varthabharthi

ಅಂತಾರಾಷ್ಟ್ರೀಯ

ಈಜಿಪ್ಟ್: ರೈಲುಗಳ ಡಿಕ್ಕಿ; ಕನಿಷ್ಠ 36 ಸಾವು

ವಾರ್ತಾ ಭಾರತಿ : 12 Aug, 2017

ಕೈರೋ, ಆ. 12: ಈಜಿಪ್ಟ್‌ನ ಬಂದರು ನಗರ ಅಲೆಕ್ಸಾಂಡ್ರಿಯದ ಹೊರಭಾಗದಲ್ಲಿ ಶುಕ್ರವಾರ ಎರಡು ಪ್ರಯಾಣಿಕ ರೈಲುಗಳು ಢಿಕ್ಕಿಯಾಗಿದ್ದು ಕನಿಷ್ಠ 36 ಮಂದಿ ಮೃತಪಟ್ಟಿದ್ದಾರೆ ಹಾಗೂ ಸುಮಾರು 123 ಮಂದಿ ಗಾಯಗೊಂಡಿದ್ದಾರೆ.

ಅಲೆಕ್ಸಾಂಡ್ರಿಯದಿಂದ ಕೈರೋಗೆ ಹೋಗುತ್ತಿದ್ದ ರೈಲೊಂದು ಇನ್ನೊಂದು ರೈಲಿನ ಹಿಂಭಾಗಕ್ಕೆ ಢಿಕ್ಕಿ ಹೊಡೆಯಿತು ಎಂದು ಈಜಿಪ್ಟ್ ರೈಲ್ವೆ ಪ್ರಾಧಿಕಾರ ಬಿಡುಗಡೆ ಮಾಡಿದ ಹೇಳಿಕೆಯೊಂದು ತಿಳಿಸಿದೆ. ಇನ್ನೊಂದು ರೈಲು ಖುರ್ಷಿದ್ ಜಿಲ್ಲೆಯ ಸಣ್ಣ ರೈಲು ನಿಲ್ದಾಣದಲ್ಲಿ ನಿಂತಿತ್ತು.

 

Comments (Click here to Expand)