varthabharthi

ರಾಷ್ಟ್ರೀಯ

ಯುವತಿಯ ಅಪಹರಣ ಯತ್ನ ಪ್ರಕರಣ

ಹರ್ಯಾಣ ಬಿಜೆಪಿ ನಾಯಕನ ಪುತ್ರನಿಗೆ ನ್ಯಾಯಾಂಗ ಕಸ್ಟಡಿ

ವಾರ್ತಾ ಭಾರತಿ : 12 Aug, 2017

ಚಂಡೀಗಢ,ಆ.12: ಐಎಎಸ್ ಅಧಿಕಾರಿಯ ಪುತ್ರಿಯನ್ನು ಹಿಂಬಾಲಿಸಿದ ಹಾಗೂ ಆಕೆಯ ಅಪರಹಣಕ್ಕೆ ಯತ್ನಿಸಿದ ಪ್ರಕರಣದಲ್ಲಿ ಹರ್ಯಾಣ ಬಿಜೆಪಿ ಅಧ್ಯಕ್ಷ ಸುಭಾಶ್ ಬರಾಲಾ ಅವರ ಪುತ್ರ ವಿಕಾಸ್ ಹಾಗೂ ಆತನ ಸ್ನೇಹಿತ ಆಶೀಶ್ ಕುಮಾರ್ ಅವರಿಗೆ ಸ್ಥಳೀಯ ನ್ಯಾಯಾಲಯವೊಂದು ಆಗಸ್ಟ್ 25ರವರೆಗೆ ನ್ಯಾಯಾಂಗ ಕಸ್ಟಡಿ ವಿಧಿಸಿದೆ.

ಸುಭಾಶ್  ಬರಾಲಾ ಹಾಗೂ ಅವರ ಪುತ್ರನನ್ನು ಇಂದು ಬಿಗಿಭದ್ರತೆಯ ನಡುವೆ ಕರ್ತವ್ಯ ನಿರತ ನ್ಯಾಯಾಧೀಶ ಗೌರವ್ ದತ್ತಾ ಮುಂದೆ ಹಾಜರುಪಡಿಸಿದಾಗ, ಅವರು 14 ದಿನಗಳ ನ್ಯಾಯಾಂಗ ಕಸ್ಟಡಿ ವಿಧಿಸಿದರು.

ಇದಕ್ಕೂ ಮೊದಲು ವಿಕಾಸ್ ಬರಾಲಾ ಹಾಗೂ ಆತನ ಸ್ನೇಹಿತನನ್ನು ನ್ಯಾಯಾಲಯ ಇಂದಿನವರೆಗೆ ಎರಡು ದಿನಗಳ ಕಾಲ ಪೊಲೀಸ್ ಕಸ್ಟಡಿಗೆ ಒಪ್ಪಿಸಿತ್ತು.

ವಿಕಾಸ್ ಹಾಗೂ ಆತನ ಸ್ನೇಹಿತ ತನ್ನನ್ನು ಹಿಂಬಾಲಿಸುತ್ತಿದ್ದರು ಹಾಗೂ ಅಪಹರಣಕ್ಕೆ ಯತ್ನಿಸಿದ್ದರೆಂದು ಆರೋಪಿಸಿ ಐಎಎಸ್ ಅಧಿಕಾರಿಯೊಬ್ಬರ ಪುತ್ರಿ ನೀಡಿದ ದೂರಿನ ಹಿನ್ನೆಲೆಯಲ್ಲಿ ಇವರಿಬ್ಬರನ್ನು ಆಗಸ್ಟ್ 9ರಂದು ಬಂಧಿಸಲಾಗಿತ್ತು.

ಸಂತ್ರಸ್ತ ಯುವತಿಗೆ ಬೆಂಬಲ ವ್ಯಕ್ತಪಡಿಸಿ ಗುರುವಾರ ರಾತ್ರಿ ನೂರಾರು ಮಂದಿ ಚಂಡೀಗಢದಲ್ಲಿ ‘ಬೇಕುದಿ ಆಝಾದಿ’ ಕಾಲ್ನಡಿಗೆ ಜಾಥಾವನ್ನು ನಡೆಸಿದ್ದರು.

 

Comments (Click here to Expand)