varthabharthi

ರಾಷ್ಟ್ರೀಯ

ಗೋರಕ್ ಪುರ ಘಟನೆ ಬರ್ಬರ ಹತ್ಯೆ: ಕಾಂಗ್ರೆಸ್

ವಾರ್ತಾ ಭಾರತಿ : 12 Aug, 2017

ಹೊಸದಿಲ್ಲಿ, ಆ. 12: ಮಕ್ಕಳು ಸಾವನ್ನಪ್ಪಿರುವ ಪ್ರಕರಣಕ್ಕೆ ಸಂಬಂಧಿಸಿ ಪ್ರತಿಕ್ರಿಯಿಸಿರುವ ಕಾಂಗ್ರೆಸ್ ನಾಯಕರು, ಇದು ದುರ್ಘಟನೆ ಅಲ್ಲ. ಬರ್ಬರ ಹತ್ಯೆ ಎಂದಿದ್ದಾರೆ. ಕಾಂಗ್ರೆಸ್ ನಾಯಕರಾದ ಸಂದೀಪ್ ದೀಕ್ಷಿತ್ ಹಾಗೂ ಮೀಮ್ ಅಫ್ಜಲ್ ಘಟನೆಯನ್ನು ಕ್ರಿಮಿನಲ್ ಚಟುವಟಿಕೆ ಎಂದು ವ್ಯಾಖ್ಯಾನಿಸಿದ್ದಾರೆ.

ಇಂದು ಆಮ್ಲಜನಕ ಜನರು ಮನೆಯಲ್ಲೇ ಹೊಂದಬೇಕಾದ ಸೌಲಭ್ಯ. ಆದರೆ, ಆಸ್ಪತ್ರೆಯಲ್ಲೇ ಆಮ್ಲಜನಕ ಇಲ್ಲ ಎಂದು ಹೇಳಿದರೆ, ಅದು ಗಂಭೀರ ವಿಚಾರ. ಇದು ರಾಜ್ಯ ಸರಕಾರದ ಅಸಮರ್ಥತೆ ಬಿಂಬಿಸುತ್ತದೆ ಎಂದು ಅವರು ಹೇಳಿದ್ದಾರೆ.

 

Comments (Click here to Expand)