varthabharthi

ರಾಷ್ಟ್ರೀಯ

ದಿಲ್ಲಿ: ವಿಷಾನಿಲ ಸೇವನೆಯಿಂದ ಒಳಚರಂಡಿ ಕಾಮಗಾರಿ ನಿರತ ಸೋದರರಿಬ್ಬರ ಸಾವು

ವಾರ್ತಾ ಭಾರತಿ : 12 Aug, 2017

ಹೊಸದಿಲ್ಲಿ,ಆ.12: ಒಳಚರಂಡಿ ಸಂಬಂಧಿತ ಸಾವುಗಳು ದಿಲ್ಲಿಯಲ್ಲಿ ಹೆಚ್ಚುತ್ತಲೇ ಇವೆ. ಒಂದು ವಾರದ ಹಿಂದಷ್ಟೇ ದಕ್ಷಿಣ ದಿಲ್ಲಿಯ ಲಜಪತ್ ನಗರದಲ್ಲಿ ಒಳಚರಂಡಿ ಸ್ವಚ್ಛಗೊಳಿಸುತ್ತಿದ್ದ ಮೂವರು ಕಾರ್ಮಿಕರು ವಿಷಾನಿಲ ಸೇವನೆಯಿಂದ ಮೃತಪಟ್ಟಿದ್ದ ಘಟನೆಯು ಇನ್ನೂ ಹಸಿರಾಗಿರುವಾಗಲೇ ಶನಿವಾರ ಪೂರ್ವ ದಿಲ್ಲಿಯಲ್ಲಿ ಇಂತಹುದೇ ಘಟನೆಯಲ್ಲಿ ಸೋದರರಿಬ್ಬರು ಸಾವನ್ನಪ್ಪಿದ್ದಾರೆ.

ಮಧ್ಯಾಹ್ನ ಸೋದರರಾದ ಜಹಾಂಗೀರ್(24) ಮತ್ತು ಎಜಾಝ್(22) ಅವರು ಆನಂದ ವಿಹಾರದ ಅಗರವಾಲ್ ಫನ್ ಸಿಟಿ ಮಾಲ್‌ನ ಒಳಚರಂಡಿಯನ್ನು ಸ್ವಚ್ಛಗೊಳಿ ಸುತ್ತಿದ್ದಾಗ ವಿಷಾನಿಲ ಸೇವನೆಯಿಂದ ಈ ದುರಂತ ಸಂಭವಿಸಿದೆ. ಅವರನ್ನು ರಕ್ಷಿಸಲು ಒಳಚರಂಡಿಗಿಳಿದಿದ್ದ 50ರ ಪ್ರಾಯದ ತಂದೆ ಮತ್ತು ಅಗ್ನಿಶಾಮಕ ದಳದ ಓರ್ವ ಸಿಬ್ಬಂದಿ ಕೂಡ ವಿಷಾನಿಲ ಸೇವನೆಯಿಂದ ಪ್ರಜ್ಞಾಶೂನ್ಯರಾಗಿದ್ದು, ಆಸ್ಪತ್ರೆಗೆ ದಾಖಲಿಸಲಾಗಿದೆ.

 

Comments (Click here to Expand)