varthabharthi

ಕರಾವಳಿ

ಬಾವಿಗೆ ಹಾರಿ ಯುವಕ ಆತ್ಮಹತ್ಯೆ

ವಾರ್ತಾ ಭಾರತಿ : 12 Aug, 2017

ಬೈಂದೂರು, ಆ.12: ಬಾಗಿಲು ತೆಗೆಯುವಲ್ಲಿ ವಿಳಂಬ ಮಾಡಿದರೆಂಬ ಕೋಪದಿಂದ ಹೆತ್ತವರ ಮೇಲೆ ಹಲ್ಲೆ ನಡೆಸಿದ ಯುವಕನೊಬ್ಬ ಬಳಿಕ ಇದರಿಂದ ಗಾಬರಿಗೊಂಡು ಮನೆಯ ಸಮೀಪದ ಬಾವಿಗೆ ಹಾರಿ ಆತ್ಮಹತ್ಯೆ ಮಾಡಿಕೊಂಡ ಘಟನೆ ಕುಂದಾಪುರ ತಾಲೂಕು ಬಿಜೂರಿನ ಸಾಲಿಮಕ್ಕಿ ದೀಟಿ ದೇವಸ್ಥಾನದ ಬಳಿಯ ಉಡುಪರಡಿಯಿಂದ ವರದಿಯಾಗಿದೆ.

 ಮಂಜು ಪೂಜಾರಿ ಎಂಬವರ ಮಗ ರಾಘವ ಪೂಜಾರಿ (33) ಕಳೆದ ಆ.10ರಂದು ಧರ್ಮಸ್ಥಳಕ್ಕೆ ತೆರಳಿದ್ದು 12ರಂದು ಮುಂಜಾನೆ 5:00ಗಂಟೆಗೆ ಬಂದು ಬಾಗಿಲು ಬಡಿದಾಗ, ಮಲಗಿದ್ದ ಮನೆಯವರು ಬಾಗಿಲು ತೆರೆಯಲು ವಿಳಂಬ ಮಾಡಿದರೆಂಬ ಕೋಪದಿಂದ ತಂದೆ-ತಾಯಿಯರಿಗೆ ಕೈಗೆ ಸಿಕ್ಕಿದ ಮರದ ಸೊಂಟೆಯಿಂದ ಹೊಡೆದಿದ್ದು ಇದರಿಂದ ಅವರ ತಲೆಯಲ್ಲಿ ರಕ್ತ ಬಂದಿದ್ದನ್ನು ನೋಡಿ ಗಾಬರಿಗೊಂಡು ಮನೆಯಿಂದ ಹೊರಹೋದ ರಾಘವ , ಮನೆಯ ಪಕ್ಕದ ಬಾವಿಗೆ ಹಾರಿ ಆತ್ಮಹತ್ಯೆ ಮಾಡಿಕೊಂಡರೆನ್ನಲಾಗಿದೆ. ಈ ಬಗ್ಗೆ ಬೈಂದೂರು ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

 

Comments (Click here to Expand)