varthabharthi

ಅಂತಾರಾಷ್ಟ್ರೀಯ

ಅಫ್ಘಾನಿಸ್ತಾನ: ಮಸೀದಿಯಲ್ಲಿ ದಾಳಿ; 4 ಸಾವು

ವಾರ್ತಾ ಭಾರತಿ : 12 Aug, 2017

ಕಾಬೂಲ್, ಆ. 12: ಅಫ್ಘಾನಿಸ್ತಾನದ ಟಖರ್ ಪ್ರಾಂತದ ಮಸೀದಿಯೊಂದರ ಒಳಗೆ ಸ್ಥಳೀಯ ಪಾಳೆಗಾರನೊಬ್ಬನ ಬಂಟನೊಬ್ಬ ಶುಕ್ರವಾರ ಮಸೀದಿಯೊಂದರ ಒಳಗೆ ಗುಂಡು ಹಾರಿಸಿ ನಾಲ್ವರನ್ನು ಹತ್ಯೆಮಾಡಿದ್ದಾನೆ ಎಂದು ಪೊಲೀಸರು ಹೇಳಿದ್ದಾರೆ. ಘಟನೆಯಲ್ಲಿ 40 ಮಂದಿ ಗಾಯಗೊಂಡಿದ್ದಾರೆ.

ಸ್ಥಳೀಯ ಪಾಳೆಗಾರನು ಮಸೀದಿಯ ಧರ್ಮಗುರು ಜೊತೆ ವಿವಾದವೊಂದಕ್ಕೆ ಸಂಬಂಧಿಸಿ ದ್ವೇಷ ಹೊಂದಿದ್ದನು ಹಾಗೂ ಈ ದಾಳಿಯ ಗುರಿ ಧರ್ಮಗುರು ಆಗಿದ್ದರು ಎಂದು ಪ್ರಾಂತೀಯ ಪೊಲೀಸ್ ಮುಖ್ಯಸ್ಥರು ಹೇಳಿದ್ದಾರೆ.

ಆದಾಗ್ಯೂ, ಧರ್ಮಗುರು ದಾಳಿಯಲ್ಲಿ ಗಾಯಗೊಳ್ಳದೆ ಪಾರಾಗಿದ್ದಾರೆ.

 

Comments (Click here to Expand)