇತ್ರದಲ್ಲಿ ನಡೆದ ಈ ಘಟನೆಗೆ ಅನೈರ್ಮಲ್ಯ ಹಾಗೂ ಬಯಲುಶೌಚ ಕಾರಣ. ಇಲ್ಲಿ ಮೆದುಳುಜ್ವರ ಸೇರಿದಂತೆ ಸಾಂಕ್ರಾಮಿಕ ರೋಗಗಳಿವೆ. ಈ ದಿನಗಳಲ್ಲಿ ನೀವು ಬಿಆರ್ ಡಿ ಮೆಡಿಕಲ್ ಕಾಲೇಜಿನ ಬಗ್ಗೆ ಮಾಧ್ಯಮಗಳ ವರದಿಯನ್ನು ಗಮನಿಸಿರಬಹುದು. ನಾವು ಸ್ವಚ್ಛ ಮತ್ತು ಆರೋಗ್ಯಕರ ಜೀವನ ನಡೆಸದ ಕಾರಣ ಮಕ್ಕಳು ತಮ್ಮ ಪ್ರಾಣ ಕಳೆದುಕೊಂಡಿರುವುದು ದುರದೃಷ್ಟಕರ” ಎಂದರು.

ಸ್ವಚ್ಛತೆಯಿಲ್ಲದ ವಾತಾವರಣ ಮಕ್ಕಳ ಸಾವಿಗೆ ಕಾರಣ ಎಂದವರು ಹೇಳಿದರು.

ಸರಕಾರ ಯಾವತ್ತಿಗೂ ಸಮಸ್ಯೆಯಾಗಬಾರದು ಬದಲಾಗಿ ಪರಿಹಾರವಾಗಬೇಕು. ಒಂದು ವೇಳೆ ಸರಕಾರದೊಳಗೆ ಸಮಸ್ಯೆಗಳಿದ್ದರೆ ಮುಂದುವರಿಯುವ ಯಾವುದೇ ಹಕ್ಕಿಲ್ಲ” ಎಂದು ಆದಿತ್ಯನಾಥ್ ಹೇಳಿದರು.

 

Comments (Click here to Expand)